ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಕಪ್ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ನೋಡೋಣ ಇನ್ನೂ ಅದು ದೊಡ್ಡ ಮ್ಯಾಚ್ ಇದೆ. ಸಿಎಂ ಕಪ್ ರೇಸ್‌ನಲ್ಲಿ ನಾನಿಲ್ಲ. ಸಿಎಂ ಕಪ್ ಯಾರಿಗೆ ಕೊಡಬೇಕು, ಬಿಡಬೇಕು ಎಂಬುದು ದೆಹಲಿ ಹಾಗೂ ರಾಜ್ಯ ಮಟ್ಟದಲ್ಲಿ ಇದೆ. ಅಲ್ಲಿ ನೀವು ಕೇಳಿದರೆ ಗೊತ್ತಾಗುತ್ತದೆ, ನನಗದು ಗೊತ್ತಿಲ್ಲ. ಯಾರನ್ನು ತೆಗೀಬೇಕು, ಇಡಬೇಕು ಎಂಬ ನಿರ್ಧಾರ ಅವರದ್ದು, ಬಜೆಟ್ ನಂತರ ಅಧಿಕಾರ ಬದಲಾವಣೆ ಬಗ್ಗೆ ದೆಹಲಿಯವರಿಗೆ ಕೇಳಬೇಕು. ಅಲ್ಲಿ ಕೇಳಿದರೆ ಸರಿಯಾದ ಉತ್ತರ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಳ್ಳಾರಿ ಘಟನೆ ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಬಹಳ ಸಣ್ಣ ಘಟನೆ, ಅದಾಗಬಾರದಿತ್ತು. ಪೊಲೀಸರ ತನಿಖೆ ಬಳಿಕ ತಪ್ಪಿತಸ್ಥರು ಯಾರೆಂದು ತಿಳಿಯಲಿದೆ. ಅಲ್ಲಿ ಪೊಲೀಸರಿಂದ ಸರಿಯಾಗಿ ನಿರ್ವಹಣೆ ಆಗದೇ ಇರುವ ಕಾರಣ ಅಲ್ಲಿನ ಎಸ್ಪಿಯನ್ನು ಸಸ್ಪೆಂಡ್ ಮಾಡಲಾಗಿದೆ. ಸದ್ಯಕ್ಕೆ ಅಲ್ಲಿನ ವಾತಾವರಣ ತಿಳಿಯಾಗಿದೆ. ಪೊಲೀಸರ ತನಿಖೆ ಬಳಿಕವಷ್ಟೇ ತಪ್ಪಿತಸ್ಥರ ಬಗ್ಗೆ ತಿಳಿಯಲಿದೆ. ಈ ಘಟನೆ ಬಗ್ಗೆ ಸಿಒಡಿ ತನಿಖೆ ನಡೆಸಲು ಚರ್ಚೆ ನಡೆದಿದೆ. ಅದರ ವರದಿ ಬಂದ ಬಳಿಕ ಈ ಬಗ್ಗೆ ಮಾತನಾಡಬಹುದು ಎಂದು ಹೇಳಿದರು.ಇವಿಎಂ ಹ್ಯಾಕ್ ಬಗ್ಗೆ ಎಲ್ಲರಿಗೂ ತಿಳಿಸುವ ಪ್ರಯತ್ನ ಕಾಂಗ್ರೆಸ್‌ನಿಂದ ನಡೆದಿದೆ. ಈ ಬಗ್ಗೆ ತಿಳುವಳಿಕೆ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ. ನರೇಗಾ ವಿಚಾರದಲ್ಲೂ ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮ ಕೈಬಿಟ್ಟಿದೆ. ಇದು ಬಡವರ ವಿರೋಧವಾಗಿರುವ ಕಾನೂನು. ಯಾವ ಪಂಚಾಯಿತಿಗೆ ಹಣ ಬಿಡುಗಡೆ ಮಾಡಬೇಕೆಂಬ ತೀರ್ಮಾನ ಅವರದ್ದು, ಶೇ. 60-40 ರಷ್ಟು ಕೇಂದ್ರದ್ದೆ ಹೆಚ್ಚಿದೆ. ನಮ್ಮಲ್ಲಿ ಬಲ ಹೆಚ್ಚಿಲ್ಲ. ಹಾಗಾಗಿ ವಿರೋಧ ಮಾಡುತ್ತಿದ್ದೇವೆ. ದೆಹಲಿಯಲ್ಲಿ ಕೂತು ಯಾವುದೋ ಪಂಚಾಯಿತಿಗೆ ನೀಡಿದರೆ ನಾವು ಹೇಗೆ ಬಲ ತೋರಿಸೋದು? ಮೊದಲು ಪಂಚಾಯಿತಿ ಮಟ್ಟದಲ್ಲಿ ಅಧಿಕಾರ ಇತ್ತು. ಈಗ ದೆಹಲಿಯಲ್ಲಿ ಅಧಿಕಾರ ಇದೆ. ಹೇಗೆ ಮಾಡೋದು? ಇದನ್ನು ವಿರೋಧ ಮಾಡಲೇಬೇಕು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಶಿವಮೊಗ್ಗಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಜಾರಕಿಹೊಳಿಹೆಲಿಕ್ಯಾಪ್ಟರ್ ಮೂಲಕ ಬಂದಿಳಿದರು. ಈ ವೇಳೆ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಘೋಷಣೆ ಕೂಗಿದರು. ಬೆಂಬಲಿಗರ ಕೂಗೂ ಕೇಳಿದ ಸಚಿವ ಸತೀಶ್ ಜಾರಕಿಹೊಳಿ ನೀವು ಹೀಗೆ ಕೂಗೋದು ಬಿಟ್ಟರೆ ಲೀಡರ್ ಆಗ್ತೀರಾ ಎಂದು ಹೇಳಿದರು.