ಶಾಸಕರು, ಮಾಜಿ ಶಾಸಕರ ಭೇಟಿ, ವಿಶೇಷ ಪೂಜೆ । ಸರತಿ ಸಾಲಿನಲ್ಲಿ ನಿಂತು ಸೇವೆ ಸಲ್ಲಿಸಿದ ಲಕ್ಷಾಂತರ ಭಕ್ತಾಧಿಗಳುಕನ್ನಡಪ್ರಭ ವಾರ್ತೆ ಶಿರಸಿ
ಅಲ್ಲದೇ ಅನೇಕ ವೃದ್ಧರು, ಅಂಗವಿಕಲರು ಮತ್ತು ಯುವಕ-ಯುವತಿಯರು ದೇವಿಯ ದರ್ಶನ ಪಡೆಯಲು ರಾಜ್ಯ ಅಂತರ್‌ರಾಜ್ಯಗಳಿಂದ ಬಂದಿರುವುದು ವಿಶೇಷವಾಗಿ ಕಂಡು ಬಂತು.
ಎಂದಿನಂತೆ ಮಾರಿಕಾಂಬೆಯ ಸೀರೆ ಮಾರಾಟ ಜೋರಾಗಿ ಕಂಡು ಬಂದಿತು. ದಿನಕ್ಕೆ 10 ಸಾವಿರದಿಂದ 12 ಸಾವಿರ ಸೀರೆಗಳು ಮಾರಾಟವಾಗುತ್ತಿವೆ. ಪ್ರತಿದಿನ ಸುಮಾರು 50 ಸಾವಿರದಿಂದ 60 ಸಾವಿರ ಉಡಿಗಳು ಮಾರಾಟವಾಗುತ್ತಿವೆ. ಜೊತೆಗೆ ಪ್ರತಿದಿನ ಸುಮಾರು 15 ಸಾವಿರದಿಂದ 18 ಸಾವಿರ ಲಡ್ಡು ಪ್ರಸಾದವು ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ.ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆಗಮಿಸಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಮತ್ತು ಕ್ಷೇತ್ರದ ಜನರಿಗೆ ಸುಖ ಸಮೃದ್ಧಿಯನ್ನು ಆ ತಾಯಿ ಕರುಣಿಸಲಿ ಎಂದು ಹರಕೆ ಮಾಡಿಕೊಂಡರು. ನಂತರ ದೇವಿಯ ದರ್ಶನ ಪಡೆದರು. ನಂತರ ದೇವಸ್ಥಾನದ ಆಡಳಿತ ಮಂಡಳಿಯವರು ರೂಪಾಲಿ ಅವರನ್ನು ಗೌರವಿಸಿ ಸನ್ಮಾನಿಸಿದರು.
ನಂತರ ಬ್ರಹ್ಮಾಂಡ ಗುರೂಜಿ ಆಗಮಿಸಿ ದೇವಿಯ ಗದ್ದುಗೆಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಈ ಸಂದರ್ಭ ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ್ ಹಂದ್ರಾಳ, ಶಿವಾನಂದ ಶೆಟ್ಟಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ವೀಲ್ ಚೇರ್ ಮೂಲಕ ಬಂದ ಅಂಗವಿಕಲ ಭಕ್ತಾಧಿಗಳಿಗೆ ಬಾಬುದಾರರ ಕಡೆಯಿಂದ ವಿಶೇಷ ದರ್ಶನ ಮಾಡಿಸಲಾಯಿತು.