ಕನ್ನಡಪ್ರಭ ವಾರ್ತೆ ಇಂಡಿ
ಇಂಡಿ ಪಟ್ಟಣದ ಲಚ್ಯಾಣ ರಸ್ತೆಯಲ್ಲಿರುವ ಉಸ್ಮಾನಗಣಿ ಮೋಮಿನ ಮತ್ತು ಪಪ್ಪು ಮೋಮಿನ ಮತ್ತು ಇತರರು ಸೇರಿಕೊಂಡು ಮನೆಯಲ್ಲಿ ಸರ್ಕಾರದ ಅನ್ನಭಾಗ್ಯ ಆಹಾರ ಧಾನ್ಯ ಯೋಜನೆಗೆ ಬಿಡುಗಡೆ ಮಾಡಿದ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿದ್ದರು. ಈ ಅಕ್ರಮ ಪಡಿತರ ಆಹಾರಧಾನ್ಯದ ದಾಸ್ತಾನು ಕುರಿತು ಅರಿತ ಅಧಿಕಾರಿಗಳು, ದಾಳಿ ಮಾಡಿದಾಗ 89 ಚೀಲ ಅಕ್ಕಿ ತುಂಬಿದ ಪ್ಲಾಸ್ಟಿಕ್ ಕರಿ ಚೀಲಗಳು ಪತ್ತೆಯಾಗಿವೆ. ಅದರಲ್ಲಿ 5 ಅನ್ನಭಾಗ್ಯದ ಅಕ್ಕಿತುಂಬಿದ ಚೀಲಗಳು ಸಹ ಇದ್ದವು. 4 ಚೀಲಗಳಿಂದ ಒಂದು ಕೆಜಿ ಅಕ್ಕಿಯನ್ನು ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಅಕ್ಕಿತುಂಬಿಟ್ಟ ಎಲ್ಲಾ ಚೀಲಗಳು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ಇಲಾಖೆಯ ಕಂಪ್ಯೂಟರ್ ಆಪರೇಟರ್ ನಾರಾಯಣ ರಾಠೋಡ, ಎಎಸ್‌ಐ ಎಂ.ಎಸ್.ತಳವಾರ, ಪೊಲೀಸ್ ಸಿಬ್ಬಂದಿ ಎಂ.ಜಿ.ಸಾವಳೆ, ಎ.ಕೆ.ಹೆಗಡಿಹಾಳ, ಬಿ.ಜೆ.ಬಿರಾದಾರ ಹಾಗೂ ಪಂಚರು ಇದ್ದರು.