ಮನೆಮದ್ದುಗಳ ಬಗ್ಗೆ ಜನಜಾಗೃತಿ ಅತ್ಯಗತ್ಯ

KannadaprabhaNewsNetwork |  
Published : Apr 28, 2025, 12:45 AM IST
ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾ.ಪಂ.ಯಿAದ ನಡೆದ ಮಹಿಳಾ ವಿಶೇಷ ಗ್ರಾಮಸಭೆಯನ್ನು ಗ್ರಾ.ಪಂ.ಅಧ್ಯಕ್ಷೆ ಹುನಕುಂಟೆ ಬಸಮ್ಮ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಿಳೆಯರು ಮಾನಸಿಕ ಒತ್ತಡದಿಂದ ಮುಕ್ತರಾಗುವ ನಿಟ್ಟಿನಲ್ಲಿ ಯೋಗ ಮತ್ತು ಧ್ಯಾನಕ್ಕೆ ಹೆಚ್ಚು ಒತ್ತು ನೀಡಬೇಕು.

ಹಗರಿಬೊಮ್ಮನಹಳ್ಳಿ: ಮಹಿಳೆಯರು ದುಡಿಮೆಯ ಭರದಲ್ಲಿ ಆರೋಗ್ಯ ನಿರ್ಲಕ್ಷ್ಯ ಮಾಡಬಾರದು ಎಂದು ಆಯುಷ್ ವೈದ್ಯಾಧಿಕಾರಿ ಡಾ.ಹಾಲಮ್ಮ ತಿಳಿಸಿದರು.

ತಾಲೂಕಿನ ಗದ್ದಿಕೇರಿ ಗ್ರಾಪಂದಿಂದ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಮಹಿಳಾ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಮಹಿಳೆಯರು ಮಾನಸಿಕ ಒತ್ತಡದಿಂದ ಮುಕ್ತರಾಗುವ ನಿಟ್ಟಿನಲ್ಲಿ ಯೋಗ ಮತ್ತು ಧ್ಯಾನಕ್ಕೆ ಹೆಚ್ಚು ಒತ್ತು ನೀಡಬೇಕು. ಆರೋಗ್ಯ ತಪಾಸಣೆ ಹೆಚ್ಚು ಸೂಕ್ತ. ಮನೆಮದ್ದು ಕುರಿತಂತೆ ಜಾಗೃತಿ ಅಗತ್ಯ. ಆರೋಗ್ಯವಂತ ಪ್ರಜೆಗಳಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂದರು.

ಪಿಡಿಒ ಮಾಗಳದ ನಿಂಗಪ್ಪ ಪ್ರಾಸ್ತಾವಿಕ ಮಾತನಾಡಿ, ಮಹಿಳೆಯರು ಕುಟುಂಬದ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದಾರೆ. ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸಮುದಾಯದ ಸಹಭಾಗಿತ್ವ ಅಗತ್ಯ ಎಂದರು.

ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಲ್. ಮಾರೆಪ್ಪ ಮಾತನಾಡಿ, ೧೮ ರಿಂದ ೭೦ವರ್ಷದೊಳಗಿನವರು ಜೀವ ಹೊಂದುವುದು ಸೂಕ್ತ. ಆರ್ಥಿಕ ಬಲವರ್ಧನೆಗೆ ಪೂರಕ ಚಟುವಟಿಕೆ ರೂಪಿಸಬೇಕಿದೆ ಎಂದರು.

ಪ್ರೌಢಶಾಲೆ ಮುಖ್ಯಶಿಕ್ಷಕ ಪಿ.ನಾಗೇಂದ್ರಪ್ಪ ಮಾತನಾಡಿದರು. ಇದೇ ವೇಳೆ ೪೫ಕ್ಕೂ ಹೆಚ್ಚು ಮಹಿಳೆಯರಿಗೆ ಗ್ರಾಪಂದಿಂದ ಉಡಿ ತುಂಬಲಾಯಿತು. ಗ್ರಾಪಂ ಅಧ್ಯಕ್ಷೆ ಹನಕುಂಟೆ ಬಸಮ್ಮ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಶಶಿಕಲಾ, ಉಪಾಧ್ಯಕ್ಷ ರಮೇಶ್ ಮಾತನಾಡಿದರು.

ಸದಸ್ಯರಾದ ಕಾತ್ರಕಿ ಬಸಮ್ಮ, ಗಡ್ಡಿ ಶೋಭಾ, ಜಿ.ಎಂ. ನಾಗರತ್ನಮ್ಮ, ಪಿ. ಅಂಜಿನಮ್ಮ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಧರ್ಮಬಾಯಿ ಇತರರಿದ್ದರು.

ಗ್ರಾಪಂ ಕಾರ್ಯದರ್ಶಿ ಸಿ.ಎಂ. ಮಹೇಶ್ವರ, ಗ್ರಾಪಂ ಸದಸ್ಯ ಪೂಜಾರ್ ಸುರೇಶ್, ಮುಖಂಡ ಒಮ್ಮಾರಿ ನಿಂಗಪ್ಪ, ಸಿ.ರಮೇಶ್ ನಿರ್ವಹಿಸಿದರು.

ಆರಂಭದಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''