ಮೆರವಣಿಗೆಯೊಂದಿಗೆ ಚುಂಚನಕಟ್ಟೆ ಜಾತ್ರೆಗೆ ರಾಜೇಗೌಡರ ಹೋರಿಗಳು

KannadaprabhaNewsNetwork |  
Published : Jan 05, 2026, 01:45 AM IST
4ಎಚ್ಎಸ್ಎನ್11 :  | Kannada Prabha

ಸಾರಾಂಶ

ಹೋರಿಗಳನ್ನು ಅಲಂಕರಿಸಿ ನಾದಸ್ವರ, ಡಿಜೆ ಸೌಂಡ್ಸ್‌ನೊಂದಿಗೆ ಗ್ರಾಮದಿಂದ ಗ್ರಾಮಸ್ಥರು ಹಾಗೂ ಕುಟುಂಬದವರೊಂದಿಗೆ ಮೆರವಣಿಗೆಯಲ್ಲಿ ಹೋರಿಗಳನ್ನ ಪಟ್ಟಣಕ್ಕೆ ಕರೆತರಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅನಕೃ ವೃತ್ತಕ್ಕೆ ತೆರಳಿ ಅಲ್ಲಿಂದ ವಾಹನಗಳಲ್ಲಿ ಹೋರಿಗಳನ್ನು ಜಾತ್ರೆಗೆ ಕರೆದೊಯ್ದರು.

ಕನ್ನಡಪ್ರಭ ವಾರ್ತೆ ಅರಕಲಗೂಡುತಾಲೂಕಿನ ಕಸಬಾ ಹೋಬಳಿ ನೈಗೆರೆ ಕೊಪ್ಪಲು ಗ್ರಾಮದ ರೈತ ರಾಜೇಗೌಡ ತಾವು ಸಾಕಿದ್ದ ಐದು ಹಳ್ಳಿಕಾರ್ ತಳಿ ಹೋರಿಗಳನ್ನು ಶುಕ್ರವಾರ ಅದ್ಧೂರಿ ಮೆರವಣಿಗೆ ನಡೆಸಿ ಚುಂಚನಕಟ್ಟೆ ಜಾತ್ರೆಗೆ ಕರೆದೊಯ್ದರು. ಹೋರಿಗಳನ್ನು ಅಲಂಕರಿಸಿ ನಾದಸ್ವರ, ಡಿಜೆ ಸೌಂಡ್ಸ್‌ನೊಂದಿಗೆ ಗ್ರಾಮದಿಂದ ಗ್ರಾಮಸ್ಥರು ಹಾಗೂ ಕುಟುಂಬದವರೊಂದಿಗೆ ಮೆರವಣಿಗೆಯಲ್ಲಿ ಹೋರಿಗಳನ್ನ ಪಟ್ಟಣಕ್ಕೆ ಕರೆತರಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅನಕೃ ವೃತ್ತಕ್ಕೆ ತೆರಳಿ ಅಲ್ಲಿಂದ ವಾಹನಗಳಲ್ಲಿ ಹೋರಿಗಳನ್ನು ಜಾತ್ರೆಗೆ ಕರೆದೊಯ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷಿಕ ರಾಜೇಗೌಡ, ಹಳ್ಳಿಕಾರ್‌ ತಳಿಗಳ ಹೋರಿಗಳನ್ನು ಸಾಕುವುದು ತಮ್ಮ ಹವ್ಯಾಸವಾಗಿದೆ. ಲಾಭ, ನಷ್ಟಗಳನ್ನು ಯೋಚಿಸದೆ ಕಳೆದ 30 ವರ್ಷಗಳಿಂದ ಈ ಕಾರ್ಯ ನಡೆಸುತ್ತಿದ್ದೇನೆ. ಚೆನ್ನಾಗಿ ಸಾಕಿದ ಹೋರಿಗಳ ಮೆರವಣಿಗೆ ನಡೆಸಿ ಚುಂಚನಕಟ್ಟೆ ಜಾತ್ರೆಯಲ್ಲಿ ಪ್ರದರ್ಶನ ಮತ್ತು ಮಾರಾಟ ನಡೆಸುತ್ತೇನೆ. ಇದಕ್ಕೆ ತಮ್ಮ ಕುಟುಂಬದವರ ಪ್ರೋತ್ಸಾಹ ಸಹ ಇದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಪಿ. ಶ್ರೀಧರ್‌ ಗೌಡ, ಹೋರಿಗಳ ಸಾಕಣೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ರಾಜೇಗೌಡರು ಉತ್ತಮವಾಗಿ ಹೋರಿಗಳನ್ನು ಸಾಕಿ ಜಾತ್ರೆಗೆ ಮೆರವಣಿಗೆಯಲ್ಲಿ ಕರೆದೊಯ್ಯತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದು ಶುಭಹಾರೈಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!