ಎನ್ನೆಸ್ಸೆಸ್ ವಾರ್ಷಿಕ ಶಿಬಿರದಿಂದ ಸಾಮಾಜಿಕ ಸ್ಥಿತಿಗತಿ ಪರಿಚಯ ಸಾಧ್ಯ

KannadaprabhaNewsNetwork |  
Published : Oct 24, 2024, 12:45 AM IST
23ಎಚ್‍ಆರ್‍ಆರ್ 1ಹರಿಹರದ ಸೆಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಕಕ್ಕರಗೊಳ್ಳದಲ್ಲಿ ಆಯೋಜಿಸಿದ್ದ ಎನ್‍ಎಸ್‍ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳ ತಂಡಕ್ಕೆ ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಭಾರತ ಎಂದರೆ ಹಳ್ಳಿಗಳ ದೇಶ. ಹಳ್ಳಿಗಳನ್ನು ಅರ್ಥೈಸಿಕೊಂಡರೆ ವ್ಯಕ್ತಿ ಪರಿಪೂರ್ಣವಾಗಿ ಬೆಳೆಯಲು ಸಾಧ್ಯ ಎಂದು ಹರಿಹರದ ಸೇಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ಮೌಸಿನ್‍ ಉಲ್ಲಾ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕಕ್ಕರಗೊಳ್ಳ ಶಿಬಿರ ಸಮಾರೋಪದಲ್ಲಿ ಮೌಸಿನ್‍ ಉಲ್ಲಾ ಅಭಿಮತ - - - ಹರಿಹರ: ಭಾರತ ಎಂದರೆ ಹಳ್ಳಿಗಳ ದೇಶ. ಹಳ್ಳಿಗಳನ್ನು ಅರ್ಥೈಸಿಕೊಂಡರೆ ವ್ಯಕ್ತಿ ಪರಿಪೂರ್ಣವಾಗಿ ಬೆಳೆಯಲು ಸಾಧ್ಯ ಎಂದು ಹರಿಹರದ ಸೇಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ಮೌಸಿನ್‍ ಉಲ್ಲಾ ಹೇಳಿದರು. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಹರಿಹರದ ಸೇಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜು ಆಯೋಜಿಸಿದ್ದ, ಎನ್‍ಎಸ್‍ಎಸ್‍ ವಿಶೇಷ ವಾರ್ಷಿಕ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸಾಮಾಜಿಕ ಜ್ಞಾನ ಪರಿಚಯಿಸಲು ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಶಿಬಿರಗಳು ಸಹಕಾರಿಯಾಗಿವೆ. ಹಳ್ಳಿಗಳಲ್ಲಿ ವಾರಗಟ್ಟಲೆ ಉಳಿದುಕೊಂಡು ವಿವಿಧ ಸೇವಾ ಕಾರ್ಯಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ, ಸುತ್ತಲಿನ ಸಾಮಾಜಿಕ ಸ್ಥಿತಿಗತಿಗಳ ಪರಿಚಯ ಆಗಲು ಸಾಧ್ಯ ಎಂದರು.

ಉಪ ಪ್ರಾಚಾರ್ಯ ಪಾಸ್ಕೆಲ್ ಫರ್ನಾಂಡಿಸ್ ಮಾತನಾಡಿ, ಶಿಬಿರದಿಂದ ಪಡೆದ ಅನುಭವ ಜ್ಞಾನ ಸಾಧನೆಯೆಡೆಗೆ ಸ್ಫೂರ್ತಿಯಾಗಬೇಕು. ಜೀವನಪೂರ್ತಿ ಶಿಸ್ತು, ಸಂಯಮದಿಂದ ಮತಭೇದ ಮರೆತು ಭ್ರಾತೃತ್ವದಿಂದ ಕೂಡಿ ಬಾಳಬೇಕೆಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮ ಅಧಿಕಾರಿ ಜಿ.ಅಬ್ದುಲ್ ರಹಮಾನ್ ಮಾತನಾಡಿ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಶಿಬಿರ ಯಶಸ್ಸು ಕಂಡಿದೆ. ಉತ್ತಮ ಚಟುವಟಿಕೆ ಮೂಲಕ ಶಿಬಿರ ಯಶಸ್ವಿಗೊಳಿಸಿದ 4 ತಂಡಗಳಿಗೆ ಪ್ರಶಸ್ತಿ ನೀಡಿ, ಅಭಿನಂಧಿಸಲಾಯಿತು.

7 ದಿನಗಳ ಕಾರ್ಯ ಚಟುವಟಿಕೆಗಳನ್ನು ಒಳಗೊಂಡ ಸಮಗ್ರ ವರದಿಯನ್ನು ಘಟಕದ ನಾಯಕರಾದ ವಿ.ಎಂ. ಸಂಜನಾ, ಎಂ.ಎನ್. ಪ್ರಿಯ ವಾಚಿಸಿದರು. ಶಿಬಿರಾರ್ಥಿಗಳಾದ ಯಲ್ಲಪ್ಪ, ಎ.ಜಿ. ರಾಬಿಯಾ, ಕಾರ್ತಿಕ್, ಸಂಜನಾ ಅನಿಸಿಕೆ ವ್ಯಕ್ತಪಡಿಸಿದರು.

ಶೈಕ್ಷಣಿಕ ಉಪನ್ಯಾಸ, ಪ್ರಾತ್ಯಕ್ಷಿಕೆ, ಶಿಬಿರಾರ್ಥಿಗಳು ನಡೆಸಿದ ಸ್ವಚ್ಛತಾ ಕಾರ್ಯಕ್ರಮ, ಗೋಡೆ ಬರಹ, ಚಿತ್ರಗಳು, ಶ್ರಮದಾನ, ಜಾಗೃತಿ ಜಾಥಾ, ಪ್ಲಾಸ್ಟಿಕ್ ಹೆಕ್ಕಿಕೋ ಕಾರ್ಯಕ್ರಮ, ಬೀದಿನಾಟಕ , ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಶಿಬಿರಾಧಿಕಾರಿಗಳಾದ ನಾಗೇಶ್, ಜೋಸ್, ಸಿಸ್ಟರ್ ಮಲ್ಸಿಲ್ಲಾ, ಸಹ ಕಾರ್ಯಕ್ರಮಾಧಿಕಾರಿ ನಿಂಗಮ್ಮ ಉಪಸ್ಥಿತರಿದ್ದರು. ಸುಪ್ರೀತ್ ಸ್ವಾಗತಿಸಿ, ಹರ್ಷಿಕಾ ಹಲಗೇರಿ ನಿರೂಪಿಸಿದರು. ಏಕಾಂತ್ ವಂದಿಸಿದರು.

- - - -23ಎಚ್‍ಆರ್‍ಆರ್1:

ಹರಿಹರದ ಸೇಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜು ಕಕ್ಕರಗೊಳ್ಳದಲ್ಲಿ ಆಯೋಜಿಸಿದ್ದ ಎನ್‍ಎಸ್‍ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳ ತಂಡಕ್ಕೆ ಅಭಿನಂದಿಸಲಾಯಿತು.

PREV

Recommended Stories

5 ಸಾವಿರ ಆಹಾರ ಉದ್ಯಮ ಸ್ಥಾಪನೆಯ ಗುರಿ
‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ