ಕನ್ನಡಪ್ರಭ ವಾರ್ತೆ ಮೈಸೂರುಜನಚೈತನ್ಯ ಫೌಂಡೇಷನ್ ವತಿಯಿಂದ ಶಂಕರ್ ನಾಗ್ ಅವರ ನೆನಪಿನಲ್ಲಿ ನಗರದ ಜೆಎಲ್‌ಬಿ ರಸ್ತೆ ನಾದಬ್ರಹ್ಮ ಸಭಾದಲ್ಲಿ ಗುರುವಾರ ಸಂತೋಷಕ್ಕೆ ಹಾಡು ಸಂತೋಷಕ್ಕೆ- ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಇದೇ ಸಂದರ್ಭದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜು ವಿ. ಬೈರಿ ಅವರಿಗೆ ಚೈತನ್ಯ ರತ್ನ ಹಾಗೂ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ಮಾಧ್ಯಮ ಚೈತನ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರಪಾಲಿಕೆ ಜಂಟಿ ಆಯುಕ್ತ ಡಿ. ನಾಗೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ವಿಶೇಷ ಆಹ್ವಾನಿತರಾಗಿದ್ದರು. ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಆರ್. ಲಕ್ಷ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಖ್ಯಾತ ಹಿನ್ನಲೆ ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್, ಡಾ.ರಾಜ್ ಕುಮಾರ್, ಜೇಸುದಾಸ್, ಎಸ್. ಜಾನಕಿ, ವಾಣಿ ಜಯರಾಂ, ಚಿತ್ರಾ, ಮಹಮ್ಮದ್ ರಫಿ, ಕಿಶೋರ್ ಕುಮಾರ್, ಕುಮಾರ್ ಸಾನು, ಉದಿತ್ ನಾರಾಯಣ್ ಅವರು ಹಾಡಿರುವ 40 ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಜನಚೈತನ್ಯ ಫೌಂಡೇಷನ್ ಅಧ್ಯಕ್ಷ ಆರ್. ಲಕ್ಷ್ಮಣ್ ಅವರ ಸಾರಥ್ಯದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂನ ಜನಪ್ರಿಯ ಚಿತ್ರಗೀತೆಗಳನ್ನು ಜಾಯ್ಸ್ ವೈಶಾಖ್, ಎಸ್. ಅಮರ್, ಡಾ.ಸುಮಾ, ಡಾ.ಟಿ.ಕೆ. ಪ್ರಕಾಶ್, ಅಶ್ವಿನ್ ಅತ್ರಿ, ವೈ.ಎಂ. ನಾಗೇಂದ್ರ, ಡಾ.ಎಂ.ಒ. ಮನು, ಡಾ.ಎ.ಎಸ್. ಪೂರ್ಣಿಮಾ, ನಾಗೇಂದ್ರ, ಶೇಷಾದ್ರಿ, ಬಿ. ಸೌಮ್ಯಾ ಪ್ರಕಾಶ್, ಶಾಂತಕುಮಾರಿ, ಸಂತೋಷ್ ನಾಯರ್, ರವಿಕುಮಾರ್,. ಲೀಲಾವತಿ, ಡಿ. ನಾಗೇಶ್, ವಿಜಯ್ ಆನಂದ್ ಅವರು ಹಾಡಿ, ಕಿಕ್ಕಿರಿದು ಸೇರಿದ್ದ ಸಭಿಕರನ್ನು ರಂಜಿಸಿದರು. ಪಿ. ಗುರುಸ್ವಾಮಿ, ಸಿ, ಸಬಿತಾ, ಟಿ. ಚೇತನ್, ಶ್ರೀನಿವಾಸ್, ಜಿ. ಪೀಟರ್, ವಿ. ಪ್ರಶಾಂತ್, ಡಿ.ಎಲ್. ವಿಕಾಸ್ ಮೊದಲಾದವರು ಸಾಥ್ ನೀಡಿದರು. ಕನ್ನಡ ಹಾಡುಗಳ ಕಲರವ...ಪಂಚಭಾಷೆಗಳ ಗೀತಗಾಯನವಿದ್ದರೂ ಕನ್ನಡದ ಹಾಡುಗಳ ಕಲರವ ಜೋರಾಗಿತ್ತು. ಸಂತೋಷಕ್ಕೆ ಹಾಡು ಸಂತೋಷಕ್ಕೆ, ಚಿಂತೆ ಯಾಕೆ ಮಾಡುತೀಯ ಗೆಳೆಯ, ಸೂರ್ಯಂಗು ಚಂದ್ರಂಗೂ, ನಾನು ನೀನು ಒಂದಾದ ಮೇಲೆ, ಒಂದೆಯ ಬಾಳಿನ ಬೆಳಕಾಗಿ, ತಂಗಾಳಿಯಂತೆ ಬಾಳಲ್ಲಿ ಬಂದೆ, ಆನಂದವೇ ಮೈದುಂಬಿದೆ, ಕೆಣಕುತಿದೆ ನಿನ್ನ ಕಣ್ಣೋಟ, ಕುಶಲೇ ಕ್ಷೇಮವೇ, ನಗುನಗುತಾ ನಲಿ, ಬೆಳದಿಂಗಳು ನಗುತಿದೆ, ನಾದಮಯ ಈ ಲೋಕವೆಲ್ಲಾ ನಾದಮಯ, ಈ ಬಿಂಕ ಬಿಡು ಬಿಡು, ಭೂಮಿ ತಾಯಾಣೆ ನೀ ಇಷ್ಟ ಕಣೆ, ಯಾರಮ್ಮ ಇವಳು ನಶೆಯ ಹುಡುಗಿ, ತಪ್ಪು ಮಾಡದವ್ರು ಯಾರವ್ರೆ, ಪ್ಯಾರ್ಗೆ ಆಗ್ ಬಿಟೈತೆ, ಹೃದಯದಲ್ಲಿ ಇದೇನಿದು, ಆಟುವು ಚೆನ್ನ, ನೋಟವು ಚೆನ್ನ, ಜೊತೆಯಲಿ ಜೊತೆ ಜೊತೆಯಲಿ, ಯಾವ ಶಿಲ್ಪಿ ಕಂಡ ಕನಸು ನೀನು, ಭಾಗ್ಯ ಎನ್ನಲೇ ಪುಣ್ಯ ಎನ್ನಲೇ, ಉಸಿರೇ ಉಸಿರೇ, ಬೊಂಬೆ ಹೇಳುತೈತೆ...ಈ ಕನ್ನಡ ಹಾಡುಗಳಿಗೆ ಸಭಿಕರ ಸ್ಪಂದನೆ ಜೋರಾಗಿತ್ತು.