ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದ ಎಸ್.ಎಸ್.ವಿದ್ಯಾ ಸಂಸ್ಥೆಯ ಮೈದಾನದಲ್ಲಿ ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ವಿಜಯಪುರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಎಚ್.ಎಸ್.ಪಾಟೀಲ ಸ್ವತಂತ್ರ ಪಪೂ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಪಪೂ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದ ಬಹುಮಾನ ವಿತರಣೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ಪಠ್ಯೇತರ ಚಟುವಟಿಕೆಯೊಂದಿಗೆ ಕ್ರೀಡಾ ಆಸಕ್ತಿ ಬೆಳೆಸಿಕೊಳ್ಳಿ. ವ್ಯವಸ್ಥಿತ ಆಸಕ್ತಿಯನ್ನು ಬೆಳೆಸಿಕೊಂಡು ಸದೃಢ ದೇಹ ಹೊಂದಬೇಕು ಎಂದು ಸಲಹೆ ನೀಡಿದರು.
ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಆರೋಗ್ಯ ದೃಷ್ಟಿ ಒಳ್ಳೆಯದಾಗಿದ್ದರೆ ಕ್ರೀಡೆ ಎಂಬುದು ಒಳ್ಳೆಯದಾಗಿ ಪರಿಣಮಿಸಲಿದೆ. ಅಂತಹ ಕ್ರೀಡಾ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದರೊಂದಿಗೆ ಕ್ರೀಡಾಕೂಟದ ಕೇಂದ್ರ ಬಿಂದು ಎಚ್.ಎಸ್.ಪಾಟೀಲ ಅವರ ಸೇವಾ ಕಾರ್ಯ ಮಹತ್ವದ್ದಾಗಿದೆ. ರಾಜ್ಯಮಟ್ಟದ ವಾಲಿಬಾಲ್ ಕ್ರೀಡೆ ರಾಷ್ಟ್ರಮಟ್ಟದ ಕ್ರೀಡೆ ಎಂಬಂತೆ ಭಾಸವಾಯಿತು. ಕ್ರೀಡಾಪಟುಗಳು ಆಸಕ್ತಿಯಿಂದ ಆಟವಾಡಿದ್ದಾರೆ ಎಂದರು.ಅಸ್ಕಿ ಫೌಡೇಷನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ತಾಳಿಕೋಟೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನವೂ ರಾಜ್ಯಮಟ್ಟದಲ್ಲಿ ಹೆಸರಾಯಿತು, ವಾಲಿಬಾಲ್ ಕ್ರೀಡಾಕೂಟವು ಆಸಕ್ತಿ ಮೂಡಿಸಿದೆ. ಎಚ್.ಎಸ್.ಪಾಟೀಲ, ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ ಹಾಗೂ ಎಲ್ಲ ನಾಗರಿಕರು ಒಗ್ಗೂಡಿ ಕ್ರೀಡಾಕೂಟದ ಯಶಸ್ವಿಗೆ ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಮಾತನಾಡಿದರು. ಶಿಕ್ಷಕ ಸಾಹೇಬಗೌಡ ಬಿರಾದಾರ ಮಾತನಾಡಿದರು. ಕಲಕೇರಿಯ ಷ.ಬ್ರ.ಗುರುಮಡಿವಾಳೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಸಹಾಯ ಸಹಕಾರ ನೀಡಿದವರಿಗೆ, ಉಪನ್ಯಾಸಕರಿಗೆ, ಶಿಕ್ಷಕರಿಗೆ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಸಂತೋಷ ಪಾಟೀಲ, ಕಿರಣ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು. ಶಿಕ್ಷಕ ಸಂತೋಷ ಜಾಮಗೊಂಡಿ ಸ್ವಾಗತಿಸಿದರು. ಬಿ.ಐ.ಹಿರೇಹೊಳಿ ನಿರೂಪಿಸಿದರು. ಎ.ಬಿ.ಇರಾಜ ವಂದಿಸಿದರು.------------