ಮಕ್ಕಳಿಗೆ ಅಂಗನವಾಡಿಗಳೇ ಮೊದಲ ಪಾಠಶಾಲೆ

KannadaprabhaNewsNetwork |  
Published : Feb 26, 2026, 01:15 AM IST
25ಕೆಆರ್ ಎಂಎನ್ 4.ಜೆಪಿಜಿರಾಮನಗರ ತಾಲೂಕಿನ‌ ಕಸಬಾ ಹೋಬಳಿ ಬಸವನಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ‌ಅಂಗನವಾಡಿ ಕಟ್ಟಡವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ಮಕ್ಕಳಿಗೆ ಅಂಗನವಾಡಿಗಳೇ ಮೊದಲ ಪಾಠಶಾಲೆಯ ಅಡಿಗಲ್ಲುಗಳಾಗಿವೆ ಎಂದು‌ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು

ರಾಮನಗರ: ಮಕ್ಕಳಿಗೆ ಅಂಗನವಾಡಿಗಳೇ ಮೊದಲ ಪಾಠಶಾಲೆಯ ಅಡಿಗಲ್ಲುಗಳಾಗಿವೆ ಎಂದು‌ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ತಾಲೂಕಿನ‌ ಕಸಬಾ ಹೋಬಳಿ ಬಸವನಪುರದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ‌ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಪಠ್ಯೇತರ ಕಲಿಕೆ ಮುಖ್ಯ, ಸರ್ಕಾರ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಾ ಅವರ ಉತ್ತಮ ಆರೋಗ್ಯ ಕಾಪಾಡುವ ಜೊತೆಗೆ ಶಿಕ್ಷಣದ ಬಗೆಗೆ ಆಶಕ್ತಿ ಹೆಚ್ಚಿಸುತ್ತದೆ. ಹಾಗಾಗಿ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಸುಸಜ್ಜಿತ ಅಂಗನವಾಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಲವು ಹಳ್ಳಿಗಳ ಜನರು ಪಟ್ಟಣಕ್ಕೆ ಬಂದು ಹೋಗಲು ಬೆಂಗಳೂರು-ಮೈಸೂರು ಮುಖ್ಯ ರಸ್ತೆಗೆ ಬರಬೇಕಿದೆ. ಜೊತೆಗೆ ಆಟೋಗಳನ್ನು ಅವಲಂಬಿಸಬೇಕಿದೆ. ಈ ಬಗ್ಗೆ ಸಾರ್ವಜನಿಕರು ನನ್ನ ಗಮನ‌ ಸಹ ಸೆಳೆದಿದ್ದರು. ಹಾಗಾಗಿ ರಾಮನಗರದಿಂದ ಅರಳಿಮರದದೊಡ್ಡಿಗೆ ಮಾರ್ಚ್ 2ರಂದು ಬಸ್ಸಿನ ಸಂಚಾರಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಲಾಗುವುದು. ಇದರಿಂದ ಬಸವನಪುರ, ಅರಳಿಮರದದೊಡ್ಡಿ ಗ್ರಾಮದ ಜನರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ವೇಳೆ ಜಿಪಂ ಉಪ ಕಾರ್ಯದರ್ಶಿ (ಪ್ರಭಾರ) ಶಿವಕುಮಾರ್, ಸಿಡಿಪಿಒ ಕಾಂತರಾಜು, ಕಾಂಗ್ರೆಸ್ ‌ಮುಖಂಡರಾದ ವಿನೋದ್, ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಪ್ರಕಾಶ್, ಎಂ.ಎಚ್.ರಂಜಿತ್, ಮಾಜಿ ಸದಸ್ಯ ನಾಗರಾಜು, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ಮುಖಂಡರಾದ ಸುರೇಶ್, ವಿನೋದ್ ಬಿ.ಆರ್, ಆಂಜನಿ, ಅಂಜನೇಯ, ಸಿದ್ದರಾಜು, ನಿಂಗೇಗೌಡ, ಸತೀಶ್, ಸುರೇಶ್, ನಂದೀಶ್, ಅಜಯ್, ಪುನಿತ್, ಅರುಣ್, ಗೋವಿಂದಯ್ಯ, ಪಿಡಿಒ ಮಾದೇಗೌಡ ಮತ್ತಿತರರು‌ ಹಾಜರಿದ್ದರು.

25ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ತಾಲೂಕಿನ‌ ಕಸಬಾ ಹೋಬಳಿ ಬಸವನಪುರದಲ್ಲಿ ನಿರ್ಮಿಸಿರುವ ಸುಸಜ್ಜಿತ ‌ಅಂಗನವಾಡಿ ಕಟ್ಟಡವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಮಹಿಳೆಯರಿಗೆ ಸವಲತ್ತು ಒದಗಿಸಿ ಆರ್ಥಿಕ ಶಕ್ತಿತುಂಬಿ: ಸುಜಾತಾ
ನೂಲು ತೆಗೆಯುವ ಘಟಕದಲ್ಲಿ ಕ್ರೀಡಾಂಗಣ ನಿರ್ಮಿಸಲು ಬಿಡುವುದಿಲ್ಲ: ಪ್ರತಾಪ್‌ಸಿಂಹ