ರೈತರು ರಸ ಗೊಬ್ಬರ ಖರೀದಿಗೆ ಬಂದಿದೆ ಆ್ಯಪ್

KannadaprabhaNewsNetwork |  
Published : Nov 17, 2026, 01:45 AM IST
ರಸ ಗೊಬ್ಬರ ಖರೀದಿಗೆ ಇನ್ಮುಂದೆ ಆ್ಯಪ್ | Kannada Prabha

ಸಾರಾಂಶ

‘ಫರ್ಟಿಲೈಸರ್ ಸೇಲ್ ಅಪ್ಲಿಕೇಷನ್ ಸಿಸ್ಟಮ್’ (ಎಫ್‌ಎಸ್‌ಎಎಸ್) ಎಂಬ ನೂತನ ವ್ಯವಸ್ಥೆಯಲ್ಲಿ ‘ಫ್ರೇಮ್‌ವರ್ಕ್ ಫಾರ್ ಫರ್ಟಿಲೈಸರ್ ಸೇಲ್’ ಆ್ಯಪ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ.

ಡಿ.1ರಿಂದ ಚಾ.ನಗರ ಜಿಲ್ಲೆಯಲ್ಲೂ ಬುಕ್ಕಿಂಗ್ ಶುರು

‘ಫ್ರೇಮ್‌ವರ್ಕ್ ಫಾರ್ ಫರ್ಟಿಲೈಸರ್ ಸೇಲ್’ ಆ್ಯಪ್ ಬಿಡುಗಡೆ

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಜಿಲ್ಲೆಯ ರೈತರು ತಾವಿರುವ ಊರಿಂದಲೇ ಮೊಬೈಲ್ (ಆಂಡ್ರಾಯ್ಡ್) ಮೂಲಕ ತಮಗೆ ಬೇಕಾದ ರಸಗೊಬ್ಬರ ಕಾಯ್ದಿರಿಸುವ ನೂತನ ವ್ಯವಸ್ಥೆಯು ಬರುವ ಡಿ.೧ರಿಂದ ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಶುರುವಾಗಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ಜಾರಿಯಾಗಿದ್ದು, ಬರುವ ಡಿ.೧ರಿಂದ ಚಾಮರಾಜನಗರದಲ್ಲೂ ಆ್ಯಪ್ ಮೂಲಕ ಗೊಬ್ಬರ ಖರೀದಿ ಮಾಡಬಹುದಾಗಿದೆ. ಕೇಂದ್ರ ಸರ್ಕಾರವು ‘ಫರ್ಟಿಲೈಸರ್ ಸೇಲ್ ಅಪ್ಲಿಕೇಷನ್ ಸಿಸ್ಟಮ್’ (ಎಫ್‌ಎಸ್‌ಎಎಸ್) ಎಂಬ ನೂತನ ವ್ಯವಸ್ಥೆ ಜಾರಿಗೊಳಿಸಿ ರಸಗೊಬ್ಬರ ಖರೀದಿ ಪ್ರಕ್ರಿಯೆ ಸರಳಗೊಳಿಸಲು ಮುಂದಾಗಿದೆ.

‘ಫರ್ಟಿಲೈಸರ್ ಸೇಲ್ ಅಪ್ಲಿಕೇಷನ್ ಸಿಸ್ಟಮ್’ (ಎಫ್‌ಎಸ್‌ಎಎಸ್) ಎಂಬ ನೂತನ ವ್ಯವಸ್ಥೆಯಲ್ಲಿ ‘ಫ್ರೇಮ್‌ವರ್ಕ್ ಫಾರ್ ಫರ್ಟಿಲೈಸರ್ ಸೇಲ್’ ಆ್ಯಪ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ. ರಾಜ್ಯದ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಳೆದ ಜೂನ್‌ನಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಬಿಡುಗಡೆ ಮಾಡಲಾಗಿತ್ತು. ಚಿತ್ರದುರ್ಗ ಹಾಗೂ ತುಮಕೂರಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕ ಕಾರಣ, ಇದೀಗ ಚಾಮರಾಜನಗರ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಖಚಿತಪಡಿಸಿದೆ.ರೈತರಿಗೆ ಏನು ಅನುಕೂಲ?

ರೈತರು ತಮ್ಮ ಕೆಲಸ ಬಿಟ್ಟು ರಸಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವುದು ತಪ್ಪಲಿದೆ. ರೈತರು ತಮ್ಮ ಮೊಬೈಲ್ ಆ್ಯಪ್ ಮೂಲಕವೇ ಬುಕ್ ಮಾಡಿದರೆ ಗೊಬ್ಬರ ಕಾಯ್ದಿರಿಸಲಾಗುತ್ತದೆ.

ಬಳಿಕ ನಿಗದಿತ ದಿನದಂದು ರೈತರು ಸಮೀಪದ ರಸಗೊಬ್ಬರದ ಅಂಗಡಿಗೆ ಹೋಗಿ ಗೊಬ್ಬರ ಖರೀದಿಸಬಹುದು. ಯೂರಿಯಾ ಮತ್ತು ಗೊಬ್ಬರಗಳ ದುರ್ಬಳಕೆ, ಕಾಳಸಂತೆ ಮಾರಾಟಕ್ಕೆ ಈ ವ್ಯವಸ್ಥೆಯಿಂದ ಕಡಿವಾಣ ಬೀಳಲಿದೆ.ಗೊಬ್ಬರ ಖರೀದಿ ಹೇಗೆ?

ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ್ಯಪ್‌ನಲ್ಲಿ ಆಧಾರ್ ಸಂಖ್ಯೆ ನಮೂದಿಸಿದರೆ ಹಿಡುವಳಿ ವಿಸ್ತೀರ್ಣ ಮಾಹಿತಿ ಲಭ್ಯವಾಗಲಿದೆ. ಕೃಷಿ ವಿಶ್ವವಿದ್ಯಾಲಯದ ಶಿಫಾರಸಿನ ಪ್ರಮಾಣದಂತೆ ಮುಂಗಡ ಕಾಯ್ದಿರಿಸಬಹುದು.

ಆಧಾರ್‌ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಗೆ ಒಟಿಪಿ ಬಂದ ಎರಡು-ಮೂರು ದಿನಗಳೊಳಗೆ ಗೊಬ್ಬರ ಖರೀದಿಸಬಹುದು. ಬುಕ್ಕಿಂಗ್ ಬಳಿಕ ಬರುವ ಕ್ಯೂಆರ್ ಕೋಡ್‌ನ್ನು ರಸಗೊಬ್ಬರ ಅಂಗಡಿಯವರು ಸ್ಕ್ಯಾನ್ ಮಾಡಿ ಗೊಬ್ಬರ ನೀಡುತ್ತಾರೆ. ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ. ರಸಗೊಬ್ಬರ ಕಾಯ್ದಿರಿಸಲು ಕಾಮನ್ ಸರ್ವಿಸ್ ಸೆಂಟರ್ (ಸಿಎಸ್‌ಸಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಎಸಿಸಿಎಸ್), ಸಹಕಾರ ಸೊಸೈಟಿಗಳು, ರಸಗೊಬ್ಬರ ಅಂಗಡಿಗಳು, ಕೃಷಿ ಸಖಿಯರು ಸಹಾಯ ಮಾಡಲಿದ್ದಾರೆ. ಆಧಾರ್ ಮೂಲಕ ರಸಗೊಬ್ಬರ ಟ್ರ್ಯಾಕ್ ಮಾಡಲಿದ್ದು, ಗೊಬ್ಬರ ಹೆಚ್ಚುವರಿಯಾಗಿ ಖರೀದಿ ಮಾಡುವಂತಿಲ್ಲ. ಸರ್ಕಾರಳಿಗೂ ಅನುಕೂಲ:

ದೇಶದ ರೈತರಿಗೆ ಬೇಕಿರುವ ಗೊಬ್ಬರ ಬೇಡಿಕೆ ಈ ಆ್ಯಪ್ ವ್ಯವಸ್ಥೆಯಿಂದ ಸರ್ಕಾರಗಳಿಗೂ ತಿಳಿಯಲಿದೆ. ಈ ಯೋಜನೆಯಿಂದ ರಸಗೊಬ್ಬರ ಪೂರೈಕೆಗೂ ಅನುಕೂಲ. ಆಹಾರ ಭದ್ರತೆಗೂ ನೆರವಾಗಲಿದೆ.

ಪ್ರತಿ ವಹಿವಾಟು ಡಿಜಿಟಲೀಕರಣ ರೂಪವಾಗಲಿರುವ ಕಾರಣ ಪಾರದರ್ಶಕತೆ ಮತ್ತು ಮಾರಾಟದ ನಿಖರ ಲೆಕ್ಕೆ ಸಿಗಲಿದೆ. ಅರ್ಹ ರೈತರ ಮಾಹಿತಿ ಇರುವುದರಿಂದ ಅನಗತ್ಯ ವಿವಾದಗಳಿಗೆ ಕಡಿವಾಣ ಬೀಳಲಿದೆ.ಖರೀದಿ ಪ್ರಕ್ರಿಯೆ ಹೀಗೆ...

1) ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ್ಯಪ್‌ನಲ್ಲಿ ಎಫ್‌ಐಡಿ ಅಥವಾ ಆಧಾರ್ ನಂಬರ್ ಹಾಕಿದರೆ ಹಿಡುವಳಿ ವಿಸ್ತೀರ್ಣ ಮಾಹಿತಿ ಸಿಗಲಿದೆ.2) ಕೃಷಿ ವಿಶ್ವವಿದ್ಯಾಲಯದ ಶಿಫಾರಸಿನ ಪ್ರಮಾಣದಂತೆ ಮುಂಗಡ ಕಾಯ್ದಿರಿಸಬಹುದು. ಆಧಾರ್ ಲಿಂಕ್ ಆದ ಮೊಬೈಲ್ ನಂಬರ್‌ಗೆ ಒಟಿಪಿ ಬಂದ ಎರಡು-ಮೂರು ದಿನಗಳೊಳಗೆ ಗೊಬ್ಬರ ಸಿಗಲಿದೆ.3) ಬುಕ್ಕಿಂಗ್ ಆದ ಬಳಿಕ ಬರುವ ಕ್ಯೂಆರ್ ಕೋಡ್‌ನ್ನು ಗೊಬ್ಬರದ ಅಂಗಡಿಯವರು ಸ್ಕ್ಯಾನ್ ಆದ ಬಳಿಕ ಗೊಬ್ಬರ ಕೊಡಲಿದ್ದಾರೆ. ಯುಪಿಐ ಮೂಲಕ ಹಣ ಪಾವತಿಸಬಹುದು.4) ಬಗರ್ ಹುಕುಂ ಸಾಗುವಳಿದಾರರೂ ಗೊಬ್ಬರ ಸಿಗಲಿದೆ.‘ಕೇಂದ್ರ ಸರ್ಕಾರದ ಫ್ರೇಮ್‌ವರ್ಕ್ ಫಾರ್ ಫರ್ಟಿಲೈಸರ್ ಸೇಲ್ ಆ್ಯಪ್ ಮೂಲಕ ರೈತರು ಆನ್‌ಲೈನ್ ಮೂಲಕ ರಸಗೊಬ್ಬರ ಖರೀದಿಸಬಹುದಾಗಿದೆ.-----ಕೋಟ್-------

ಈಗಾಗಲೇ ಅಧಿಕಾರಿಗಳು, ಸಿಬ್ಬಂದಿ ಹಾಗೂ ರಸಗೊಬ್ಬರ ಮಾರಾಟಗಾರರಿಗೆ ತರಬೇತಿ ನೀಡಲಾಗಿದೆ. ಪ್ರಚಾರದ ಮೂಲಕ ರೈತರಿಗೂ ಮಾಹಿತಿ ನೀಡಲಾಗಿದೆ. ಅಲ್ಲದೆ ಪ್ರಚಾರ ಮಾಡಲಾಗುತ್ತಿದೆ.

-ಎಸ್.ಶಶಿಧರ್, ಕೃಷಿ ಸಹಾಯಕ ನಿರ್ದೇಶಕರು

------------೧೬ಜಿಪಿಟಿ೧

ಗುಂಡ್ಲುಪೇಟೆ ತಾಲೂಕಿನ ಎಲ್ಲಾ ರಸಗೊಬ್ಬರ ಮಾರಾಟಗಾರರಿಗೆ ಎಫ್‌ಎಫ್‌ಎಸ್ ಬಗ್ಗೆ ಕೃಷಿ ಜಂಟಿ ನಿರ್ದೇಶಕ ಬಾನು ಪ್ರಕಾಶ್ ತರಬೇತಿ ಹಮ್ಮಿಕೊಂಡಿದ್ದರು.೧೬ಜಿಪಿಟಿ೨

ರಸಗೊಬ್ಬರ ಖರೀದಿಗೆ ಆ್ಯಪ್.೧೬ಜಿಪಿಟಿ೩

ಎಸ್.ಶಶಿಧರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮ ಉಳಿದರೆ ಸಮಾಜದ ಉಳಿವು
ಅವ್ಯವಸ್ಥೆ ಕಂಡು ಗ್ರಂಥಪಾಲಕನಿಗೆ ತರಾಟೆ