ರಂಗೋಲಿ ಮೂಲಕ ಡಾ.ಶಿವರಾಮ ಕಾರಂತರ ಪರಿಚಯಿಸುವ ವಿನೂತನ ಕಾರ್ಯಕ್ರಮ

KannadaprabhaNewsNetwork |  
Published : Jul 02, 2025, 11:51 PM IST
02ಕಾರಂತ | Kannada Prabha

ಸಾರಾಂಶ

ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಇಲ್ಲಿನ ಮರವಂತೆಯ ನೇತಾಜಿ ಸುಭಾಸ್‌ ಚಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ, ವಿದ್ಯಾರ್ಥಿಗಳಿಗೆ ಡಾ.ಶಿವರಾಮ ಕಾರಂತರ ಪರಿಚಯ - ರಂಗವಲ್ಲಿಯ ಮೂಲಕ ಕಾರಂತರು ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೈಂದೂರು

ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಇಲ್ಲಿನ ಮರವಂತೆಯ ನೇತಾಜಿ ಸುಭಾಸ್‌ ಚಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ, ವಿದ್ಯಾರ್ಥಿಗಳಿಗೆ ಡಾ.ಶಿವರಾಮ ಕಾರಂತರ ಪರಿಚಯ - ರಂಗವಲ್ಲಿಯ ಮೂಲಕ ಕಾರಂತರು ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಇದರಲ್ಲಿ ಖ್ಯಾತ ರಂಗವಲ್ಲಿ ಕಲಾವಿದೆ ಡಾ. ಭಾರತಿ ಮರವಂತೆ ಅವರಿಂದ ಶಾಲಾ ವಿದ್ಯಾರ್ಥಿಗಳಿಗೆ ಕಾರಂತರ ಪುಸ್ತಕಗಳಲ್ಲಿರುವ ಚಿತ್ರಗಳನ್ನು ರಂಗವಲ್ಲಿಯ ಮೂಲಕ ಚಿತ್ರಿಸುವ ನೂತನ ಕಾರ್ಯಕ್ರಮವು ಶಾಲೆಯ ವಸಂತಿ ಕುಮಾರಿ ಕಲಾಂಗಣದಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಸಂಸ್ಥಾಪಕ ಸಮಿತಿಯ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ಡಾ. ಶಿವರಾಮ ಕಾರಂತರು ಸಾಹಿತ್ಯ ಮೂಲಕ ಸಮಾಜದಲ್ಲಿ ಅನೇಕ ಬದಲಾವಣೆಯನ್ನು ತಂದವರು, ಇಂದಿನ ಯುವ ಪೀಳಿಗೆಯು ಅವರ ಕುರಿತು ಇನ್ನಷ್ಟು ವಿಚಾರಗಳನ್ನು ತಿಳಿಸುವುದು ಅತ್ಯಗತ್ಯ ಎಂದರು.ಭಾರತಿ ಮರವಂತೆ ಅವರು, ಮಕ್ಕಳ ಕುರಿತು ವಿಶೇಷ ಕಾಳಜಿ ಹೊಂದಿದ್ದ ಕಾರಂತರು ಮಕ್ಕಳಿಗಾಗಿ ಅನೇಕ ಪುಸ್ತಕಗಳನ್ನು ಸರಳ ಬರವಣಿಗೆ ಮೂಲಕ ರಚಿಸಿದ್ದು, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಕಾರಂತರನ್ನು ಕೇಂದ್ರವಾಗಿಟ್ಟುಕೊಂಡು ಪಠ್ಯಪೂರಕ ಚಟುವಟಿಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿ ವಿಕಸನಕ್ಕೆ ಸಹಕಾರಿಯಾಗುವಂತಹ ಕಾರ್ಯಕ್ರಮದ ಅಯೋಜನೆಗೊಳಿಸುವುದು ಟ್ರಸ್ಟಿನ ಮುಖ್ಯ ಉದ್ದೇಶವಾಗಿದೆ ಎಂದರು.

ಈ ಸಂದರ್ಭ ರಂಗೋಲಿ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಡಾ.ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಜಾತಾ, ಶಾಲಾ ರಜತೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಬಳೆಗಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿ, ಅಧ್ಯಾಪಕ ರಮೇಶ್ ನಿರೂಪಿಸಿ, ಹಿತೇಶ್ ಶೆಟ್ಟಿ ವಂದಿಸಿದರು.

PREV

Recommended Stories

ಹಿರಿಯೂರು ಮಾಜಿ ಶಾಸಕ ರಾಮಯ್ಯ ನಿಧನ
ಮಾಂಗಲ್ಯ ಸರ ಕಳವು ಪ್ರಕರಣ ಭೇದಿಸಿದ ನಾಗಮಂಗಲ ಪೊಲೀಸರು