ಮಾಗಡಿ ಕುಡಿಯುವ ನೀರಿಗಾಗಿ ಅಮೃತ 2.0 ಯೋಜನೆಗೆ ಚಾಲನೆ

KannadaprabhaNewsNetwork |  
Published : Jan 08, 2025, 12:17 AM IST
7ಮಾಗಡಿ 2 : ಮಾಗಡಿ ಪಟ್ಟಣದ 14ನೇ ವಾರ್ಡ್ನಗವಿಗಂಗಾಧರೇಶ್ವರದೇವಸ್ಥಾನದ ಹಿಂಭಾಗದಲ್ಲಿಅಮೃತ್ 2.0 ಯೋಜನೆಗೆ ಪುರಸಭೆಅಧ್ಯಕ್ಷೆರಮ್ಯಾ ನರಸಿಂಹಮೂರ್ತಿ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಮಾಗಡಿ ಪಟ್ಟಣದಲ್ಲಿ ಕುಡಿಯುವ ನೀರು ಸಮಸ್ಯೆಯನ್ನು ಪರಿಹರಿಸಲು ಅಮೃತ್ 2 ಯೋಜನೆ ಸಹಕಾರಿಯಾಗಲಿದೆ. 5 ಲಕ್ಷ ಲೀಟರ್ ಸಾಮರ್ಥ್ಯವನ್ನು ಹೊಂದಿರುವ ನೀರಿನ ಟ್ಯಾಂಕರ್‌ ಅನ್ನು ಮೂರು ಕಡೆ ನಿರ್ಮಿಸಲು ಇಂದು ಚಾಲನೆ ನೀಡಿದೆ. ಮಂಚನಬೆಲೆ ಜಲಾಶಯದಿಂದ ನೀರನ್ನು ನೀರನ್ನು ತರತ್ತಿದ್ದು ಅವಶ್ಯಕತೆ ಇರುವ ಕಡೆ ಪೈಪ್ ಲೈನ್ ಕಾಮಗಾರಿಗಳನ್ನು ನಡೆಸಿ ಸುಮಾರು ಆರು ತಿಂಗಳ ಒಳಗೇ ಕಾಮಗಾರಿ ಮುಗಿಯಲಿದೆ .

ಮಾಗಡಿ: ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಸುಮಾರು 13.32 ಕೋಟಿ ರು. ವೆಚ್ಚದ ಅಮೃತ 2.0 ಯೋಜನೆಗೆ ಪುರಸಭಾ ಅಧ್ಯಕ್ಷೆ ರಮ್ಯ ನರಸಿಂಹಮೂರ್ತಿ ಚಾಲನೆ ನೀಡಿದರು.

ಪಟ್ಟಣದ 14ನೇ ವಾರ್ಡ್‌ನ ಗವಿಗಂಗಾಧರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಸೋಮವಾರ ಅಮೃತ್ 2.0 ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹೆಚ್ಚಿನ ಸಹಕಾರದಿಂದ ಅಮೃತ್ 2.0 ಯೋಜನೆಯಡಿ ಮಾಗಡಿ ಪಟ್ಟಣಕ್ಕೆಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ನೀರು ಸರಬರಾಜು ಕಲ್ಪಿಸುವ ದೃಷ್ಟಿಯಿಂದ ಸುಮಾರು ₹13.32 ಕೋಟಿ ಅನುದಾನದಲ್ಲಿ ಸುಧಾರಿತ ನೀರು ಸರಬರಾಜು ವ್ಯವಸ್ಥೆ ಅಡಿಯಲ್ಲಿ ವಾರ್ಡ್ ನಂ 14, ಹೊಸಪೇಟೆ ಪಂಪ್ ಹೌಸ್ ಹಾಗೂ ಎನ್.ಇ.ಎಸ್ ಹರ್ಬಲ್ ಪಾರ್ಕ್ ಬಳಿ ಮೂರು ಟ್ಯಾಂಕ್‌ಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಬೃಹತ್‌ ಯೋಜನೆಯಿಂದ ಇನ್ನು ಮುಂದೆ ಪಟ್ಟಣದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸಹಾಯವಾಗಲಿದೆ ಎಂದರು.

ಪುರಸಭಾ ಇಂಜಿನಿಯರ್ ಪ್ರಶಾಂತ್ ಮಾತನಾಡಿ, ಮಾಗಡಿ ಪಟ್ಟಣದಲ್ಲಿ ಕುಡಿಯುವ ನೀರು ಸಮಸ್ಯೆಯನ್ನು ಪರಿಹರಿಸಲು ಅಮೃತ್ 2 ಯೋಜನೆ ಸಹಕಾರಿಯಾಗಲಿದೆ. 5 ಲಕ್ಷ ಲೀಟರ್ ಸಾಮರ್ಥ್ಯವನ್ನು ಹೊಂದಿರುವ ನೀರಿನ ಟ್ಯಾಂಕರ್‌ ಅನ್ನು ಮೂರು ಕಡೆ ನಿರ್ಮಿಸಲು ಇಂದು ಚಾಲನೆ ನೀಡಿದೆ. ಮಂಚನಬೆಲೆ ಜಲಾಶಯದಿಂದ ನೀರನ್ನು ನೀರನ್ನು ತರತ್ತಿದ್ದು ಅವಶ್ಯಕತೆ ಇರುವ ಕಡೆ ಪೈಪ್ ಲೈನ್ ಕಾಮಗಾರಿಗಳನ್ನು ನಡೆಸಿ ಸುಮಾರು ಆರು ತಿಂಗಳ ಒಳಗೇ ಕಾಮಗಾರಿ ಮುಗಿಯಲಿದೆ ಎಂದು ಹೇಳಿದರು.

ಈ ಅಮೃತ್ 2.0 ಯೋಜನೆಗೆ ಕೇಂದ್ರ ಸರ್ಕಾರದ ಶೇ. 60ರಷ್ಟು ಅನುದಾನ ಮತ್ತು ರಾಜ್ಯ ಸರ್ಕಾರದ ಶೇ. 40 ರಷ್ಟು ಅನುದಾನವನ್ನು ವಿನಿಯೋಗಿಸಲಾಗುತ್ತಿದೆ.

ಈ ವೇಳೆ ಪುರಸಭಾ ಮುಖ್ಯಾಧಿಕಾರಿ ಶಿವರುದ್ರಯ್ಯ, ಉಪಾಧ್ಯಕ್ಷ ರಿಯಾಜ್‌ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ರೆಹಮತ್, ಅನಿಲ್ ಕುಮಾರ್, ಹೇಮಲತಾ, ಭಾಗ್ಯಮ್ಮ, ರೂಪೇಶ್, ದೇವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ