ಕನ್ನಡಪ್ರಭ ವಾರ್ತೆ ಹಾಸನ
ನಗರದ ಆದಿಚುಂಚನಗಿರಿ ಮಠದ ನವನಾಥ ಯಾಗ ಮಂಟಪದಲ್ಲಿ ಶನಿವಾರ ಹಮಿಕೊಂಡಿದ್ದ ೧೩೬ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದಲ್ಲಿ ಕುವೆಂಪು ಸರಣೆ ಉಪನ್ಯಾಸ ನೀಡಿದರು. ಜಗತ್ತಿನ ದುಃಖವನ್ನು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದವರು ಕುವೆಂಪು. ೧೦ನೇ ಶತಮಾನದಲ್ಲಿ ಪಂಪ ಯುಗ, ೧೫ನೇ ಶತಮಾನವನ್ನು ಕುಮಾರ ಯುಗ, ೧೨ನೇ ಶತಮಾನವನ್ನು ಬಸವ ಯುಗ ಮತ್ತು ೨೧ನೇ ಶತಮಾನವನ್ನು ಕುವೆಂಪು ಯುಗ ಎಂದು ಕರೆಯುತ್ತೇವೆ. ರಾಮಾಯಣ ದರ್ಶನಂ ಎಂಬ ಮಹಾಕಾವ್ಯ ನಮನ್ನು ಸಾಕಷ್ಟು ಚಿಂತನೆಗೆ ದೂಡುತ್ತದೆ. ಕತ್ತಲೆಯಲ್ಲಿರುವವರಿಗೆ ಮಾತ್ರ ಚಂದ್ರನ ಮೌಲ್ಯ ತಿಳಿಯುವಂತೆ, ಸಮಾಜ ಸಂಕಷ್ಟದಲ್ಲಿರುವಾಗ ಕುವೆಂಪು ಚಿಂತನೆಯ ಮಹತ್ವ ಗೊತ್ತಾಗುತ್ತದೆಂದರು.
ಭಾರತದಲ್ಲಿ ಯಾವುದೇ ಕವಿ ಸಾಹಿತ್ಯ ರಚನೆ ಮಾಡುವಾಗ ಕುವೆಂಪು ಅವರ ಪ್ರೇರಣೆ ಹಂತವಾಗಿ ಕೆಲಸ ಮಾಡುತ್ತದೆ. ಮಹಾಕಾವ್ಯ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶೆ ಸೇರಿ ಸಾಹಿತ್ಯದ ಪ್ರಕಾರಗಳಲ್ಲಿ ಅಸಾಧಾರಣ ಎತ್ತರ ತಲುಪಿದವರು ಕುವೆಂಪು. ೩೫ನೇ ವಯಸ್ಸಿಗೆ ಮಹಾಕಾವ್ಯ ರಚಿಸಿದ ಅವರು, ೨೦ನೇ ವಯಸ್ಸಿನಲ್ಲಿ ನಾಡಗೀತೆಯನ್ನು ಬರೆದಿರುವುದು ಅಪರೂಪದ ಸಾಧನೆ ಎಂದರು. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮೂಖ್ಯರಲ್ಲ ಎಂಬುದೇ ಅವರ ಸಾಹಿತ್ಯದ ತಿರುಳು. ಲೋಕದಿಂದ ನಿಂದನೆಗೆ ಗುರಿಯಾದ ಕೈಕೆಯಿ ಮತ್ತು ಮಂಥರೆಯಂತಹ ಪಾತ್ರಗಳಲ್ಲೂ ಮಾನವೀಯತೆ ಮತ್ತು ಮಮತೆಯನ್ನು ಹುಡುಕಿದ ಕುವೆಂಪು, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮಹತ್ವವೆಂದು ಸಾರಿದ್ದಾರೆ ಎಂದರು.೧೩೬ ಕಾರ್ಯಕ್ರಮಗಳು ವ್ಯರ್ಥವಲ್ಲ: