ಸರ್ವರೂ ಸುಶಿಕ್ಷಿತರಾದಾಗ ಸಮ ಸಮಾಜ ನಿರ್ಮಾಣ : ಶಾಸಕ ತಮ್ಮಯ್ಯ

KannadaprabhaNewsNetwork |  
Published : Mar 06, 2026, 02:15 AM IST
ಸದ | Kannada Prabha

ಸಾರಾಂಶ

ಚಿಕ್ಕಮಗಳೂರುಬಡವರು, ಶೋಷಿತರು ಸಮಾಜದ ಮುನ್ನಲೆಗೆ ಬರಬೇಕೆಂಬ ಪರಿಕಲ್ಪನೆಯೊಂದಿಗೆ ಸರ್ವರೂ ಸುಶಿಕ್ಷಿತರಾಗಬೇಕೆಂದು ರಾಜ್ಯಸರ್ಕಾರ ನಿರ್ಧರಿಸಿ ಸಮ ಸಮಾಜ ನಿರ್ಮಾಣದಗುರಿ ಹೊಂದಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಡವರು, ಶೋಷಿತರು ಸಮಾಜದ ಮುನ್ನಲೆಗೆ ಬರಬೇಕೆಂಬ ಪರಿಕಲ್ಪನೆಯೊಂದಿಗೆ ಸರ್ವರೂ ಸುಶಿಕ್ಷಿತರಾಗಬೇಕೆಂದು ರಾಜ್ಯಸರ್ಕಾರ ನಿರ್ಧರಿಸಿ ಸಮ ಸಮಾಜ ನಿರ್ಮಾಣದಗುರಿ ಹೊಂದಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಲಕ್ಯಾ ಗ್ರಾಮದಲ್ಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ಏರ್ಪಡಿಸಿದ್ದ 1.20 ಕೋಟಿ ರು. ವೆಚ್ಚದ ಲಕ್ಯಾ, ಹಿರೇಗೌಜ, ಉದ್ದೇಬೋರನಹಳ್ಳಿ, ಪಾದಮನೆ ಗ್ರಾಮಗಳಿಗೆ ಎಸ್‌ಸಿಪಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಲಾ 7 ಕೋಟಿ ರು. ಅನುದಾನದಲ್ಲಿ ಹಿಂದೂ ಧರ್ಮದ ವಿವಿಧ ಸಮುದಾಯಗಳ ದೇವಾಲಯಗಳು ಹಾಗೂ ಸಮುದಾಯ ಭವನಗಳ ಅಭಿವೃದ್ಧಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. 14 ಕೋಟಿ ರು. ವೆಚ್ಚದಲ್ಲಿ ಹಿಂದೂ ಧರ್ಮದ ವಿವಿಧ ಸಮುದಾಯಗಳ ಅಭಿವೃದ್ಧಿಗೆ ನೀಡಿದ್ದು, ಒಂದು ಕೋಮಿನ ವರ್ಗವನ್ನು ರಾಜ್ಯ ಸರ್ಕಾರ ಓಲೈಸುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದರು.ಬಡವರು, ಶೋಷಿತರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಐದು ತಿಂಗಳಲ್ಲಿ ಅನುಷ್ಠಾನಕ್ಕೆ ತಂದು ನೆರವು ನೀಡುತ್ತಿದೆ ಎಂದರು.ಈ ವೇಳೆ ಮುಖಂಡರಾದ ಲೋಕಯ್ಯ, ಶಿವಕುಮಾರ್, ಜ್ಞಾನಪ್ಪ, ಯೋಗೀಶ್, ಕುಮಾರ್, ಗುರುಲಿಂಗಪ್ಪ, ಕಾಡಪ್ಪ, ನಾಗಣ್ಣ, ಕೆಂಗೇಗೌಡ, ಶಂಕರ್‌ನಾಯ್ಕ, ಸಾದರಹಳ್ಳಿ ಹುಲಿಯಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತ ಜೀವನದ ಅವಿಭಾಜ್ಯ ಅಂಗ : ರಂಭಾಪುರಿ ಶ್ರೀ
ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿ: ಡಾ.ನಾಗಲಕ್ಷ್ಮಿ ಚೌಧರಿ