ಅವಾಚ್ಯ ಶಬ್ದಗಳಿಂದ ನಿಂದನೆ । ಪಪಂ ಸಾಮಾನ್ಯ ಸಭೆ
ಅಂಬೇಡ್ಕರ್ ನಗರ ಅಂಗನವಾಡಿ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ, ತನಗೆ ಗುತ್ತಿಗೆದಾರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸದಸ್ಯ ನಾಗರಾಜ ನಾಯ್ಕ ದೂರಿದಾಗ ಹಲವು ಸದಸ್ಯರು ಗುತ್ತಿಗೆದಾರರ ಪರ ನಿಂತಾಗ ಗಲಾಟೆಯೊಂದಿಗೆ ಬುಧವಾರ ಪಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಕಾರಣವಾಯಿತು.
ಗುತ್ತಿಗೆದಾರರ ಪರ ಕೆಲ ಸದಸ್ಯರು ಬೆಂಬಲಕ್ಕೆ ನಿಂತಿರುವುದು ಉಳಿದ ಸದಸ್ಯರನ್ನು ಕೆರಳಿಸಿತು. ಕೊನೆಗೆ ಮುಖ್ಯಾಧಿಕಾರಿ ಕುಮಾರ ನಾಯ್ಕ ಮಧ್ಯಪ್ರವೇಶಿಸಿ, ಕಟ್ಟಡಕ್ಕೆ ಎಂ ಸ್ಯಾಂಡ್ ಬಳಸಬಹುದು ಎಂದು ಗದ್ದಲಕ್ಕೆ ತೆರೆ ಎಳೆದರು.ಸದಸ್ಯ ರಾಧಾಕೃಷ್ಣ ನಾಯ್ಕ ಮಾತನಾಡಿ, ಲಿಫ್ಟ್ ವಾರಕ್ಕೆರಡು ಸಲ ಹಾಳಾಗುತ್ತದೆ. ವಾಶರೂಮ್ ಸೇರಿದಂತೆ ಅವ್ಯವಸ್ಥೆ ಆಗಿದೆ. ಗುತ್ತಿಗೆದಾರ ಯಾಕೆ ಮಾಡಿಲ್ಲ. ತಕ್ಷಣ ಸರಿಪಡಿಸಬೇಕೆಂದು ಆಗ್ರಹಪಡಿಸಿದಾಗ, ಮುಖ್ಯಾಧಿಕಾರಿ ಕುಮಾರ ನಾಯ್ಕ ವಾರದೊಳಗೆ ಸರಿಪಡಿಸುವುದಾಗಿ ಭರವಸೆ ನೀಡಿದರು.
ಜಡ್ಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿ ಸರಿಯಾಗಿ ಆಗದೇ ಇರುವ ಬಗ್ಗೆ ಸದಸ್ಯೆ ಪುಷ್ಪಾ ನಾಯ್ಕ ಆಕ್ಷೇಪಿಸಿದರು.
ಸಮುದಾಯ ಸಂಘಟಕಿ ಹೇಮಾವತಿ ಭಟ್ಟ ಚರ್ಚೆಯ ವಿಷಯ ಮಂಡಿಸಿದರು. ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಮಿತ ಅಂಗಡಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಸೈಯದ ಅಲಿ ಸೈಯದ್ ಹಾಗೂ ಸದಸ್ಯರು ಇದ್ದರು.