ಬಿಎಲ್‌ಓ ಕೆಲಸದಿಂದ ಬಿಡುಗಡೆಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

KannadaprabhaNewsNetwork |  
Published : Jul 04, 2025, 11:49 PM IST
ಪೋಟೋ ಇದೆ. | Kannada Prabha

ಸಾರಾಂಶ

ಶುಕ್ರವಾರ ಶಿರಹಟ್ಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಓ ಕೆಲಸದಿಂದ ಬಿಡುಗಡೆಗೊಳಿಸುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಶಿರಹಟ್ಟಿ: ಶುಕ್ರವಾರ ಶಿರಹಟ್ಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಓ ಕೆಲಸದಿಂದ ಬಿಡುಗಡೆಗೊಳಿಸುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂರು ಅಂಗನವಾಡಿ ಕಾರ‍್ಯಕರ್ತೆಯರ ಸಂಘದ ಅಧ್ಯಕ್ಷೆ ಎ.ಎನ್.ನಾಯಕ, ಉಪಾಧ್ಯಕ್ಷೆ ವ್ಹಿ.ಬಿ.ಗದಗ, ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕುಗಳಲ್ಲಿಯ ಕಾರ್ಯಕರ್ತೆಯರನ್ನು ಬಿಎಲ್‌ಓ ಕೆಲಸದಿಂದ ಬಿಡುಗಡೆ ಮಾಡಲು ಹಲವಾರು ಬಾರಿ ತಿಳಿಸಿದರೂ ಸಹ ಬಿಡುಗಡೆ ಮಾಡಿರುವದಿಲ್ಲ. ನಮ್ಮ ಇಲಾಖೆಯ ಕೆಲಸ ಹೆಚ್ಚಾಗಿ ಮೊಬೈಲ್ ಮೂಲಕವೇ ಮಾಡುತ್ತಿರುವುದರಿಂದ, ಈ ಕೆಲಸವು ಸಹ ಮೊಬೈಲ್‌ನಲ್ಲಿಯೇ ಇರುವುದರಿಂದ ನಮಗೆ ಸಮಸ್ಯೆಯಾಗುತ್ತಿದ್ದು, ಆದ್ದರಿಂದ ಈ ಕೆಲಸದಿಂದ ಬಿಡುಗಡೆ ಮಾಡಿ ಇಲಾಖೆಯಿಂದ ಆದೇಶ ಮಾಡಿದರೂ ಸಹ ಅಂಗನವಾಡಿ ಕಾರ್ಯಕರ್ತೆಯರಿಗೆ ಬೇರೆ ಇಲಾಖೆಯ ಯಾವುದೇ ಕೆಲಸವನ್ನು ಕೊಡಬಾರದೆಂದು ಹೇಳಿದರೂ ಸಹ ನಮ್ಮ ಮೇಲೆ ಹೆಚ್ಚಿನ ಹೊರೆಯನ್ನು ಹಾಕುತ್ತೀದ್ದೀರಿ ಆದ್ದರಿಂದ ನಮ್ಮನ್ನು ಬಿಎಲ್‌ಓ ಕೆಲಸದಿಂದ ಬಿಡುಗಡೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಎಸ್.ಸಿ.ಕಿತ್ತೂರ, ಎಂ.ಎ.ಕಾಂಬಳೆ, ಎಂ.ಎಸ್. ಕಾಳಿ, ಆರ್.ಬಿ. ಮಣ್ಣೂರ, ಎಸ್.ಬಿ. ಬಣಗಾರ, ಎಸ್.ಬಿ.ಪಲ್ಲೇದ, ಎಸ್.ಎಸ್. ಮಣ್ಣೂರ, ಆರ್.ಎಸ್.ವಡವಿ, ಜಿ.ಡಿ. ಪತ್ರದ, ಕೆ.ಎನ್. ಬಡಿಗೇರ, ಎಸ್.ಎಫ್. ಮೊರಬದ, ಎಂ.ಎಚ್.ಹರಿಜನ, ಪಿ.ಎಂ.ಹೊಸಮನಿ, ಜಯಲಕ್ಷ್ಮಿ ಥೋರಾತ, ವಿನೋದಾ ಭಾವನೂರ, ಸುಧಾ ಹೇಮಗಿರಿಮಠ, ಎಂ.ಆರ್. ವಾರದ, ಸ್ನೇಹಾ ಅಂದಾನಪ್ಪನವರ, ಜೆ.ಸಿ. ತೋಟದ, ಜಿ.ಪಿ. ಕೆಂಪಣ್ಣನವರ, ಡಿ.ಕೆ.ಸನದಿ, ಎಸ್.ಎಸ್.ಚಿಲಕವಾಡ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು