ದೇಶದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆ: ಕಾಗೇರಿ

KannadaprabhaNewsNetwork |  
Published : Apr 18, 2024, 02:23 AM IST
ಕಾಗೇರಿ ಮಾತನಾಡಿದರು | Kannada Prabha

ಸಾರಾಂಶ

ಮೋದಿಜಿ, ಯೋಗಿ ಆದಿತ್ಯನಾಥ ಅವರ ಪರಿಶ್ರಮದಿಂದ ಕಾನೂನು ತೊಡಕು ನಿವಾರಣೆ ಮಾಡಿ ರಾಮಮಂದಿರ ಭವ್ಯವಾಗಿ ನಿರ್ಮಾಣವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಹೊನ್ನಾವರ: ಇದು ದೇಶದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆ. ೫ ವರ್ಷ ದೇಶ ಸುಭದ್ರವಾಗಿರಲು ಮೋದಿಜಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಬೇಕು ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ವಿವಿಧ ಕಡೆ ಬುಧವಾರ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶದ ಗಡಿಗಳ ರಕ್ಷಣೆ ಮಾಡಲು, ಸೈನಿಕರಿಗೆ ನೈತಿಕ ಶಕ್ತಿ ನೀಡಲು, ಭಯೋತ್ಪಾದನೆ ಇಲ್ಲದಿರಲು, ಸಮಗ್ರ ಅಭಿವೃದ್ಧಿಗಾಗಿ ಮೋದಿಯವರ ಸರ್ಕಾರ ಬರಬೇಕು. ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಇರಲು ಮೋದಿ ಅಧಿಕಾರಕ್ಕೆ ಬರಬೇಕು ಎಂದರು.

ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಬಡವರಿಗೆ ಮೋದಿಯವರ ಕೊಡುಗೆಯನ್ನು ತಿಳಿಸಿ ಸಂಘಟನೆಯನ್ನು ಬಲಿಷ್ಠ ಮಾಡಬೇಕು. ಆ ಮೂಲಕ ಕಳೆದ ಬಾರಿಗಿಂತಲೂ ಅಧಿಕ ಮತಗಳಿಂದ ಲೀಡ್ ಬರುವಂತೆ ಕೆಲಸ ಮಾಡಬೇಕು ಎಂದರು.

ಮೋದಿಜಿ, ಯೋಗಿ ಆದಿತ್ಯನಾಥ ಅವರ ಪರಿಶ್ರಮದಿಂದ ಕಾನೂನು ತೊಡಕು ನಿವಾರಣೆ ಮಾಡಿ ರಾಮಮಂದಿರ ಭವ್ಯವಾಗಿ ನಿರ್ಮಾಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ, ಮಂಜುನಾಥ ನಾಯ್ಕ, ಎಂ.ಜಿ. ನಾಯ್ಕ, ಸುಬ್ರಾಯ ವಾಳ್ಕೆ, ಹೇಮಂತ್ ಗಾವಂಕರ್, ವಿನೋದ್ ನಾಯ್ಕ, ಟಿ.ಟಿ. ನಾಯ್ಕ, ಗಣಪತಿ ಗೌಡ, ಮೂರ್ತಿ ಹೆಗಡೆ ಇತರರು ಇದ್ದರು.‌7 ನಾಮಪತ್ರ ಸಲ್ಲಿಕೆ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರಗಳ ಸಲ್ಲಿಕೆಗೆ ಮೂರನೇ ದಿನವಾದ ಮಂಗಳವಾರ ಒಟ್ಟೂ 7 ನಾಮಪತ್ರಗಳು ಸಲ್ಲಿಕೆಯಾಗಿವೆ.

ಪಕ್ಷೇತರ ಅಭ್ಯರ್ಥಿ ರೂಪಾನಾಯ್ಕ ಮತ್ತು ರಾಜಶೇಖರ ಹಿಂಡಲಗಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಈ ಮೊದಲ ನಾಮಪತ್ರ ಸಲ್ಲಿಸಿದ್ದ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಗಣಪತಿ ಹೆಗಡೆ, ಕೆಆರ್‌ಎಸ್ ಪಕ್ಷದ ವಿನಾಯಕ ನಾಯ್ಕ, ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಾಜಿ ಪಾಟೀಲ್, ನಿರಂಜನ್ ಸರದೇಸಾಯಿ, ಕೃಷ್ಣ ಹನುಮಂತಪ್ಪ ಬಳಿಗಾರ್ ಮತ್ತೊಮ್ಮೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು. ಜಿಲ್ಲೆಯಲ್ಲಿ ಇದುವರೆಗೆ 12 ಅಭ್ಯರ್ಥಿಗಳಿಂದ ಒಟ್ಟೂ 21 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರಗಳ ಸಲ್ಲಿಕೆಗೆ ಏ. 19 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ