- ಇಂದಿನಿಂದ ತಾಲೂಕಿನ 402 ಅಂಗನವಾಡಿ ಕೇಂದ್ರಗಳು ಆರಂಭ
ಚನ್ನಗಿರಿ: ಖಾಸಗಿ ಕಾನ್ವೆಂಟ್‌ಗಳನ್ನು ಮೀರಿಸುವಂತೆ ಅಂಗನವಾಡಿ ಕೇಂದ್ರಗಳಲ್ಲಿ ಪುಟಾಣಿ ಮಕ್ಕಳಿಗೆ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ದೊರೆಯುತ್ತಿದೆ. ನಿಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳಿಸಿ ಕಲಿಕಾ ಚತುರ ಪುಟಾಣಿ ಮಕ್ಕಳನ್ನಾಗಿ ರೂಪಿಸಿರಿ ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ನಿರ್ಮಲಾ ಹೇಳಿದರು.
ಅಂಗನವಾಡಿ ಪುಟಾಣಿಗಳಿಗೆ ಏ.16ರಿಂದ ಮೇ 10ರವರೆಗೆ ಬೇಸಿಗೆ ರಜೆ ನೀಡಲಾಗಿದ್ದು, ಸೋಮವಾರ ಪಟ್ಟಣದ ಜೆ.ಎಚ್.ಪಟೇಲ್ ಬಡಾವಣೆಯ 14ನೇ ಅಂಗನವಾಡಿ ಮತ್ತು ಕುರುಬರ ಬೀದಿಯ 2ನೇ ಅಂಗನವಾಡಿ ಕೇಂದ್ರಗಳಿಗೆ ಬಂದ ಪುಟಾಣಿ ಮಕ್ಕಳಿಗೆ ಸ್ವಾಗತ ಕೋರಿ, ಮಕ್ಕಳು-ಪೋಷಕರಿಗೆ ಸಿಹಿ ಹಂಚಿ ಅವರು ಮಾತನಾಡಿದರು.ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳು ಸಹಕಾರಿಯಾಗಲಿವೆ. ಮಕ್ಕಳ ಮಾನಸಿಕ, ದೈಹಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತಹ ಕಲಿಕಾ ಸಾಮಥ್ಯ, ಪೌಷ್ಠಿಕ ಆಹಾರ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಗುಣವಾಗುವಂತಹ ಚಟುವಟಿಕೆಗಳನ್ನು ಕಲಿಸುವ ಮೂಲಕ ಪುಟಾಣಿಗಳ ಪ್ರಾಥಮಿಕ ಹಂತದ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗುವಲ್ಲಿ ಅಂಗನವಾಡಿ ಕೇಂದ್ರಗಳು ಶ್ರಮಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಕೆ.ಆರ್. ಪುಪ್ಪಾವತಿ, ಭಾರತಿ ಪ್ರಸಾದ್, ಸಹಾಯಕಿ ಗಂಗಮ್ಮ, ಪುಟಾಣಿ ಮಕ್ಕಳು ಸೇರಿದಂತೆ ಮಕ್ಕಳ ಪೋಷಕರು ಹಾಜರಿದ್ದರು.
-11ಕೆಸಿಎನ್‌ಜಿ1: