ಅವಿವಾಹಿತರಿಗೆ ಕಂಕಣಭಾಗ್ಯ ಕಲ್ಪಿಸಲು ಪ್ರಯತ್ನ

KannadaprabhaNewsNetwork |  
Published : Mar 25, 2026, 03:00 AM IST
ಹುಕ್ಕೇರಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ಚಲವಾದಿ ಸಮುದಾಯದ ಯುವಕ-ಯುವತಿಯರಿಗೆ ಬಾಳಸಂಗಾತಿ ಆಯ್ಕೆಗೆ ಅತ್ಯುತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ವಧು ವರರ ಸಮ್ಮೇಳನ ಆಯೋಜಿಸಲಾಗಿದೆ. ಇದರೊಂದಿಗೆ ತ್ವರಿತಗತಿಯಲ್ಲಿ ಕಂಕಣಭಾಗ್ಯ ಅವಕಾಶ ಮಾಡಿಕೊಡುವುದು ಈ ಸಮ್ಮೇಳನದ ಉದ್ದೇಶವಾಗಿದೆ ಎಂದು ಗೃಹರಕ್ಷಕ ದಳದ ನಿವೃತ್ತ ಜಿಲ್ಲಾ ಕಮಾಂಡಂಟ್ ಡಾ.ಅರವಿಂದ ಘಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಚಲವಾದಿ ಸಮುದಾಯದ ಯುವಕ-ಯುವತಿಯರಿಗೆ ಬಾಳಸಂಗಾತಿ ಆಯ್ಕೆಗೆ ಅತ್ಯುತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ವಧು ವರರ ಸಮ್ಮೇಳನ ಆಯೋಜಿಸಲಾಗಿದೆ. ಇದರೊಂದಿಗೆ ತ್ವರಿತಗತಿಯಲ್ಲಿ ಕಂಕಣಭಾಗ್ಯ ಅವಕಾಶ ಮಾಡಿಕೊಡುವುದು ಈ ಸಮ್ಮೇಳನದ ಉದ್ದೇಶವಾಗಿದೆ ಎಂದು ಗೃಹರಕ್ಷಕ ದಳದ ನಿವೃತ್ತ ಜಿಲ್ಲಾ ಕಮಾಂಡಂಟ್ ಡಾ.ಅರವಿಂದ ಘಟ್ಟಿ ಹೇಳಿದರು.ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಛಲವಾದಿ ವಧು ವರರ ಸಮ್ಮೇಳನದಲ್ಲಿ ಮಾತನಾಡಿದ ಅವರು, ವಿವಾಹ ಪೂರ್ವದಲ್ಲಿ ಮಧ್ಯವರ್ತಿಗಳ ದುಂದುವೆಚ್ಚ ತಪ್ಪಿಸುವುದು, ಸಮಾಜದ ಬಾಂಧವ್ಯ ಬಲಪಡಿಸಲು ಇಂತಹ ಸಮ್ಮೇಳನಗಳು ಅಗತ್ಯವಿದೆ ಎಂದರು.ಯುವಜನರು ತಮ್ಮ ಜೀವನದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಹಿರಿಯರ ಮಾರ್ಗದರ್ಶನ ಸ್ವೀಕರಿಸಬೇಕು. ವಧು-ವರರ ಸಮಾವೇಶ ಮಾಡುವುದರಿಂದ ಛಲವಾದಿ ಸಮಾಜದ ವಧು-ವರರಿಗೆ ಕಲ್ಯಾಣ ಮಾಡುವುದರ ಜತೆ ಸಮಾಜವನ್ನು ಒಗ್ಗೂಡಿಸಬಹುದು. ಸಮಾಜದ ಯುವಕರು ಶಿಕ್ಷಣ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿ ಮೆರೆಯಬೇಕು ಎಂದು ಸಲಹೆ ನೀಡಿದರು.ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ಉದ್ಯೋಗಕ್ಕಾಗಿ ದೂರದ ಪಟ್ಟಣಗಳಿಗೆ ಹೋಗುತ್ತಿದ್ದಾರೆ. ಒತ್ತಡದ ಬದುಕಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ವರ, ವಧು ಹುಡುಕುವುದು ಕಷ್ಟವಾಗಿದೆ. ಇಂತಹ ಸಮಾವೇಶ ಅವರಿಗೆ ಅನುಕೂಲವಾಗಲಿದೆ. ಸಮಾವೇಶ ಯಶಸ್ವಿಗೆ ಪ್ರತಿಯೊಬ್ಬರೂ ಸಹಕಾರ ನೀಡುತ್ತಿರುವುದು ಸಂತಸ ತಂದಿದೆ ಎಂದರು.ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಆರ್.ರುದ್ರಯ್ಯ ಮಾತನಾಡಿ, ಪಾಲಕರು ಮಕ್ಕಳಿಗೆ ವಧು-ವರನನ್ನು ಹುಡುಕಲು ಕಷ್ಟ ಪಡುತ್ತಾರೆ. ಆದರೆ, ಈ ಸಮಾವೇಶದಲ್ಲಿ ಸುಲಭವಾಗಿ ವಧು-ವರನನ್ನು ಹುಡುಕಿಕೊಳ್ಳಬಹುದು. ಪರಸ್ಪರ ಪರಿಚಯ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ತಿಳಿಸಿದರು.ನಿವೃತ್ತ ಪೋಸ್ಟ್ ಮಾಸ್ಟರ್ ಗವಿಸಿದ್ದಪ್ಪ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಸಿದ್ದಣ್ಣ ಮ್ಯಾಗೇರಿ, ಕನಕಮೂರ್ತಿ ಚಲವಾದಿ, ಪಪಂ ಸದಸ್ಯೆ ಸರಸ್ವತಿ ಇಟ್ಟಂಗಿ, ಚಲವಾದಿ ಚಿಂತಕರ ವೇದಿಕೆ ಜಿಲ್ಲಾಧ್ಯಕ್ಷ ಸೋಮಣ್ಣ ಚಲವಾದಿ, ಮುಖಂಡರಾದ ಕೃಷ್ಣ ಇಟ್ಟಂಗಿ, ಸಣ್ಣ ಕನಕಪ್ಪ ಚಲವಾದಿ, ಛತ್ರಪ್ಪ ಚಲವಾದಿ, ಅನಿಲ ಬ್ಯಾಗರ್, ಹನುಮಂತಪ್ಪ ಚಲವಾದಿ, ನಿಂಗಪ್ಪ ಕಾಳೆ, ರಘು ಚಲವಾದಿ, ಸುರೇಶ ಬಳಗಾನೂರು, ಶ್ರೀಧರ ಬನ್ನಿಕೊಪ್ಪ, ಮಂಜು ದೊಡ್ಡಮನಿ, ಮಾರ್ಕಂಡಪ್ಪ ಬೆಲ್ಲದ, ಲಕ್ಷ್ಮಣ ಕಾಳೆ ಮತ್ತಿತರರು ಉಪಸ್ಥಿತರಿದ್ದರು.ಸಮ್ಮೇಳನದಲ್ಲಿ ವಧು-ವರರ ಪರಿಚಯ ನಡೆಯಿತು. ವಧು-ವರರು, ಪೋಷಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ
ಇಂದು ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ವಿಸ್ತರಿತ ಕಟ್ಟಡ ಉದ್ಘಾಟನೆ