ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ತಹಸೀಲ್ದಾರ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಮಹೇಶ ಕೋಳಿ ಮಾತನಾಡಿ, ಯುವತಿ ಅಂಜಲಿ ಹತ್ಯೆ ಮಾಡಿದ ಆರೋಪಿಯನ್ನು ಸಾರ್ವಜನಿಕರ ಎದರುಗಡೆ ನಿಲ್ಲಿಸಿ ಗಲ್ಲು ಶಿಕ್ಷೆ ನೀಡಬೇಕು. ಈ ಕೃತ್ಯದಿಂದ ಇಡೀ ಮಾನವಕುಲವೇ ತಲೆ ತಗ್ಗಿಸುವಂತಾಗಿದೆ. ಹತ್ಯೆಗೀಡಾದ ಅಂಜಲಿ ಅಂಬಿಗೇರ ತಂದೆ-ತಾಯಿ ಕಳೆದುಕೊಂಡು ಅಜ್ಜಿ ಮನೆಯಲ್ಲಿ ವಾಸವಾಗಿದ್ದಳು. ಸ್ವತಃ ಕೆಲಸಕ್ಕೆ ಹೋಗಿ ಮನೆ ನೆಡಸುತ್ತಿದ್ದಳು. ಈಗ ಅವಳಿಲ್ಲದೆ ಮನೆ ಅನಾಥವಾಗಿದೆ. ಸರ್ಕಾರ ಅಂಜಲಿ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಬೇಕು. ರಾಜ್ಯದಲ್ಲಿ ಪ್ರೀತಿ ನಿರಾಕರಣೆ ವಿಷಯದಲ್ಲಿ ನೆಡೆಯುತ್ತಿರುವ ಕೊಲೆಯಂತಹ ದುಷ್ಕೃತ್ಯವನ್ನು ಇಡೀ ಸಮಾಜ ಖಂಡಿಸುತ್ತದೆ. ಹತ್ಯೆಯಾದ ಅಂಜಲಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು, ಕೊಲೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಉಪಾಧ್ಯಕ್ಷ ಬಸವರಾಜ ಕೋಳಿ, ಯಮನಪ್ಪ ಹಂಚನಾಳ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಮುದಕಣ್ಣ ಅಂಬಿಗೇರ, ತಳವಾರ ಮಹಾಸಬಾ ಅಧ್ಯಕ್ಷ ಚಿನ್ನು ಅಂಬಿ, ಮಹಾಂತೇಶ ಅಂಬಿಗೇರ, ರಮೇಶ ಪಡಸಲಗಿ, ರವಿಕುಮಾರ್ ಬೆಳಗಲ್ಲ, ಸದಾಶಿವ ಹೊಸಮನಿ, ಗೋಪಾಲ ಪುಜಾರಿ, ಉಮೇಶ ಗಸ್ತಿ, ರಾಮಣ್ಣ ರಾಮೊಡಗಿ, ತೊರಗಲ್ಲ ತಳವಾರ, ವಿಜು ಮುಂಡಗನೂರ, ಅಂಜು ಅಂಬಿ, ರಮೇಶ ಹೀರೋಳಿ, ರಮೇಶ ಜಾಲಿಬೇರ, ಅಮಿತ ತಳವಾರ, ಬಾಲಪ್ಪ ಅಂಬಿಗೇರ, ಅರ್ಜುನ ಅಂಬಿಗೇರ, ಉಮೇಶ ಡಾಣಕಶಿರೂರ ಸೇರಿ ಹಲವರು ಭಾಗವಹಿಸಿದ್ದರು.