ಕನ್ನಡಪ್ರಭವಾರ್ತೆ ಬಸವಾಪಟ್ಟಣ
ತಾಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ಮಮತಾ ಚೇತನ್ ಕುಮಾರ್ ಮಾತನಾಡಿ, ಡಾ ಅನಿಲ್ ಅವರು ಜನರ ಬಗ್ಗೆ ಅಪಾರ ಕಾಳಜಿ ಉಳ್ಳ ವೈದ್ಯರಾಗಿ ಸೇವೆ ಸಲ್ಲಿಸುತ್ತಾ ಯಾವುದೆ ಪ್ರತಿಫಲಾಪೇಕ್ಷೆಯನ್ನು ಬಯಸದೆ ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟು ಬಡಜನರ ಎಲ್ಲಾ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಾ ಸೇವೆ ಸಲ್ಲಿಸಿದ್ದಾರೆ. ಪ್ರತಿ ದಿನ ೨೦೦ ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರತ್ತಿದ್ದರು. ಬಸವಾಪಟ್ಟಣ ಆರೋಗ್ಯ ಕೇಂದ್ರಕ್ಕೆ ಹೆಚ್ಚು ಗ್ರಾಮಗಳು ಅವಲಬಿಂತವಾಗಿದ್ದು, ಹೆರಿಗೆಯ ಸೌಲಭ್ಯ ಸಹ ದೊರೆಯುತ್ತಿತ್ತು. ಅಲ್ಲದೆ ಸರ್ಕಾರದ ಎಲ್ಲಾ ಆರೋಗ್ಯ ಸೇವೆಗಳು ಉತ್ತಮವಾಗಿ ದೊರಕುತ್ತಿದ್ದವು. ಆರೋಗ್ಯ ಕೆಂದ್ರದಲ್ಲಿ ವ್ಯವಸ್ಥಿತ ಆಡಳಿತ ವ್ಯವಸ್ಥೆ, ಸ್ವಚ್ಚತೆ , ರೋಗಿಗಳ ಉತ್ತಮ ಸೇವೆಯನ್ನು ನೀಡುತ್ತಿದ್ದ ಡಾ ಅನಿಲ್ ಕುಮಾರ್ ಸೇವೆ ಅನನ್ಯವಾಗಿದೆ ಎಂದು ತಿಳಿಸಿದರು.
ಗ್ರಾಮದ ಚೇತನ್ ಕುಮಾರ್ ಮತನಾಡಿ, ಡಾ ಅನಿಲ್ ಸೇವೆಯನ್ನು ಕೊಂಡಾಡಿದರು. ಗ್ರಾಮ ಪಂಚಾಯ್ತಿಯ ಗಣಕಯಂತ್ರ ಸಹಾಯಕರಾದ ಪದ್ಮರಾಜ್ ಸ್ವಾಗತಿಸಿದರು. ಆರೋಗ್ಯ ಸಮಿತಿಯ ಸದಸ್ಯರಾದ ಮಮತಾ ಚೇತನ್ ಕುಮಾರ್, ಗಣೇಶ್, ಮಧುಸೂದನ್, ರಮೇಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ರಾಧಾಶೇಖರ್, ಉಪಾಧ್ಯಕ್ಷರಾದ ಬಿ ಜೆ.ಕುಮಾರ್, ಶಿಕ್ಷಕರಾದ ಸೈಯದ್ ಸಮೀರ್, ಆರೋಗ್ಯಕೇಂದ್ರದ ಹಿರಿಯ ನಿರೀಕ್ಷಕ ಲೋಕೆಶ್, ಶ್ರೂಶೂಷಕಿಯರಾದ ಲಕ್ಷಿದೇವಿ, ಇಲಿಯಾಜ್ ಫಾಷ, ಆಸ್ಪತ್ರೆ ಸಿಬ್ಬಂದಿ ವರ್ಗದವರು ಹಾಜರಿದ್ದರು.ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಡಾ.ಅನಿಲ್ ಕುಮಾರ್ ಗ್ರಾಮಸ್ಥರು, ಗ್ರಾಮಪಂಚಾಯ್ತಿ ಅಧಿಕಾರಿಗಳು, ಸಾರ್ವಜನಿಕರು ಎಲ್ಲರೂ ಸಹಕರಿಸಿದ್ದನ್ನು ಸ್ಮರಿಸಿದರು. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.