ಆನಂದಪುರ: ಪಟ್ಟಣದಲ್ಲಿ ಪುರಾತನ ಇತಿಹಾಸವುಳ್ಳ ಬಸವನ ಬೀದಿಯ ಶ್ರೀ ವೀರಾಂಜನೇಯ ಸ್ವಾಮಿಯ ಮಹಾ ರಥೋತ್ಸವ ಜ.20ಕ್ಕೆ ನಡೆಯಲಿದೆ. ದೇವಾಲಯದಲ್ಲಿ 16ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜ.19ರಿಂದ 21 ರವರಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜ.20ನೇ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ವೀರಾಂಜನೇಯ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದ್ದು, 1 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ವೀರಾಂಜನೇಯ ಸ್ವಾಮಿ ಮಹಿಳಾ ಭಜನಾ ಮಂಡಳಿ ಹಾಗು ಕೋಟೆ ಆಂಜನೇಯ ಸ್ವಾಮಿ ಮಹಿಳಾ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ. 7 ಗಂಟೆಗೆ ಸೀತಾರಾಮ ಕಲ್ಯಾಣೋತ್ಸವ ಮತ್ತು ಶ್ರೀರಾಮ ಭಟ್ಟಾಭಿಷೇಕ ನಡೆಯಲಿದೆ.
ಜ .21ನೇ ಬುಧವಾರ ಬೆಳಗ್ಗೆ 9ಕ್ಕೆ ಶ್ರೀರಾಮ ತಾರಕ, ಇಕ್ಷಾ ಕಂಡ ಮಹಾಯಾಗ, ಮಧ್ಯಾಹ್ನ 1.30 ಕ್ಕೆ ಸಾಮೂಹಿಕ ಅನ್ನ ಸಂತರ್ಪಣೆ. ಸಂಜೆ 5ಕ್ಕೆ ಚನ್ನಶೆಟ್ಟಿಕೊಪ್ಪ ಜಾನಪದ ಕಲಾ ಸಂಘದವರಿಂದ ಸಂಸ್ಕೃತ ಕಾರ್ಯಕ್ರಮ. 6.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ನೀಡಲಿದೆ.ಕಾರ್ಯಕ್ರಮದ ಸಾನ್ನಿಧ್ಯವನ್ನು ಬಂಗಾರ ಮಕ್ಕಿಯ ಮಾರುತಿ ಗುರೂಜಿ ವಹಿಸಲಿದ್ದಾರೆ. ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿ, ಡಾ.ರಾಮಪ್ಪ ಸಿಗಂದೂರು, ಶ್ರೀಧರ್ ಭಟ್ ಗಮಿಕರ, ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಇತರ ಗಣ್ಯರು ಭಾಗವಹಿಸಲಿದ್ದಾರೆ.
ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು- ಮನ- ಧನದೊಂದಿಗೆ ಸಹಕರಿಸಿ ಎಂದು ಶ್ರೀ ವೀರಾಂಜನೇಯ ಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಹಾಲಪ್ಪ ಪತ್ರಿಕೆಗೆ ತಿಳಿಸಿದ್ದಾರೆ.