ಮರಿತಿಬ್ಬೇಗೌಡರ ಪರ ಅನಿಲ್ ಚಿಕ್ಕಮಾದು ಮತಯಾಚನೆ

KannadaprabhaNewsNetwork |  
Published : Jun 02, 2024, 01:45 AM IST
58 | Kannada Prabha

ಸಾರಾಂಶ

ನಾಲ್ಕು ಕೋಟಿ ಅನುದಾನವನ್ನು ಈ ಕಾಲೇಜಿನ ಅಭಿವೃದ್ಧಿಗೆ ತಮ್ಮ ಅಧಿಕಾರವಧಿಯಲ್ಲಿ ಬಿಡುಗಡೆ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲೂ ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುವುದು, ಶಿಕ್ಷಕರಿಗೆ ತೊಂದರೆಯಾದಾಗ ಸದನದಲ್ಲಿ ಮರಿತಿಬ್ಬೇಗೌಡರವರು ಎದ್ದು ನಿಂತು ಶಿಕ್ಷಕರ ಪರವಾಗಿ ಧನಿಯಾಗುತ್ತಿದ್ದರು, ಶಿಕ್ಷಕರು ಸಮಸ್ಯೆ ಪರಿಹಾರವಾಗುವವರೆಗೂ ಹೋರಾಟ ನಡೆಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ತಾಲೂಕಿನಲ್ಲಿ ಯಾವೊಬ್ಬ ಶಿಕ್ಷಕರಿಗೂ ಸಹ ಅನ್ಯಾಯವಾಗದ ರೀತಿಯಲ್ಲಿ ನಾನು ನಮ್ಮ ಕ್ಷೇತ್ರದಲ್ಲಿ ನಡೆದುಕೊಂಡಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮರಿತಿಬ್ಬೇಗೌಡರವರ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ನಾಲ್ಕು ಕೋಟಿ ಅನುದಾನವನ್ನು ಈ ಕಾಲೇಜಿನ ಅಭಿವೃದ್ಧಿಗೆ ತಮ್ಮ ಅಧಿಕಾರವಧಿಯಲ್ಲಿ ಬಿಡುಗಡೆ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲೂ ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದರು.

ಶಿಕ್ಷಕರಿಗೆ ತೊಂದರೆಯಾದಾಗ ಸದನದಲ್ಲಿ ಮರಿತಿಬ್ಬೇಗೌಡರವರು ಎದ್ದು ನಿಂತು ಶಿಕ್ಷಕರ ಪರವಾಗಿ ಧನಿಯಾಗುತ್ತಿದ್ದರು, ಶಿಕ್ಷಕರು ಸಮಸ್ಯೆ ಪರಿಹಾರವಾಗುವವರೆಗೂ ಹೋರಾಟ ನಡೆಸುತ್ತಿದ್ದರು ಎಂದರು.

ಮೊದಲ ಪ್ರಾಶಸ್ತ್ಯದ ಮತವನ್ನು ನೀಡುವಂತೆ ಕೋರಿದರು.

ಮೈಮುಲ್ ನಿರ್ದೇಶಕ ಈರೇಗೌಡ, ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ನರಸೀಪುರ ರವಿ, ಕಾವೇರ, ಶಿವಯ್ಯ, ಶಿವರಾಜು, ಬ್ಲಾಕ್ ಅಧ್ಯಕ್ಷ ಏಜಾಜ್ ಪಾಷ, ಸಿದ್ದರಾಮು, ಗಣೇಶಾಚಾರ್, ಕಾಲೇಜಿನ ಪ್ರಾಂಶುಪಾಲರಾದ ಅರುಣ್ ಕುಮಾರ್, ಉಪನ್ಯಾಸಕರಾದ ಕೆಂಪರಾಜು, ಪುಟ್ಟರಾಜು, ಪುಷ್ಪಲತಾ, ಗುರುದತ್ ಕಾಮತ್, ಪೂರ್ಣಿಮಾ, ಮಾದಮ್ಮ, ಭೈರೇಗೌಡ, ಮುಖ್ಯೊಪಾಧ್ಯಾಯಿನಿ ನಂದಿನಿ, ಶಿಕ್ಷಕರಾದ ಕೈಸರ್ ಪಾಷ, ರಾಜೇಗೌಡ, ಸಂತೋಷ್ ಕುಮಾರ್, ಎ.ಸಿ. ಭೈರಪ್ಪ, ಸ್ವಾಮಿನಾಯಕ್, ಚನ್ನಪ್ಪಾಜಿ ಇದ್ದರು.

ನಂತರ ಪಟ್ಟಣದ ಆದಿಚುಂಚನಗಿರಿ ವಿದ್ಯಾಸಂಸ್ಥೆ, ಸೆಂಟ್ ಮೇರಿಸ್ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ ಮತಯಾಚಿಸಿದರು.ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವವರ ಆಯ್ಕೆ ಮಾಡೋಣ: ಕಾಡ್ನೂರು ಶಿವೇಗೌಡ

ಕನ್ನಡಪ್ರಭ ವಾರ್ತೆ ಮೈಸೂರು

ಶಿಕ್ಷಣ ಕ್ಷೇತ್ರ, ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ನಾವು ಉಪನ್ಯಾಸಕರ, ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಅಭ್ಯರ್ಥಿ ಆಯ್ಕೆ ಮಾಡೋಣ ಎಂದು ಕರ್ನಾಟಕ ರಾಜ್ಯ ಸಾಮಾಜಿಕ ಪ್ರಗತಿ ಪರ ಸೇವಾ ವೇದಿಕೆ ಅಧ್ಯಕ್ಷ ಕಾಡ್ನೂರು ಶಿವೇಗೌಡ ಕರೆ ನೀಡಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರ, ಉಪನ್ಯಾಸಕರ ಬೇಡಿಕೆಗಳು, ಹಲವಾರು ವರ್ಷಗಳಿಂದ ಬಗೆಹರಿಯದಿಲ್ಲ. ಅವುಗಳನ್ನು ಸೃಷ್ಟಿಸಿ, ಪೋಷಿಸಿ, ಅಲ್ಪ ಸ್ವಲ್ಪ ಬಗೆಹರಿಸಿ ಇನ್ನೂ ರಕ್ಷಣಾ ಕವಚವಾಗಿ ಇರಿಸಿಕೊಂಡು ಬರಲಾಗುತ್ತಿದೆ. ಆಳುವವರ ಧೋರಣೆ, ಆಯ್ಕೆಯಾದ ಜನಪ್ರತಿನಿಧಿಗಳ ಅಸಹಾಯಕತೆ, ಗೆದ್ದ ನಂತರದ ದಿನಗಳಲ್ಲಿ ಶಿಕ್ಷಕ ಸಮುದಾಯವನ್ನು ಕಡೆಗಣಿಸಿ ದೂರವೇ ಉಳಿಯುವುದು, ಇಂತಹ ಘಟನೆಗಳು ಹಲವಾರು ಭಾರಿ ನಮ್ಮ ಶಿಕ್ಷಣ ಸಂಘಟನೆಗಳಿಗೆ ಆಗಿದೆ ಎಂದಿದ್ದಾರೆ.

ಶಿಕ್ಷಕ ಎಂದರೆ ತಾತ್ಸಾರದ ಮನೋಭಾವ ಬೆಳೆಸಿಕೊಂಡಿರುವುದು ಮನಸ್ಸಿಗೆ ಖೇದವನ್ನುಂಟು ಮಾಡುತ್ತದೆ. ಇವರೊಳಗೆ ಇದ್ದು ಆಯ್ಕೆ ಮಾಡೋಣ. ಶೈಕ್ಷಣಿಕ ಕ್ಷೇತ್ರದಲ್ಲಿ ಹತ್ತು ಹಲವು ವರ್ಷಗಳಿಂದ ಇರುವ ಸಮಸ್ಯೆಗಳು ಜೀವಂತವಾಗಿ ಉಳಿದಿವೆ. ಇವುಗಳನ್ನು ಬಗೆಹರಿಸಲು ಪ್ರಯತ್ನವನ್ನುಮಾಡುವಂತ ಅಭ್ಯರ್ಥಿಯನ್ನು, ಶಿಕ್ಷಕರ ಧ್ವನಿಯಾಗಿ ನಿಲ್ಲಬಲ್ಲ ವ್ಯಕ್ತಿಯನ್ನು ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡೋಣ ಎಂದು ಅವರು ಮನವಿ ಮಾಡಿದ್ದಾರೆ.

ಸ್ಪರ್ಧಿಸಿರುವವರಲ್ಲಿ ಯಾರು ಪ್ರಾಮಾಣಿಕವಾಗಿ, ಸದಾ ಸಕಾರಾತ್ಮಕವಾಗಿ ಸ್ಪಂದಿಸುವ ಮನೋಭಾವ ಇರಿಸಿಕೊಂಡು ಶಿಕ್ಷಕರ, ಉಪನ್ಯಾಸಕರ ಪರವಾಗಿ ಕೆಲಸವನ್ನು ಮಾಡುವ ಸೇವಾ ಮನೋಭಾವದ ಅಭ್ಯರ್ಥಿಗಳಿದ್ದರೆ ಅವರನ್ನು ನಮ್ಮ ಮನಸ್ಸಿನ ಇತರ ವಿಷಯಗಳು ಗೌಣವಾಗಿಸಿ, ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನಾವು ಮತ ಚಲಾಯಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ, ವಿದ್ಯಾರ್ಥಿ ಶಿಕ್ಷಣಕ್ಕೆ ನೆರವಾಗೋಣ ಎಂದು ವೇದಿಕೆಯ ಜಿ. ನಂಜುಂಡ, ಕಾಡ್ನೂರು ಶಿವೇಗೌಡ, ಆರ್. ರಾಜಗೋಪಾಲ್, ಚಿದಂಬರ್, ವೀರರಾಜು, ಚಂದ್ರೇಗೌಡ, ತುಳಸೀ ದಾಸ್, ಪ್ರವೀಣ್ ಮಹಿಷಿ, ಕೆಸರೆ ನಂಜುಂಡಸ್ವಾಮಿ, ಭಗವಾನ್, ಮಂಜುನಾಥ, ಲೇಪಾಕ್ಷಿಗೌಡ, ಪರಮೇಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ