ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷರಾಗಿ ಆನಂದಮೂರ್ತಿ, ಉಪಾಧ್ಯಕ್ಷರಾಗಿ ಕಿರಣ್ ಆಯ್ಕೆಯಾಗಿದ್ದಾರೆ.ಭಾನುವಾರ ಬೆಳಗ್ಗೆ ಸಂಘದ ಚುನಾವಣೆ ನಡೆದು ಎಣಿಕಾ ಕಾರ್ಯ ನಡೆಯಿತು. ಈ ವೇಳೆ ಅಧ್ಯಕ್ಷರಾಗಿ ಸ್ಪಧಿಸಿದ್ದ ಆನಂದಮೂರ್ತಿ 207 ಮತಗಳಿಸಿ ಚುನಾಯಿತರಾದರು. ಉಪಾಧ್ಯಕ್ಷರಾಗಿ ಎಸ್ ಕಿರಣ್ (94) ಮತಗಳಿಸಿ ವಿಜೇತರಾದರು. ಕಾರ್ಯದರ್ಶಿಯಾಗಿ ಪಾಪಣ್ಣ (224) ಮತಗಳಿಸಿ ವಿಜೇತರಾದರು. ಉಳಿದಂತೆ ಸಹ ಕಾರ್ಯದರ್ಶಿ ಸ್ಥಾನಕ್ಕೆ ಶಶಿಧರ (217ಮತ), ಖಜಾಂಚಿ ಸ್ಥಾನಕ್ಕೆ ಕೆ ರಾಜೇಶ್ (205) ಮತಗಳಿಸಿ ಚುನಾಯಿತರಾದರು. ಚುನಾವಣಾಧಿಕಾರಿ ನಾಗೇಶ್ ಕಾರ್ಯ ನಿರ್ವಹಿಸಿದರು. 432ಮತದಾರರಿದ್ದು ಈ ಪೈಕಿ 358ಮತಗಳು ಮಾತ್ರ ಚಲಾವಣೆಗೊಂಡಿತ್ತು, 5 ಸ್ಥಾನಗಳಿಗೆ 18 ಮಂದಿ ಅಂತಿಮ ಕಣದಲ್ಲಿದ್ದ ಕಾರಣ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಅಭ್ಯರ್ಥಿಗಳು ಪಡೆದ ಮತಗಳ ವಿವರ: ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆನಂದಮೂರ್ತಿ (207ಮತ), ನಾಗರಾಜು (81ಮತ), ಜೆ.ನಿಂಗರಾಜು (7ಮತ), ಸಿದ್ದಾರ್ಥ (40ಮತ) ದೊರೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಕಿರಣ್ (94), ಜಗದೀಶ್ (22), ಮೂರ್ತಿ (76), ರಾಜಶೇಖರಮೂರ್ತಿ ( 35), ಬಿ. ಶಿವರಾಜು ( 22), ಶ್ರೀಕಾಂತ್ (6), ಹುಚ್ಚಪ್ಪ (66) ಮತ ಲಭ್ಯವಾಯಿತು. ಕಾರ್ಯದರ್ಶಿ ಸ್ಥಾನಕ್ಕೆ ಪಾಪಣ್ಣ (224), ವಿಜಯ್ ಕುಮಾರ್ (84), ಸನತ್ ಕುಮಾರ್ 22 ಮತ ಲಭ್ಯವಾಯಿತು. ಅದೇ ರೀತಿಯಲ್ಲಿ ಸಹಕಾರ್ಯದರ್ಶಿ ಸ್ಥಾನಕ್ಕೆ ರಾಜೇಂದ್ರ ಅವರಿಗೆ (101), ಶಿಶಧರ (217), ಖಜಾಂಚಿ ಸ್ಥಾನಕ್ಕೆ ರಾಜೇಶ್ (205), ಪ್ರಶಾಂತ್ (130) ಮತ ದೊರೆಯಿತು. ಅಧ್ಯಕ್ಷ ಸ್ಥಾನಕ್ಕೆ ಚಲಾವಣೆಗೊಂಡ ಮತಗಳ ಪೈಕಿ 23ಮಗಳು ಅಸಿಂಧುವಾಗಿತ್ತು. ಅದೇ ರೀತಿಯಲ್ಲಿ ಉಪಾಧ್ಯಕ್ಷ ಚುನಾವಣೆಯಲ್ಲಿ 37, ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಮತದಾನದಲ್ಲಿ 28, ಸಹ ಕಾರ್ಯದರ್ಶಿ ಸ್ಥಾನಕ್ಕೆ40, ಖಜಾಂಚಿ ಸ್ಥಾನಕ್ಕೆ 23ಮತಗಳ ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ನಾಗೇಶ್ ಘೋಷಿಸಿದರು.