ಚಿಕ್ಕಮಗಳೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಫ್ಯಾಷನ್ ಶೋ ಅಂತಿಮ ಸುತ್ತು ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಐಭಾ ಹಾಗೂ ಲುಕ್ ಬುಕ್ ವತಿಯಿಂದ ಐಭಾ ಗ್ಲಾಮ್ ಗ್ಲಾಲಾ ಕಾರ್ಯಕ್ರಮದಡಿ ನಡೆದ ಟ್ರಾನ್ಸ್ ಜೆಂಡೆರ್ಸ್ ಫ್ಯಾಷನ್ ಶೋನಲ್ಲಿ ಬೆಳಗಾಂನ ಅನಾಮಿಕ ಅವರು ಮಿಸ್ ಟ್ರಾನ್ಸ್ ಫ್ರೈಡ್ ಆಫ್ ಕರ್ನಾಟಕ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಹಾಸನ, ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಲಿಂಗತ್ವ ಅಲ್ಪಸಂಖ್ಯಾತರ ಫ್ಯಾಷನ್ ಶೋ ನಡೆದಿದ್ದು, ಚಿಕ್ಕಮಗಳೂರಿನಲ್ಲಿ ನಡೆದ ಕೊನೆ ಸುತ್ತಿನಲ್ಲಿ ಭಾಗವಹಿಸಿದ್ದ ಹಲವು ಸ್ಪರ್ಧಿಗಳಲ್ಲಿ ಅನಾಮಿಕ ಜಯಗಳಿಸಿದ್ದಾರೆ. ಫ್ಯಾಷನ್ ಶೋಗೂ ಮುನ್ನ ನಡೆದ ಸಮಾರಂಭವನ್ನು ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಉದ್ಘಾಟಿಸಿ ಮಾತನಾಡಿ, ಮಂಗಳಮುಖಿಯರು ಕೂಡ ಸಮಾಜದ ಅವಿಭಾಜ್ಯ ಅಂಗ. ಇವರಿಗೂ ಕೂಡ ಸಮಾಜದಲ್ಲಿ ಎಲ್ಲಾ ರೀತಿ ಸೌಲಭ್ಯ ಸಿಗಬೇಕು ಎಂದು ಹೇಳಿದರು. ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಸಾರುವ ಈ ಕಾರ್ಯಕ್ರಮ ಬಹಳ ಉತ್ತಮ ಎಂದು ಹೇಳಿದರು. ಲುಕ್ ಬುಕ್ ವ್ಯವಸ್ಥಾಪಕ ವಿನೋದ್ ಕುಮಾರ್ ಹಾಗೂ ಅರ್ಪಣಾ ವಿನೋದ್ ಮಂಗಳಮುಖಿಯರಿಗೆ ಫ್ಯಾಶನ್ ಶೋ ತರಬೇತಿ ನೀಡಿ ಸಮಾಜದಲ್ಲಿ ಅವರನ್ನು ಸ್ವಾವಲಂಬಿಯನ್ನಾಗಿ ಬದುಕಲು ತಿಳಿಸಿ ಕೊಟ್ಟಿದ್ದಾರೆ. ಕಾರ್ಯಕ್ರಮದ ನಿರ್ವಹಣೆ ಹೊತ್ತಿದ್ದ ಕಲಿಯುಗ್ ಇವೆಂಟ್ ಸಂಸ್ಥಾಪಕ ದೀಪಕ್ ಶಾಸ್ತ್ರ, ಐಭಾ ರಾಷ್ಟ್ರೀಯ ಅಧ್ಯಕ್ಷರಾದ ಸಂಗೀತ ಮಾತನಾಡಿದರು. ಐಭಾ ಕಾರ್ಯದರ್ಶಿ ಡೇವಿಡ್ ಅಂತೋನಿ, ಮೇಧಾ ಫೌಂಡೇಶನ್ ಸಂಸ್ಥಾಪಕ ಪ್ರವೇಶ್ ಗುಡಾನಿ, ಕುಳದೀಪ್ ಶರ್ಮ, ಮೇಧಾವಿ ಸಂಸ್ಥೆ ನಿರ್ದೇಶಕ ವೀಣಾ ಶ್ರೀನಿವಾಸ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ. ರಾಜಶೇಖರ್, ಉದ್ಯಮಿ ರಶ್ಮಿ ಸತೀಶ್, ಡಾ.ಕೌಶಲ್, ರಾಜ್ ಕ್ರಿಶ್, ಭವಾನಿ ಶ್ರೀಧರ್, ಸಂಗೀತ ಶ್ರೀನಿವಾಸ್ ರಾವ್, ಅನು ಉಪಸ್ಥಿತರಿದ್ದರು. 2 ಕೆಸಿಕೆಎಂ 5 ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಲಿಂಗತ್ವ ಅಲ್ಪ ಸಂಖ್ಯಾತರ ಫ್ಯಾಷನ್ ಶೋನಲ್ಲಿ ಬೆಳಗಾಂನ ಅನಾಮಿಕ ಅವರು ಮಿಸ್ ಟ್ರಾನ್ಸ್ ಫ್ರೈಡ್ ಆಫ್ ಕರ್ನಾಟಕ ಗರಿ ಮುಡಿಗೇರಿಸಿ ಕೊಂಡರು.