ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ತಾಲೂಕಿನ ಹಲವೆಡೆ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡವಿಲ್ಲದೆ ಅಡುಗೆ ಮನೆಯಲ್ಲೇ ಮಕ್ಕಳಿಗೆ ಪಾಠ, ಊಟ ವ್ಯವಸ್ಥೆ ಮಾಡಲಾಗುತ್ತಿದೆ. ಿದಕ್ಕೊಂದು ಉದಾಹರಣೆ ತಾಲೂಕಿನ ಮಾಗೊಂದಿ ಗ್ರಾಪಂ ವ್ಯಾಪ್ತಿಯ ಹೊಸಕೋಟೆ ಗ್ರಾಮದ ಅಂಗನವಾಡಿ ಕೇಂದ್ರ.ಇಲ್ಲಿ ಸಣ್ಣ ಅಡುಗೆ ಕೋಣೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಅದೂ ಸಹ ಶಿಥಿಲಗೊಂಡಿರುವ ಕಾರಣ ಮಕ್ಕಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣವನ್ನು ನೀಡಲು ಸಮಸ್ಯೆ ಎದುರಾಗಿದೆ.
ಶಿಥಿಲ ಕಟ್ಟಡದಿಂದ ಸ್ಥಳಾಂತರಈ ಹಿಂದೆ ಸಹ ಸರ್ಕಾರಿ ಶಾಲೆಯ ಕಟ್ಟಡವನ್ನು ಕೇಂದ್ರಕ್ಕೆ ಬಳಕೆ ಮಾಡಲಾಗುತ್ತಿತ್ತು. ಅದು ಸಂಪೂರ್ಣವಾಗಿ ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ತಾತ್ಕಾಲಿಕವಾಗಿ ಪಕ್ಕದಲ್ಲೇ ಇದ್ದಂತಹ ಅಡುಗೆ ಕೋಣೆಗೆ ಕೇಂದ್ರವನ್ನು ಸ್ಥಳಾಂತರಿಸಲಾಯಿತು. ಗ್ರಾಮದಲ್ಲಿ ಶೀಘ್ರವಾಗಿ ಹೊಸ ಕಟ್ಟಡವನ್ನು ನಿರ್ಮಿಸಿ ಮಕ್ಕಳನ್ನು ಸ್ಥಳಾಂತರಿಸಲಾಗುತ್ತದೆ ಎಂದು ಈ ಹಿಂದಿನ ಸಿಡಿಪಿಒ ಭರವಸೆ ನೀಡಿ, ಮಕ್ಕಳನ್ನು ಸಣ್ಣ ಕೋಣೆಗೆ ಸ್ಥಳಾಂತರಿಸಿದ್ದರು. ಆದರೆ ಅದೇ ಈಗ ಕಾಯಂ ಸ್ಥಳವಾದಂತಾಗಿದೆ.
ಅಂಗನವಾಡಿ ಕೇಂದ್ರದಲ್ಲಿ ೬ ತಿಂಗಳಿಂದ ೩ ವರ್ಷದ ೨೪ ಮಕ್ಕಳು, ೩ ವರ್ಷದಿಂದ ೬ ವರ್ಷದವರೆಗಿನ ೧೦ ಮಕ್ಕಳು , ೩ ಬಾಣಂತಿಯರು ಹಾಗೂ ಿಬ್ಬರು ಗರ್ಭಿಣಿಯರು ದಾಖಲಾಗಿದ್ದಾರೆ. ನಿತ್ಯ ಕೇಂದ್ರಕ್ಕೆ ೩ ರಿಂದ ೬ ವರ್ಷದವರೆಗಿನ ೧೦ ಮಕ್ಕಳು ಹಾಜರಾಗುತ್ತಾರೆ. ಅಂಗನವಾಡಿ ಕೇಂದ್ರದ ಪೂರೈಕೆಯಾಗುವಂತಹ ಆಹಾರ ಸಾಮಾಗ್ರಿಗಳಿಗೆ ದಾಸ್ತಾನು ಮಾಡಲಿಕ್ಕೆ ಯಾವುದೇ ಪ್ರತ್ಯೇಕ ಕೊಠಡಿ ಇಲ್ಲದ ಕಾರಣ ಸಣ್ಣದಾದ ಕೊಠಡಿಯಲ್ಲಿಯೇ ದಾಸ್ತಾನು ಮಾಡಿಕೊಂಡು ಅಲ್ಲೇ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸಲಾಗುತ್ತಿದೆ.ಗ್ರಾಮಸ್ಥರ ಬೇಡಿಕೆ ಈಡೇರಿಲ್ಲ
ಗ್ರಾಮಸ್ಥರು ಮತ್ತು ಪೋಷಕರು ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡವನ್ನು ನಿರ್ಮಿಸುವಂತೆ ಮೂರು ವರ್ಷಗಳಿಂದ ಬೇಡಿಕೆ ಇಡುತ್ತಿದ್ದರೂ ಸ್ಥಳಾವಕಾಶ ಹಾಗೂ ಇತರೆ ಕಾರಣಗಳಿಂದ ನೂತನ ಕಟ್ಟಡದ ಕನಸು ಸಾಕಾರಗೊಂಡಿಲ್ಲ. ಆದ್ದರಿಂದ ಮಕ್ಕಳು ಸಣ್ಣ ಕೊಠಡಿಯಲ್ಲಿಯೇ ಪ್ರಾಣಭಯದಲ್ಲಿ ಕಾಲ ತಳ್ಳುತ್ತಿದ್ದಾರೆ. ಸಿಡಿಪಿಒ ಭರವಸೆಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದ ಕಾರಣ ಸರ್ಕಾರಿ ಶಾಲೆಯ ಕಟ್ಟಡವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ನರೇಗಾ ಯೋಜನೆಯಿಂದ ೮ ಲಕ್ಷ, ಇಲಾಖೆಯಿಂದ ೫ ಲಕ್ಷ ಹಾಕಿ ೧೩ ಲಕ್ಷದಲ್ಲಿ ನೂತನ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗುತ್ತದೆ. ನೂತನ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ತನಕ ಮಕ್ಕಳ ಹಿತ ದೃಷ್ಠಿಯಿಂದ ಬಾಡಿಗೆ ಕಟ್ಟಡವನ್ನು ಪಡೆದು ಅದರಲ್ಲಿ ಕೇಂದ್ರವನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು ಸಿಡಿಪಿಒ ಮುನಿರಾಜು.