ಮಲೇಬೆನ್ನೂರು: ಪಟ್ಟಣದ ಪುರಸಭೆಯ ೨೦೨೫- ೨೦೨೬ನೇ ಸಾಲಿನ ಆಯ-ವ್ಯಯವನ್ನು ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ಮಂಡಿಸಲಾಯಿತು.
ಸದಸ್ಯ ನಯಾಜ್ ಬಜೆಟ್ ಸಭೆಗೆ ನಾಗರೀಕರ ಸಹಕಾರ, ಸಲಹೆ ಪಡೆದು, ಸದಸ್ಯರ ಸಲಹೆ ಪಡೆದಿಲ್ಲ. ಎರಡೂವರೆ ತಿಂಗಳಿಂದ ಸಾಮಾನ್ಯ ಸಭೆ ನಡೆಸಿಲ್ಲ, ಸಂವಿಧಾನದ ಅಶಯದಂತೆ ಸದಸ್ಯರ ಅಧಿಕಾರ ಕುಸಿಯತೊಡಗಿದೆ. ಜನರ ಸಮಸ್ಯೆ ಬಗೆಹರಿಸುವವರಾರು ಎಂದು ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಅವರನ್ನು ಪ್ರಶ್ನಿಸಿದರು.
ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ್ ಮಾತನಾಡಿ, ನೀರಾವರಿ ನಿಗಮ ನಿವೇಶನದಲ್ಲಿ ಪುರಸಭಾ ಕಚೇರಿಗೆ ಸ್ಥಳ ನಿಗದಿಪಡಿಸಲು ಪತ್ರ ಬರೆದಿದ್ದು, ಸಚಿವ ಸಂಪುಟದಲ್ಲಿ ನಿರ್ಣಯ ಆಗಿ ನಂತರ ರಾಜ್ಯಪಾಲರ ಅನುಮತಿ ಅಗತ್ಯ ಆಗಿರುವ ಕಾರಣ ಆ ಸ್ಥಳವು ರದ್ದಾಗಿದೆ ಎಂದು ತಿಳಿಸಿದರು.ಉಪಾಧ್ಯಕ್ಷ ವಿಜಯಲಕ್ಷ್ಮೀ, ಸದಸ್ಯರಾದ ಷಾ ಅಬ್ರಾರ್, ವೀರಯ್ಯ, ಸಾಬಿರ್ ಅಲಿ, ಮಂಜುಳಾ, ನಗೀನಾ ಬಾನು, ಮಂಜಣ್ಣ ಮಾತನಾಡಿ, ನೀರಿನ ಪೈಪ್, ಚರಂಡಿಗಳ ಸ್ವಚ್ಛತೆ, ಅಲೆಮಾರಿ ಜನಾಂಗಕ್ಕೆ ಸೌಲಭ್ಯ ಸೇರಿ ತಮ್ಮ ವಾರ್ಡ್‌ಗಳ ಸಮಸ್ಯೆ ಹೇಳಿಕೊಂಡರು.
ಅಧಿಕಾರಿ ಅವಿನಾಶ್ ಸಭೆಯಲ್ಲಿ ರಾಜಸ್ವ ನಿರೀಕ್ಷಿತ ಆದಾಯ, ರಾಜಸ್ವ ನಿರೀಕ್ಷಿತ ವೆಚ್ಚ ಹಾಗೂ ಅಸಾಧಾರಣ ವೆಚ್ಚವನ್ನು ಸಭೆ ಗಮನಕ್ಕೆ ಓದಿದರು. ₹೨೨ ಕೋಟಿ ಆದಾಯ ನಿರೀಕ್ಷಿಸಿದರೆ, ₹೨೧ ಕೋಟಿ ಖರ್ಚು ಆಗುವ ವಿವರ ನೀಡಿದರು. ಎಂಜಿನಿಯರ್ ರಾಘವೇಂದ್ರ, ಶಿವರಾಜ್ ಸಭೆಯ ವರದಿ ದಾಖಲಿಸಿದರು.- - -
-೨೭ಎಂಬಿಆರ್೧.ಜೆಪಿಜಿ:ಮಲೇಬೆನ್ನೂರು ಪುರಸಭೆಯಲ್ಲಿ ಆಯವ್ಯಯ ಮಂಡನೆ ಸಭೆ ನಡೆಯಿತು.