ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ವಿಶ್ವವಿದ್ಯಾನಿಲಯವು ದಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾರತೀಯ ಜ್ಞಾನ ಪರಂಪರೆ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಭಾರತೀಯರ ಮೇಲಿರುವ ಆರ್ಯ-ದ್ರಾವಿಡ ಆಕ್ರಮಣ, ವಲಸೆ ಸಿದ್ಧಾಂತಗಳು ಬ್ರಿಟಿಷ್ ಕಾಲದಲ್ಲಿ ಬರೆದ ಕಟ್ಟು ಕತೆಯಾಗಿದೆ. ಭಾರತೀಯರು ಬ್ಯಾಬಿಲೋನ್, ಗ್ರೀಸ್ ನಾಗರಿಕತೆಯಿಂದ ಜ್ಞಾನ ವ್ಯವಸ್ಥೆಗಳನ್ನು ಅಳವಡಿಕೊಂಡರು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಬದಲಿಗೆ, ಮಾನವೀಯ, ಪ್ರಬುದ್ಧ ತತ್ತ್ವಗಳನ್ನೊಳಗೊಂಡ ಸ್ವತಂತ್ರ ಅಭಿವೃದ್ಧಿ ಜ್ಞಾನ ವ್ಯವಸ್ಥೆಗಳಿಂದಾಗಿ ಭಾರತ ಅಭಿವೃದ್ಧಿಯಾಯಿತು ಎಂದು ಪುರಾತತ್ತ್ವಶಾಸ್ತ್ರ ಹೇಳುತ್ತದೆ ಎಂದರು.ಅಸಂಸ್ಕೃತ, ಆಕ್ರಮಣಕಾರಿ, ಅಮಾನವೀಯ ತತ್ತ್ವಚಿಂತನೆಗಳನ್ನು ಭಾರತೀಯರು ಅನುಸರಿಸುತ್ತಿದ್ದರು ಎಂಬುದು ಬ್ರಿಟಿಷ್ ನಿರ್ಮಿತ ನಕಲಿ ಇತಿಹಾಸವಾಗಿದೆ. ಇತ್ತೀಚಿನ ನಾಗರಿಕತೆಯ ಒಳಹರಿವಿನೊಂದಿಗೆ ಭಾರತ ಅಭಿವೃದ್ಧಿಗೊಂಡಿತು ಎಂಬುದು ಕಪೋಕಲ್ಪಿತಕತೆಯಾಗಿದ್ದು, ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ತನ್ನದೇ ನಾಗರಿಕ ವ್ಯವಸ್ಥೆಯಲ್ಲಿ, ಪರಂಪರೆಯಲ್ಲಿ ಅಭಿವೃದ್ಧಿಯಾಯಿತು ಎಂದರು.
ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ರವಿ ಎಸ್. ಮಾತನಾಡಿ, ಭಾರತೀಯ ಇತಿಹಾಸದ ನೈಜತೆಯನ್ನು ಅರಿಯಲು ಪರಂಪರೆಯ ಆಳಕ್ಕೆ ಇಳಿಯಬೇಕು. ಬ್ರಿಟಿಷ್ ಆಡಳಿತಾವಧಿಯಲ್ಲಿ ತಿರುಚಿ ಬರೆದ ಇತಿಹಾಸವನ್ನು ಸಮಾಜಕ್ಕೆ ತಿಳಿಸಿ, ವೈಜ್ಞಾನಿಕ ಪುರಾವೆಗಳೊಂದಿಗೆ ಭಾರತೀಯಇತಿಹಾಸದ ಅವಲೋಕನ ಮಾಡಿ, ಸಮಾಜಕ್ಕೆ ಭಾರತದ ವೈಭವವನ್ನು ತಿಳಿಸುವ ವಿದ್ಯಾರ್ಥಿ ರಾಯಭಾರಿಗಳಾಗಬೇಕು ಎಂದರು.
ಲೇಖಕ ಡಾ. ಹರೀಶ ಜಿ. ಬಿ. ಮಾತನಾಡಿ, ಜ್ಞಾನದೊಂದಿಗೆ ಕರುಣೆಯಿರಬೇಕು. ಆಗ ಮಾತ್ರ ಪಾಂಡಿತ್ಯಕ್ಕೆ ಬೆಲೆ ಬರುವುದು. ಜ್ಞಾನಿಯ ಪಾಂಡಿತ್ಯವೆಂದರೆ ಸಮಾಜದ ಕಷ್ಟ, ನೋವು, ದುಃಖಗಳಿಗೆ ಸ್ಪಂದಿಸುವುದು. ಜ್ಞಾನದ ಸಂಕೇತ ಅಲ್ಲಮ ಪ್ರಭುವಾದರೇ, ಕರುಣೆಯ ಸಂಕೇತ ಬುದ್ಧ, ಬಸವಣ್ಣ ಎಂದು ಹೇಳಿದರು.