- ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ಮಾಹಿತಿ - - -
ಕನ್ನಡ ನಾಡು, ನುಡಿ, ಗಡಿ, ಜಲ ರಕ್ಷಣೆಗೆ ಕಂಕಣಬದ್ಧರಾಗಿರುವ ೭೮ ಲಕ್ಷದಷ್ಟು ಕಾರ್ಯಕರ್ತರಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಮೇಲೆ ನಂಬಿಕೆ ಇಟ್ಟಿದ್ದಾರೆ. ಕನ್ನಡದ ನಾಡು, ನುಡಿ, ಜಲ, ನೆಲದ ವಿಚಾರದಲ್ಲಿ ಧಕ್ಕೆಯಾದರೆ ಅದಕ್ಕೆ ಸರಿಯಾದ ಉತ್ತರ ಕೊಡುವವರು ಕಾರ್ಯಕರ್ತರು ಮಾತ್ರ. ಆದ್ದರಿಂದ ಸಂಘಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಸೇರಬೇಕು. ಇದಕ್ಕಾಗಿ ಕನ್ನಡದ ದೀಕ್ಷಾ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ ಎಂದು ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಕನ್ನಡ ದೀಕ್ಷೆ ಕಾರ್ಯಕ್ರಮ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಜಗಳೂರು ತಾಲೂಕಿಗೆ ಇಮಾಂ ಸಾಹೇಬರ ಅಸ್ಮಿತೆಯ ಬಹಳ ಇದೆ. ಜಿಲ್ಲಾಮಟ್ಟದಲ್ಲಿ ಕನ್ನಡ ದೀಕ್ಷೆ ಕಾರ್ಯಕ್ರಮವನ್ನು ಫೆಬ್ರವರಿ ಕೊನೆಯ ವಾರದಲ್ಲಿ ಮಾಡಲಾಗುತ್ತದೆ. ಈ ನೆಲದ ಯುವಕರಿಗೆ ಕನ್ನಡದ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವುದು ಕನ್ನಡದ ದೀಕ್ಷೆ ಕೊಡುವ ಕಾರ್ಯಕ್ರಮ ಉದ್ದೇಶ ಎಂದರು.ಎಲ್ಲ ಗ್ರಾಮ ಘಟಕಗಳನ್ನು ಕಟ್ಟಿ ಸಂಘಟನೆ ಬೆಳೆಸಬೇಕು. ಸಂಘಟನೆಯಲ್ಲಿ ಉತ್ತಮ ಕೆಲಸ ಮಾಡಿದರೆ ಬೆನ್ನು ತಟ್ಟುತ್ತೇವೆ. ಇಲ್ಲವಾದರೆ ಕಿವಿ ಹಿಂಡುತ್ತೇವೆ. ಜಗಳೂರು ಘಟಕ ಕಡೆಯಿಂದ ಉತ್ತಮ ಸಂಘಟನೆಯನ್ನು ಮಾಡಿ ಗಟ್ಟಿಯಾಗಿ ನಿಲ್ಲಬೇಕು. ಆಗ ಎಲ್ಲ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಮುಂದಿನ ದಿನಗಳಲ್ಲಿ ಜಗಳೂರನ್ನು ಕರವೇ ಶಕ್ತಿಕೇಂದ್ರ ಎಂಬಂತೆ ಸಂಘಟಿಸಬೇಕಾಗಿದೆ ಎಂದರು.
ಜಿಲ್ಲಾ ಸಂಚಾಲಕ ಲುಕ್ಮಾನ್ ಮಾತನಾಡಿ, ಕರವೇ ಸಂಘಟನೆ ಇಲ್ಲದಿದ್ದರೆ ಕನ್ನಡ ಉಳಿಯುತ್ತಿರಲಿಲ್ಲ. ೨೨೪ ಕ್ಷೇತ್ರಗಳಲ್ಲಿ ನಮ್ಮ ಸಂಘಟನೆಗಳು ಇವೆ. ಯಾವುದೇ ಜಾತಿಭೇದ ಇಲ್ಲದೇ ಕನ್ನಡದ ಹೋರಾಟಕ್ಕೆ ಕನ್ನಡದ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆಗಳು ಬರಲಿ, ಗಟ್ಟಿತನದಿಂದ ನಮ್ಮ ಕಾರ್ಯಕರ್ತರು ಹೋರಾಟ ಮಾಡುತ್ತಾರೆ ಎಂದು ತಿಳಿಸಿದರು.
- - -
- ಬಸಮ್ಮ, ಜಿಲ್ಲಾಧ್ಯಕ್ಷೆ. ಕರವೇ.
-೦೪ಜೆಎಲ್ಆರ್೦೧: ಜಿಲ್ಲಾಮಟ್ಟದ ಕನ್ನಡ ದೀಕ್ಷೆ ಕಾರ್ಯಕ್ರಮ ಪೂರ್ವಭಾವಿ ಸಭೆಯನ್ನು ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.