ಕನ್ನಡಪ್ರಭ ವಾರ್ತೆ ಗುಡಿಬಂಡೆ
ಗುಡಿಬಂಡೆ ತಾಲೂಕಿನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಕಾರ್ಯಕರ್ತರೊಂದಿಗೆ ತೆರಳಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ನಾನು 15 ವರ್ಷ ಸಮಾಜ ಸೇವೆ ಮಾಡುತ್ತಾ ಜನರ ಸೇವೆ ಮಾಡಿದ್ದೇನೆ. ಕಳೆದ ಮೂರು ಬಾರಿ ಶಾಸಕನಾಗಿ ಜನರ ಸೇವೆ ಮಾಡುತ್ತಿದ್ದೇನೆ. ಮೊದಲ ಬಾರಿಗೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿದಾಗ 33 ಸಾವಿರ ಮತ ಎರಡನೇ ಬಾರಿ 16 ಮೂರನೇ ಬಾರಿ 19 ಸಾವಿರ ಮತಗಳನ್ನು ನೀಡಿ ಬೆಂಬಲಿಸಿದ್ದಾರೆ. ನಾನು ಜನರ ಸೇವೆ ಮಾಡುತ್ತಿಲ್ಲವೆಂದಾದರೇ ಜನರು ನನ್ನ ಎಂದೋ ಮನೆಗೆ ಕಳುಹಿಸುತ್ತಿದ್ದರು. ಜನರ ಆರ್ಶಿವಾದ ಹಾಗೂ ದೇವರ ಕೃಪೆ ನನ್ನ ಮೇಲೆ ಇರುವ ತನಕ ಯಾರೂ ನನ್ನನ್ನು ಏನೂ ಮಾಡೋಕೆ ಸಾಧ್ಯವಿಲ್ಲ. ಯಾರಾದರೂ ಯಾವಾಗ ಬೇಕಾದರೂ ಬಂದು ರಾಜಕೀಯ ಮಾಡಿ, ಆದರೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರೇ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದರು.ಇನ್ನೂ ನಾನು ಕಳೆದ ಮೂರು ಬಾರಿಯೂ ಚುನಾವಣಾ ಅಫಿಡಿವಿಟ್‌ನಲ್ಲಿ ನನ್ನ ಆಸ್ತಿಯ ವಿವರಗಳನ್ನು ಸಲ್ಲಿಸಿದ್ದೇನೆ. ಒಟ್ಟು ಆಸ್ತಿಯನ್ನು ನಾನು ತೋರಿಸಿದ್ದೇನೆ. ಆದರೆ ವಿವರವಾಗಿ ತಿಳಿಸಬೇಕು ಎಂದು ದೂರಿದ್ದಾರೆ. ನಾನು ಭ್ರಷ್ಟಚಾರ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ ಒಟ್ಟು ಆಸ್ತಿ ತೋರಿಸಿದ್ದರೂ ಅದು ಹೇಗೆ ಭ್ರಷ್ಟಾಚಾರ ಆಗುತ್ತೆ. ನಾನು ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್ ತೀರ್ಪಿಗೆ ತಡೆ ಕೇಳಲು ಹೋದರೇ, ಮುನಿರಾಜು ಜೊತೆಗೆ ಮಿಥುನ್ ರೆಡ್ಡಿ ಸೇರಿದಂತೆ ಸಿಪಿಎಂ ಕಾರ್ಯಕರ್ತರೂ ಸಹ ಸ್ಟೇ ಕೊಡಿ ಎಂದು ಅರ್ಜಿ ಹಾಕಿದ್ದಾರೆ ಎಂದರೇ ಅವರ ಉದ್ದೇಶ ಏನು ಎಂಬುದು ನಿಮಗೆ ತಿಳಿಯುತ್ತದೆ. ನನ್ನ ವಿರುದ್ಧ ಭ್ರಷ್ಟಾಚಾರ ಸಾಬೀತು ಮಾಡಿದರೇ ನಾನೇ ನೇರವಾಗಿ ಸ್ಪೀಕರ್ ಬಳಿ ತೆರಳಿ ರಾಜೀನಾಮೆ ನೀಡುತ್ತೇನೆ ಎಂದರು.
ಇನ್ನೂ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಕಾಂಗ್ರೆಸ್ ಕಾರ್ಯಕತರು ಹಾಗೂ ಬೆಂಬಲಿಗರೊಂದಿಗೆ ತೆರಳಿ ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಈ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ಆದಿನಾರಾಯಣರೆಡ್ಡಿ, ಕೆ.ನರೇಂದ್ರ, ವಿಕಾಸ್, ಅಂಬರೀಶ್, ಬಾಬು, ರಾಜಾರೆಡ್ಡಿ, ಲಕ್ಷ್ಮೀನಾರಾಯಣ, ಬ್ರಾಹ್ಮಣರಹಳ್ಳಿ ಮೂರ್ತಿ, ಕೃಷ್ಣೇಗೌಡ, ಅಶ್ವತ್ಥಪ್ಪ ಸೇರಿದಂತೆ ಹಲವರು ಇದ್ದರು.
28ಜಿಯುಡಿ1: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಬೆಂಬಲಿಗರು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.28ಜಿಯುಡಿ2: ಶಾಸಕ ಸುಬ್ಬಾರೆಡ್ಡಿರವರ ಅಸಿಂಧು ತೀರ್ಪಿಗೆ ಸುಪ್ರೀಂ ಕೋರ್ಟ್ನಲ್ಲಿ ತಡೆ ಸಿಕ್ಕ ಹಿನ್ನೆಲೆಯಲ್ಲಿ ಗುಡಿಬಂಡೆಯಲ್ಲಿ ಕಾರ್ಯಕರ್ತರು ಮೆರವಣಿಗೆ ಮೂಲಕ ಸಂಭ್ರಮಿಸಿದರು.