ಸ್ವಚ್ಛ, ಸುಂದರ ಧಾರವಾಡ ರೂಪಿಸಲು ಮಹತ್ವದ ಹೆಜ್ಜೆ

KannadaprabhaNewsNetwork |  
Published : Oct 04, 2026, 02:15 AM IST
ಧಾರವಾಡದ ನಗರ ಸುಧಾರಣೆ ಹಿನ್ನೆಲೆಯಲ್ಲಿ ಧಾರವಾಡದ ಯಾಲಕ್ಕಿ ಶೆಟ್ಟರ್‌ ಕಾಲೋನಿಯ ಶಂಕರಮಠದಲ್ಲಿ ನಡೆದ ದುಂಡು ಮೇಜಿನ ಸಭೆ. | Kannada Prabha

ಸಾರಾಂಶ

ಧಾರವಾಡದ ಸಮಗ್ರ ಅಭಿವೃದ್ಧಿ, ಸ್ವಚ್ಛತೆ, ಹಸಿರೀಕರಣ, ಪರಿಸರ ಸಂರಕ್ಷಣೆ, ಸಾರ್ವಜನಿಕ ಸ್ಥಳಗಳ ನಿರ್ವಹಣೆ, ಮೂಲಸೌಕರ್ಯ ಹಾಗೂ ನಾಗರಿಕರ ಜೀವನಮಟ್ಟ ಸುಧಾರಣೆ ಕುರಿತು ಚರ್ಚೆ.

ಧಾರವಾಡ:

ಧಾರವಾಡ ನಗರವನ್ನು ಸ್ವಚ್ಛ, ಹಸಿರು, ಸುಂದರ ಹಾಗೂ ಸುರಕ್ಷಿತ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಾಗರಿಕರು, ವಿವಿಧ ಕ್ಷೇತ್ರಗಳ ಗಣ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಮೊದಲ ಬಾರಿಗೆ ಒಂದೆಡೆ ಸೇರಿ ದುಂಡು ಮೇಜಿನ ಸಭೆ ಮಾಡುವ ಮೂಲಕ ಮಹತ್ವದ ಚರ್ಚೆ ನಡೆಸಿದರು.

ಯಾಲಕ್ಕಿ ಶೆಟ್ಟರ್‌ ಕಾಲನಿಯ ಶಂಕರ ಮಠದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಧಾರವಾಡದ ಸಮಗ್ರ ಅಭಿವೃದ್ಧಿ, ಸ್ವಚ್ಛತೆ, ಹಸಿರೀಕರಣ, ಪರಿಸರ ಸಂರಕ್ಷಣೆ, ಸಾರ್ವಜನಿಕ ಸ್ಥಳಗಳ ನಿರ್ವಹಣೆ, ಮೂಲಸೌಕರ್ಯ ಹಾಗೂ ನಾಗರಿಕರ ಜೀವನಮಟ್ಟ ಸುಧಾರಣೆ ಕುರಿತು ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಯಿತು.

ಧಾರವಾಡದ ಪರಿವರ್ತನೆ ಕೇವಲ ಸರ್ಕಾರ ಅಥವಾ ಸ್ಥಳೀಯ ಆಡಳಿತದ ಜವಾಬ್ದಾರಿಯಲ್ಲ. ಪ್ರತಿ ನಾಗರಿಕರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಯುವಕರು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ವೃತ್ತಿಪರರು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ಧಾರವಾಡದ ವಿವಿಧ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಸಾಮೂಹಿಕವಾಗಿ ಪರಿಹಾರ ಕಂಡುಕೊಳ್ಳುವುದು, ಪ್ರತಿಯೊಂದು ಸಮಸ್ಯೆ, ಪರಿಹಾರ, ಯೋಜನೆಗಳ ರೂಪಿಸುವಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿರುವ ಸಂಪನ್ಮೂಲ ಮತ್ತು ಸಾಮರ್ಥ್ಯಗಳನ್ನು ಒಗ್ಗೂಡಿಸುವ ಕುರಿತು ನಿರ್ಣಯಿಸಲಾಯಿತು.

ನಮ್ಮ ಧಾರವಾಡ-ನಮ್ಮ ಜವಾಬ್ದಾರಿ ಎಂಬ ಆಶಯದೊಂದಿಗೆ ಧಾರವಾಡದ ಸಮಗ್ರ ಪರಿವರ್ತನೆಗೆ ಎಲ್ಲರೂ ಕೈಜೋಡಿಸಬೇಕು ಎಂಬ ಸಂದೇಶ ಸಭೆಯಲ್ಲಿ ಮೂಡಿಬಂದಿತು. ಸಭೆಯಲ್ಲಿ ಚಿತ್ರನಟ, ಧಾರವಾಡದ ಅನಿರುದ್ಧ ಜತ್ಕರ್, ಗ್ರಾಮೀಣಾಭಿವೃದ್ಧಿ ತಜ್ಞ ಡಾ. ಪ್ರಕಾಶ್ ಭಟ್, ಡಾ. ಜಗದೀಶ್ ನಾಯಕ್, ಶಿಕ್ಷಣ ಚಿಂತಕ ವಿನಾಯಕ ಜೋಶಿ, ಮಾಳವಿಕಾ ಕಡ್ಕೋಳ್, ವರ್ಷಾ ಹಂಚಿನಮನಿ, ಅಪರ್ಣಾ ಪೂಜಾರಿ, ಅಶ್ವಿನ್ ಭೂಸರೆ, ಮಹಾವೀರ ಜೈನ್, ವೀರೇಶ ಕೆಲಗೇರಿ, ಬಸವರಾಜ ತಳ್ಳೂರ, ಶಿವು ಅಮೀನಗಡ, ಮಾಜಿ ಮೇಯರ್‌ಗಳಾದ ಶಿವು ಹಿರೇಮಠ, ಜ್ಯೋತಿ ಪಾಟೀಲ್, ರತ್ನ ನಜಾರೆ, ಪಿ.ವಿ. ಹಿರೇಮಠ, ವೀರಣ್ಣ ಪತ್ತಾರ, ವಾಸುದೇವ ಪಾರ್ವತಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ನಾಗರಿಕರು ಭಾಗವಹಿಸಿದ್ದರು.ಧಾರವಾಡದ ನಗರ ಸುಧಾರಣೆ ಹಿನ್ನೆಲೆಯಲ್ಲಿ ಯಾಲಕ್ಕಿ ಶೆಟ್ಟರ್‌ ಕಾಲನಿಯ ಶಂಕರಮಠದಲ್ಲಿ ನಡೆದ ದುಂಡು ಮೇಜಿನ ಸಭೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿ: ಡಿಸಿ ಶ್ರೀಧರ್
ಪಂಚಪೀಠಗಳು ಜ್ಞಾನ, ಸಂಸ್ಕಾರ ನೀಡುವ ಕೇಂದ್ರ; ರಂಭಾಪುರಿ ಶ್ರೀ