ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ಆನಿಕಾ ವಜ್ರಾಭರಣ ಅನಾವರಣ

KannadaprabhaNewsNetwork |  
Published : May 20, 2026, 02:15 AM IST
19ಮಲಬಾರ್ | Kannada Prabha

ಸಾರಾಂಶ

ಉಡುಪಿಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶಾಖೆಯಲ್ಲಿ ಮೈನ್ ಬ್ರಾಂಡಿನ ನೂತನ ವಜ್ರಾಭರಣ ಆನಿಕಾವನ್ನು ಸೋಮವಾರ ಅನಾವರಣಗೊಳಿಸಲಾಯಿತು.

ಉಡುಪಿ: ಉಡುಪಿಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶಾಖೆಯಲ್ಲಿ ಮೈನ್ ಬ್ರಾಂಡಿನ ನೂತನ ವಜ್ರಾಭರಣ ಆನಿಕಾವನ್ನು ಸೋಮವಾರ ಅನಾವರಣಗೊಳಿಸಲಾಯಿತು.

ರೂಪದರ್ಶಿಗಳಾದ ಅನುಷಾ ಕರ್ಕೇರ ಹಾಗೂ ನಿಸರ್ಗ ಅವರು ಈ ವಿನೂತನ ವಜ್ರಾಭರಣ ಆನಿಕಾವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅನುಷಾ ಕರ್ಕೇರ, ಮಲಬಾರ್ ಗೋಲ್ದ್ ನಲ್ಲಿ ವಜ್ರಾಭರಣಗಳ ಸಂಗ್ರಹ ವೈವಿಧ್ಯಮಯ ಹಾಗೂ ಆಕರ್ಷಣೀಯವಾಗಿದೆ. ಇಲ್ಲಿನ ಸಿಬ್ಬಂದಿಗಳ ಸೇವೆ ಕೂಡ ಅತ್ಯುತ್ತಮವಾಗಿದೆ. ಸಾಮಾಜಿಕ ಕಾರ್ಯದಲ್ಲೂ ಈ ಸಂಸ್ಥೆ ತೊಡಗಿಸಿಕೊಂಡಿದ್ದು, ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದರು.

ನಿಸರ್ಗ ಮಾತನಾಡಿ, ಕಳೆದ 8 - 10 ವರ್ಷಗಳಿಂದ ಮಲಬಾರ್ ಗೋಲ್ಡ್‌ನ ಗ್ರಾಹಕಿಯಾಗಿದ್ದೆನೆ. ನನಗೆ ಇಲ್ಲಿನ ಚಿನ್ನ ಹಾಗೂ ವಜ್ರಾಭರಣಗಳಲ್ಲಿ ಸಂತೃಪ್ತಿ ಇದೆ. ಈ ಹೊಸ ಉತ್ಪನ್ನ ವೈವಿಧ್ಯಮಯವಾಗಿದ್ದು, ತುಂಬಾ ಆಕರ್ಷಣೀಯವಾಗಿದೆ ಎಂದರು.ಶಾಖೆಯ ಸಿಬ್ಬಂದಿ ಹರೀಶ್ ಎಂ.ಜಿ. ಅನಿಕಾ ಬಗ್ಗೆ ಮಾಹಿತಿ ನೀಡಿ, ಈ ವಜ್ರಾಭರಣವು ನ್ಯಾಚುರಲ್ ಡೈಮಂಡ್ಸ್ ಆಗಿದ್ದು, ಇದರಲ್ಲಿ ವೈವಿಧ್ಯಮಯ ಡಿಸೈನ್‌ಗಳಿವೆ. ಸಾಕಷ್ಟು ಆಕರ್ಷಕ ರೀತಿಯ ಈ ವಜ್ರಾಭರಣವು 15 ಸಾವಿರ ರು.ನಿಂದ 15 ಲಕ್ಷ ರು.ಗಳ‍ವರೆಗಿನ ವಿವಿಧ ವಜ್ರಾಭರಣಗಳ ಸಂಗ್ರಹವು ಮಲಬಾರ್‌ನಲ್ಲಿದೆ ಎಂದು ತಿಳಿಸಿದರು.

ಉಡುಪಿ ಶಾಖಾ ಮುಖ್ಯಸ್ಥ ವಿಜಯ ಕುಮಾರ್ ಡಿ., ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮುಸ್ತಫಾ ಎ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಮತ್ತಿತರರಿದ್ದರು. ವಿಘ್ನೇಶ್ ಸ್ವಾಗತಿಸಿ, ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸುಂಟಿಕೊಪ್ಪ ಸಜ್ಜು
ದುಬಾರೆ ಆನೆ ಶಿಬಿರ ದುರಂತ: ಸೂಕ್ತ ಕ್ರಮಕ್ಕೆ ಕಾವಲು ಪಡೆ ಒತ್ತಾಯ