- ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಭಾಂಗಣದಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ
ಕಳೆದ 28 ವರ್ಷಗಳಿಂದ ಸೋಷಿಯಲ್ ವೆಲ್ ಸೊಸೈಟಿ ಮೂಲಕ ಮಹಿಳಾ ಸಂಘದಿಂದ ಹಲವಾರು ಕಾರ್ಯಕ್ರಮ ನಡೆಸಿದ್ದೇವೆ ಎಂದು ಕಳ್ಳಿಕೊಪ್ಪ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಮೀಳಾ ರೆಡ್ಡಿ ತಿಳಿಸಿದರು.
ಗುರುವಾರ ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಭಾಂಗಣದಲ್ಲಿ ಕಳ್ಳಿಕೊಪ್ಪ ಮಹಿಳಾ ಸ್ವಸಹಾಯ ಗುಂಪುಗಳು, ಆರ್ಥಿಕ ಸಾಕ್ಷರತಾ ಕೇಂದ್ರ ಹಾಗೂ ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಸಹಾಯ ಸಂಘಗಳ ಸದಸ್ಯರ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕುಗಳ ಮೂಲಕ ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿದ್ದೇವೆ ಎಂದರು.ಸೋಷಿಯಲ್ ವೆಲ್ ಫೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿ,ಸೋಷಿಯಲ್ ವೆಲ್ ಫೇರ್ ಸೊಸೈಟಿ ಕಳೆದ 35 ವರ್ಷಗಳಿಂದ ಗ್ರಾಮೀಣ ಪ್ರದೇಶದ ಜನರ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮ ರೂಪಿಸಿಕೊಂಡು ಅವರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ ನೀಡಿ ಬ್ಯಾಂಕುಗಳ ಮೂಲಕ ಸಾಲದ ಸೌಲಭ್ಯ ಒದಗಿಸಿಕೊಟ್ಟಿದ್ದೇವೆ. ಇದರಿಂದ ಸ್ವಸಹಾಯ ಗುಂಪುಗಳ ಸದಸ್ಯರು ಉದ್ಯೋಗ ನಡೆಸಿ ಆರ್ಥಿಕ ವಾಗಿ ಸಬಲರಾಗಿದ್ದಾರೆ ಎಂದರು.
ಅತಿಥಿಯಾಗಿದ್ದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರೋಹಿತ್ ಮಾಹಿತಿ ನೀಡಿ, ಅಡಕೆ, ಕಾಳುಮೆಣಸು ಹಾಗೂ ಇತರೆ ಬೆಳೆಗಳಿಗೆ ಬೇಕಾಗುವ ಪೋಷಕಾಂಶ, ಬೆಳೆಗಳಿಗೆ ತಗಲುವ ರೋಗಗಳ ಬಗ್ಗೆ ಮಾಹಿತಿ ನೀಡಿದರು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ಅಮರನಾಥ್ ಮಾತನಾಡಿ, ನಮ್ಮ ಬ್ಯಾಂಕಿನಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಸ್ವ ಉದ್ಯೋಗ ನಡೆಸಲು ಸಾಲ ನೀಡಲಾಗುವುದು. ವ್ಯಾಪಾರ, ಕೈಗಾರಿಕೆ ಚಟುವಟಿಕೆಗಳಿಗೆ ಸಬ್ಸಿಡಿ ನೀಡುತ್ತೇವೆ.ಮಕ್ಕಳಿಗೆ ಜೀರೋ ಬ್ಯಾಲೆನ್ಸ್ ಅಕೌಂಟ್ ತೆರೆಯಲು ಅವಕಾಶ ಇದೆ ಎಂದರು.ಕೆನರಾ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಪ್ರಕಾಶ್ ಮಾಹಿತಿ ನೀಡಿ, ಕೆನರಾ ಬ್ಯಾಂಕಿನಿಂದ ದೊರೆವ ಸಾಲಗಳ ಬಗ್ಗೆ ವಿವರಿಸಿದರು. ಅಮೂಲ್ಯ ಸಾಕ್ಷರತ ಸೌಕ್ಷರತಾ ಕೇಂದ್ರದ ರಂಜಿತ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಮಾಹಿತಿ ನೀಡಿದರು.ಕೃಷಿ ಇಲಾಖೆ ರಂಜಿತ ಮಾಹಿತಿ ನೀಡಿ, ಕೃಷಿ ಇಲಾಖೆಯಿಂದ ರೈತರಿಗೆ ಸ್ಪಿಂಕ್ಲರ್, ಪೈಪ್ ಗಳಿಗೆ ಸಹಾಯ ಧನ ನೀಡಲಾಗುವುದು ಎಂದರು. ಮದರ್ ಸಂಸ್ಥೆ ಆರ್ಥಿಕ ಪ್ರಚಾರಕಿ ಸುನೀತ ಬ್ಯಾಂಕುಗಳ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಮೆಣಸೂರು ಗ್ರಾಪಂ ಉಪಾಧ್ಯಕ್ಷೆ ಪಚ್ಚಮ್ಮ, ಸೊಸೈಟಿ ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಸಿನಿ ಜೋರ್ಜ್ ಸಾಂತ್ವನ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ಶೃಂಗೇರಿ ಸಾಕ್ಷರತಾ ಕೇಂದ್ರದ ಸೌಮ್ಯ ಮಾಹಿತಿ ನೀಡಿದರು. ಆಶಾ ಸ್ವಾಗತಿಸಿದರು. ಸುನೀತ ಕಾರ್ಯಕ್ರಮ ನಿರೂಪಿಸಿದರು. ವಿನುತ ವಂದಿಸಿದರು.