ಕನ್ನಡಪ್ರಭ ವಾರ್ತೆ ಸಿಂಧನೂರು
ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಯುವತಿಯರು ಹಾಗೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರದಂತಹ ದುಷ್ಕೃತ್ಯಗಳು ನಡೆಯುತ್ತಿದ್ದು, ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಹುಬ್ಬಳ್ಳಿ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಡಹಗಲೇ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆ ಇನ್ನೂ ಹಸಿಯಾಗಿರುವಾಗಲೇ ಅದೇ ಹುಬ್ಬಳ್ಳಿಯಲ್ಲಿ ಅಂತದ್ದೇ ಇನ್ನೊಂದು ಕೃತ್ಯ ನಡೆದಿದ್ದು, ಅಂಜಲಿ ಅಂಬಿಗೇರ್ ಅವರನ್ನು ಉಳಿಸಿಕೊಳ್ಳುವಲ್ಲಿ ಪೊಲೀಸ ವ್ಯವಸ್ಥೆ ವಿಫಲವಾಗಿದೆ. ಇನ್ನು ಕೊಡಗಿನಲ್ಲಿ ಮೀನಾ ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯನ್ನು ದುಷ್ಕರ್ಮಿಯೊಬ್ಬ ಆಕೆಯ ರುಂಡವನ್ನೇ ಕಡಿದು ವಿಕೃತಿ ಮೆರೆದಿದ್ದಾನೆ. ಬೆಂಗಳೂರಿನಲ್ಲಿ ಲೇಖಕಿ ಕೆ.ಆರ್.ಸೌಮ್ಯಾ ಅವರ ಮಗಳು ಹಾಗೂ ಬಿಬಿಎ ವಿದ್ಯಾರ್ಥಿನಿ ಪ್ರುಬುಧ್ಯಾ ಎಂಬ ಯುವತಿ ಕುತ್ತಿಗೆ ಕೊಯ್ಯಲಾಗಿದೆ. ತುಮಕೂರಿನಲ್ಲಿ ರುಕ್ಸಾನ ಎಂಬ ಯುವತಿಯ ಬರ್ಬರವಾಗಿ ಕೊಲೆಗೀಡಾಗಿದ್ದಾಳೆ. ಹೀಗೆ ಸಾಲು ಸಾಲು ಸರಣಿ ಹತ್ಯೆಗಳು ನಡೆದಿದ್ದು, ಈ ಎಲ್ಲ ದುಷ್ಕೃತ್ಯಗಳು ಸಾರ್ವಜನಿಕರಲ್ಲಿ ಭಯ ಮತ್ತು ಆತಂಕ ಸೃಷ್ಟಿಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಹುಸೇನ್ಸಾಬ್, ಮಂಜುನಾಥ ಸೋಮಲಾಪುರ, ಡಿ.ಎಚ್.ಪೂಜಾರ್, ಸರಸ್ವತಿ ಪಾಟೀಲ್, ವಿರುಪಮ್ಮ ಉದ್ಬಾಳ, ಬಸವರಾಜ ಬಾದರ್ಲಿ, ಚಂದ್ರಶೇಖರ ಗೊರಬಾಳ, ಮೇಘರಾಜ, ಬಸವರಾಜ ಹಸಮಕಲ್ ಸೇರಿ ಇನ್ನಿತರರಿದ್ದರು.