ಹೊಸಪೇಟೆ: ಮಾಜಿ ಸಚಿವ ಆನಂದ ಸಿಂಗ್ ಅವರ ಜನ್ಮದಿನವನ್ನು ನಗರ ಸೇರಿದಂತೆ ಹಂಪಿ, ಕಮಲಾಪುರ ಹೋಬಳಿ ಪ್ರದೇಶದಲ್ಲಿ ಅವರ ಅಭಿಮಾನಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು ಆಚರಿಸಿದರು.ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು. ಇನ್ನು ನಗರಸಭೆ ಎದುರು ಅನ್ನ ಸಂತರ್ಪಣೆ ಕೂಡ ನಡೆಸಲಾಯಿತು.
ನಗರದ ನಗರಸಭೆ ಎದುರು ಆನಂದ ಸಿಂಗ್ ಅವರ ಅಭಿಮಾನಿಗಳು ಹಾಗೂ ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ ಅವರ ನೇತೃತ್ವದಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು. ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ ಸೇರಿದಂತೆ ಮತ್ತಿತರರಿದ್ದರು.
ಬಿಜೆಪಿ ಕಚೇರಿಯಲ್ಲಿ ಆಚರಣೆ:ಮಾಜಿ ಸಚಿವ ಆನಂದ ಸಿಂಗ್‌ರ ಜನ್ಮದಿನ ನಿಮಿತ್ತ ಬಿಜೆಪಿ ಕಚೇರಿಯಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. ಬಳಿಕ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು.
ಹೋಮ, ವಿಶೇಷ ಪೂಜೆ:
ಶ್ರೀವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ:
ಮಾಜಿ ಸಚಿವ ಆನಂದ ಸಿಂಗ್ ಜನ್ಮ ದಿನದ ನಿಮಿತ್ತ ಹಂಪಿಯಲ್ಲಿ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಒಕ್ಕೂಟದಿಂದ ಶ್ರೀ ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಒಕ್ಕೂಟದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.ಒಕ್ಕೂಟದ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ, ಗೋಪಾಲ್, ರಾಮಕೃಷ್ಣ , ಶಿವಕುಮಾರ್, ಈರಣ್ಣ ಪೂಜಾರಿ, ಸೋಮೇಶ್, ಪರಶುರಾಮ್, ಸುರೇಶ್, ರಘು, ನಾಗರಾಜ್, ಮಂಜುನಾಥ್, ರಾಜಾಹುಲಿ, ಶರೀಫ್ ಮತ್ತಿತರರಿದ್ದರು.