ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕಿತ್ತೂರು ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಎಕ್ಸಲಂಟ್ ಕೋಚಿಂಗ್ ಕ್ಲಾಸಿಸ್ ವತಿಯಿಂದ ಆಯೋಜಿಸಲಾಗಿದ್ದ ಸೈನಿಕ, ನವೋದಯ, ಕಿತ್ತೂರು ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆಗಳ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಕ್ಸಲಂಟ್ ಶಿಕ್ಷಣ ಸಂಸ್ಥೆಯೂ ಸಂಸ್ಕಾರಯುತ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಮೌಲ್ಯ ಬಿತ್ತುವ ಕಾರ್ಯ ಮಾಡುತ್ತಿದೆ. ಗುಣಮಟ್ಟದ ಶಿಕ್ಷಣದ ಮೂಲಕವಾಗಿಯೇ ತಮ್ಮತನವನ್ನು ಸಂಸ್ಥೆ ಸಾಬೀತು ಮಾಡಿದೆ. ಹೀಗಾಗಿಯೇ ರಾಜ್ಯದ ಮೂಲೆ ಮೂಲೆಗಳಿಂದ ಪಾಲಕರು ತಮ್ಮ ಮಕ್ಕಳನ್ನು ತರಬೇತಿಗಾಗಿ ಇಲ್ಲಿಗೆ ಕರೆತರುತ್ತಾರೆ. ಪಾಲಕರರ ನಿರೀಕ್ಷೆಯಂತೆ ಎಕ್ಸಲಂಟ್ ಸಂಸ್ಥೆ ಪ್ರತಿವರ್ಷವೂ ಅತ್ಯುತ್ತಮವಾದ ಫಲಿತಾಂಶವನ್ನು ನೀಡುತ್ತಿದೆ. ಈ ಬಾರಿಯಂತೂ ಯಾರೂ ಕೂಡ ಊಹಿಸದ ರೀತಿಯಲ್ಲಿ ಫಲಿತಾಂಶ ನೀಡಿದ್ದು ಮನಸ್ಸಿಗೆ ಖುಷಿ ನೀಡುತ್ತಿದೆ. ಒಂದೇ ವೇದಿಕೆ ಮೇಲೆ ನೂರಾರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ಮಾಡುತ್ತಿರುವುದು ನನ್ನ ಬದುಕಿನಲ್ಲಿ ಇದೇ ಮೊದಲು. ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷನಾಗಿ ನಾನು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದು ನನ್ನ ಪುಣ್ಯ ಎಂದು ಹರ್ಷ ವ್ಯಕ್ತ ಪಡಿಸಿದರು.ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಪ್ರತಿಬಾರಿಯೂ ಉತ್ತಮವಾದ ಫಲಿತಾಂಶವನ್ನು ಒದಗಿಸುವಲ್ಲಿ ಸಫಲವಾಗಿರುವ ನಮ್ಮ ಸಂಸ್ಥೆಯು ಈ ಬಾರಿ ಸೈನಿಕ, ನವೋದಯ, ಕಿತ್ತೂರು ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆಗಳ ಪರೀಕ್ಷೆಯಲ್ಲಿ ಅದ್ಭುತ ಫಲಿತಾಂಶ ನೀಡಿದೆ. ಅದರಲ್ಲೂ ಸೈನಿಕ ಶಾಲೆಯ ಪರೀಕ್ಷೆಯಲ್ಲಿ ರಾಜ್ಯದ ಟಾಪ್ ಹತ್ತು ರ‍್ಯಾಂಕ್‌ಗಳಲ್ಲಿ ನಮ್ಮ ನಾಲ್ಕು ವಿದ್ಯಾರ್ಥಿಗಳಿರುವುದು ನಮ್ಮ ಸಂಸ್ಥೆಯ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ಎಕ್ಸಲಂಟ್ ವಿಜ್ಞಾನ ಕಾಲೇಜಿನಲ್ಲೂ ರಾಜ್ಯಕ್ಕೆ ನಾಲ್ಕು ರ‍್ಯಾಂಕ್ ದೊರೆತಿದೆ ಎಂದರು.ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯು ಈ ವರ್ಷ ರ‍್ಯಾಂಕ್‌ಗಳ ಹಬ್ಬದ ವಾತಾವರಣವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದಕ್ಕೆ ಸಿದ್ಧರಾಗಿದ್ದು, ನಮ್ಮ ಬೋಧಕವರ್ಗ ಇನ್ನೂ ಹೆಚ್ಚಿನ ರ‍್ಯಾಂಕ್‌ಗಳನ್ನು ನೀಡುವುದಕ್ಕೆ ಕಟಿಬದ್ಧವಾಗಿ ನಿಂತಿದೆ. ನಮ್ಮ ಮೇಲೆ ಭರವಸೆ ಇಟ್ಟು ತರಬೇತಿಗೆ ಕಳುಹಿಸುವ ಪಾಲಕರಿಗೂ ಸಹ ನಾವು ಚಿರಋಣಿ ಎಂದರು.
₹1 ಲಕ್ಷ ಬಹುಮಾನ ವಿತರಣೆ
ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗೆ ಸನ್ಮಾನ