ಹುಬ್ಬಳ್ಳಿ:
ಗಾಣಿಗ ಸಮಾಜದಲ್ಲಿ ಶೈಕ್ಷಣಿಕ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಮ್ಯಾರಥಾನ್ ಪಟು ಯೋಗೀಂದ್ರ ಮಾದಪ್ಪ ಹೇಳಿದರು.ಇಲ್ಲಿನ ಬ್ಯಾಂಕರ್ಸ್ ಭವನದಲ್ಲಿ ಭಾನುವಾರ ನಡೆದ ಗಾಣಿಗರ ಹೆಜ್ಜೆಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ಜ್ಞಾನ ಯೋಗಿ ವಿದ್ಯಾ ಸಂಸ್ಥೆ ಉದ್ಘಾಟಿಸಿ ಅವರು ಮಾತನಾಡಿದರು. ಗಾಣಿಗ ಸಮಾಜವು ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಬೇಕು, ಯುವಕರು ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ಮಾಡಬೇಕಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವತ್ತ ಸಮಾಜದ ಮುಖಂಡರು ಪ್ರಯತ್ನಿಸಬೇಕು ಎಂದರು.
ಈ ವೇಳೆ ದೇಸಾಯಿ ಚಲನಚಿತ್ರದ ನಿರ್ಮಾಪಕ ಮಹಾಂತೇಶ ಚೊಳಚಗುಡ್ಡ ಮಾತನಾಡಿ, ಗಾಣಿಗ ಸಮಾಜದ ಏಳು ಬೀಳು ಹಾಗೂ ಗಾಣಿಗರ ಬದುಕು ಈ ಚಲನಚಿತ್ರದ ಪ್ರಮುಖವಾಗಿ ಅಂಶವಾಗಿದೆ. ಇಂದಿನ ಯುವಕರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ಚಲನಚಿತ್ರದಲ್ಲಿ ತೋರಿಸಲಾಗಿದೆ ಎಂದರು.ಕೊಪ್ಪಳ ಜಿಪಂ ಉಪಕಾರ್ಯದರ್ಶಿ ಮಹಾಂತೇಶ ತೊದಲಬಾಗಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಕತ್ತಲೆಯಲ್ಲಿದ್ದ ಸಮಾಜಕ್ಕೆ ಬೆಳಕು ನೀಡಿದ ಸಮಾಜ ಗಾಣಿಗ ಸಮಾಜದ ಕೊಡುಗೆಯಾಗಿದೆ. ಸಮಾಜದ ಕುರಿತಾದ ಗಾಣಿಗರ ಹೆಜ್ಜೆಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಗಾಣಿಗ ಸಮುದಾಯದ ಕುರಿತು ಡಾಕ್ಟರೆಟ್ ಪದವಿ ಪಡೆದ ಡಾ. ಮೇಘನಾ ಗಾಣಿಗೇರ, ಕೋಲಾರದ ಯೋಗಿ ಕಲ್ಲಿನಾಥ ಶ್ರೀಗಳು, ಆರ್.ಜಿ. ಪಾಟೀಲ, ಜಿ.ಎಸ್. ಚಬ್ಬಿ, ಕೆ.ಬಿ. ಕುರಹಟ್ಟಿ, ಅಶೋಕ ನವಲಗುಂದ, ವೈ.ಬಿ. ಕಡಕೋಳ, ಎಂ.ಎಸ್. ಗಾಣಿಗೇರ, ಡಾ. ನಿರ್ಮಲಾ, ಡಾ. ಮೇಘನಾ ಗಾಣಿಗೇರ ಮಾತನಾಡಿದರು.ಈ ವೇಳೆ ಗಾಣಿಗ ಸಮಾಜದಲ್ಲಿನ ಪ್ರತಿಭೆಗಳಿಗೆ ಹಾಗೂ ಸಮಾಜಕ್ಕಾಗಿ ಶ್ರಮಿಸಿದ ಮಹನೀಯರಿಗೆ ಗಾಣಿಗ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಸವರಾಜ ಪುರದಗುಡಿ, ಈರಪ್ಪ ತೇಲಿ, ಮಹಾಂತೇಶ ಚೊಳಚಗುಡ್ಡ, ಶರಣಪ್ಪ ಗೌಡ ಕೆಂಪೇಗೌಡರ, ಮರಿಗೌಡ ವೀರನಗೌಡ, ಬಸವರಾಜ ಗದ್ದಿಗೌಡ್ರ ರಮೇಶ ಉಟಗಿ, ಅಶೋಕ ಮಜ್ಜಿಗುಡ್ಡ, ಕೆ.ಎಂ. ಗದಗೇರಿ ಸೇರಿದಂತೆ ಹಲವರಿದ್ದರು.