
ಕನ್ನಡಪ್ರಭ ವಾರ್ತೆ ಹುಮನಾಬಾದ್
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ 165.14 ಕೋಟಿ ರು. ವೆಚ್ಚದ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ.40, ಉಳಿದ ಶೇ.10 ರಷ್ಟು ವಿವಿಧ ಯೋಜನೆ ಅನುದಾನದ ಉಳಿತಾಯದಿಂದ ಮುಂದಿನ 30 ವರ್ಷಕ್ಕೆ ಈ ಯೋಜನೆ ಜಾರಿಗೆ ತರಲಾಗಿದೆ.
ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ತೊಂದರೆಯಾಗದಂತೆ ಕಾಮಗಾರಿ ಮುಗಿದ ಕೂಡಲೇ ಅಗೆದಿರುವ ರಸ್ತೆಗಳನ್ನು ಪುನಃ ರೀಪೇರಿ ಮಾಡುವಂತೆ ಎಚ್ಚರಿಕೆ ವಹಿಸಬೇಕು ಎಂದರು.ಮೆಸ್ಸರ್ಸ್ ಕೆವಾಡಿಯಾ ಕನ್ಸ್‌ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ಅಹಮದಾಬಾದ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಕುರಿತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಲಾಗಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಮುಕ್ತಾಯ ಮಾಡಬೇಕು. ₹2.5 ಕೋಟಿ ಐದು ವರ್ಷ ನಿರ್ವಹಣೆಗಾಗಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾಮಗಾರಿ ಸಂದರ್ಭದಲ್ಲಿ ಬದಲಾವಣೆ ಅನಿವಾರ್ಯತೆ ಬಂದಲ್ಲಿ ಅದಕ್ಕೆ ತಗಲುವ ಖರ್ಚು ಕೆಕೆಆರ್‌ಡಿಬಿಯಿಂದ ಮಂಜೂರು ಮಾಡಲಾಗುವುದು. ಪುರಸಭೆ ಕೈಗೊಳ್ಳುವ ಅಭಿವದ್ಧಿ ಯೋಜನೆಗಳಿಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ ಅವರು, ಸಭೆಯಲ್ಲಿ ಗೈರಾಗಿದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿ, ಶಾಶ್ವತ ಕುಡಿಯುವ ನೀರಿನ ಯೋಜನೆಯ ಮೂಲಕ ಜನರಿಗೆ ಮೂಲ ಸೌಕರ್ಯಗಳು ಕಲ್ಪಿಸುವ ಕುರಿತು ಇಚ್ಛಾಶಕ್ತಿ ಕೊರತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿಟಗುಪ್ಪ ಪುರಸಭೆ ಮುಖ್ಯಾಧಿಕಾರಿ ಬಾಬಾ, ಹುಮನಾಬಾದ್ ಪುರಸಭೆ ಮುಖ್ಯಾಧಿಕಾರಿ ವನಿತಾ ಚವ್ಹಾಣ, ಹಳ್ಳಿಖೇಡ (ಬಿ) ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ನಿಂಗಪ್ಪ ಹದನೂರ, ಪುರಸಭೆ ಸದಸ್ಯರಾದ ರಮೇಶ ಕಲ್ಲೂರ, ಸುನೀಲ್ (ಕಾಳಪ್ಪ) ಪಾಟೀಲ್, ವಿಜಯಕುಮಾರ ದುರ್ಗದ, ಧನಲಕ್ಷ್ಮಿ ಗೊಡಕೆ ಇದ್ದರು.