ವಿದ್ಯಾರ್ಥಿಗಳೆ ಪೋಷಕರ ಕನಸು ಸಾಕಾರಗೊಳಿಸಿ

KannadaprabhaNewsNetwork |  
Published : Feb 11, 2024, 01:51 AM IST
ಅಅಅ | Kannada Prabha

ಸಾರಾಂಶ

ವಿದ್ಯಾರ್ಥಿಗಳ ಜೀವನದ ಮಹತ್ವದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜವಾಬ್ದಾರಿ ಮೆರೆಯಬೇಕು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿದ್ಯಾರ್ಥಿಗಳ ಪಾಲಿಗೆ ಎಸ್ಎಸ್ಎಲ್‌ಸಿ ಅತ್ಯಂತ ಮಹತ್ವದ ಘಟ್ಟವಾಗಿದ್ದು ನಿಮ್ಮ ತಂದೆ, ತಾಯಿ ನಿಮ್ಮೆಲ್ಲರ ಜೀವನದ ಬಗ್ಗೆ ಕಂಡ ಕನಸು ಸಾಕಾರಗೊಳಿಸಿ ಎಂದು ಬೆಳಗಾವಿಯ ಸರ್ದಾರ್ಸ್ ಪ್ರೌಢಶಾಲೆಯ ಉಪಪ್ರಾಚಾರ್ಯ ಶಿವಶಂಕರ ಹಾದಿಮನಿ ಹೇಳಿದರು.

ನಗರದ ಕೆಎಲ್ಇ ಸಂಸ್ಥೆಯ ಗಿಲಗಂಚಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನದ ಮಹತ್ವದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜವಾಬ್ದಾರಿ ಮೆರೆಯಬೇಕು. ನಿಮ್ಮ ತಂದೆ, ತಾಯಿ ನಿಮ್ಮ ಬಗ್ಗೆ ಹಲವಾರು ಕನಸುಗಳನ್ನು ಕಂಡಿರುತ್ತಾರೆ. ಅದನ್ನು ನನಸು ಮಾಡುವ ಮಹತ್ತರ ಹೊಣೆ ನಿಮ್ಮ ಮೇಲಿದೆ. ಭವಿಷ್ಯದ ಬಗ್ಗೆ ಉತ್ತಮ ಕನಸುಗಳನ್ನು ಕಂಡು ಅದನ್ನು ಸಾಕಾರಗೊಳಿಸಿ. ಈ ಮೂಲಕ ಅವರು ನಿಮ್ಮ ಜೀವನದ ಕನಸನ್ನು ನನಸು ಮಾಡಿ. ನಿವೆಲ್ಲರೂ ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ತರಬೇಕು ಎಂದು ತಿಳಿ ಹೇಳಿದರು.ಉಪ ಪ್ರಾಚಾರ್ಯ ಎಸ್.ಆರ್. ಗದಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್ಎಸ್ಎಲ್‌ಸಿ ಪರೀಕ್ಷೆಗೆ ಬೇಕಾದ ಅಗತ್ಯ ಮುನ್ನೆಚ್ಚರಿಕೆ ಪಡೆದು ಸಾಧನೆ ಮಾಡುವಂತೆ ತಿಳಿಸಿದರು.ಶಿಕ್ಷಕಿ ಎ.ಆರ್. ಪಾಟೀಲ ಮಾತನಾಡಿ, ಗುರು - ಶಿಕ್ಷಕರ ಸಂಬಂಧ ಮೊದಲಿನಂತೆ ಇಲ್ಲ. ಅದನ್ನು ಕಾಪಾಡಿಕೊಂಡು ಹೋಗಬೇಕು. ಎಸ್‌ ಎಸ್‌ಎಲ್‌ಸಿ ಪರೀಕ್ಷೆಗೆ ಕೆಲವೇ ಕೆಲವು ಕೆಲ ದಿನಗಳು ಮಾತ್ರ ಉಳಿದಿದೆ. ಹಾರ್ಡ್ ವರ್ಕ, ನಿರಂತರ ಶ್ರಮದಿಂದ ಓದಿದರೆ ಅದರ ಫಲ ಸಿಕ್ಕೆ ಸಿಗುತ್ತದೆ. ಕಠಿಣ ಪರಿಶ್ರಮದಿಂದ ಓದಿ ಸಾಧನೆ ಮಾಡಬೇಕು. ಸತತ ಪ್ರಯತ್ನ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜೀವನದಲ್ಲಿ ಮಾನವೀಯ ಗುಣಗಳು, ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಕಿ ವಿಶಾಲಾಕ್ಷಿ. ಐ. ಅಂಗಡಿ ಮಾತನಾಡಿ, ಜೀವನದಲ್ಲಿ ಗುರಿ ಇಟ್ಟು ಅದನ್ನು ಸಾಧಿಸಲು ಪಣ ತೊಡಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿನಿ ಚೈತ್ರಾ ಕರೆಣ್ಣವರ, ಉಷಾ ರಾಠೋಡ, ಕಾವ್ಯಾಂಜಲಿ ಕಿಣೇಕರ, ಸಂಜನಾ ಹುಬ್ಬಳ್ಳಿ ಮಾತನಾಡಿದರು.

ಪ್ರಾಚಾರ್ಯ ಆರ್‌. ಎಸ್. ಪಾಟೀಲ, ಒಕ್ಕೂಟದ ಕಾರ್ಯಾಧ್ಯಕ್ಷ ಆರ್‌.ಎಂ. ಮಗದುಮ್ಮ, ವಿದ್ಯಾರ್ಥಿ ಪ್ರತಿನಿಧಿ ಸಂಪತ ಗೌಡ ಪಾಟೀಲ ಇದ್ದರು. ಪಾರ್ವತಿ ಚಿಮ್ಮಡ, ಸೀಮಾ ಕೋರೆ, ಪ್ರಭು ನಿಡೋಣಿ, ಹನುಮಂತ ವೀರಗಂಟಿ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು. ಕಾವೇರಿ ಪಟ್ಟಣ ಸ್ವಾಗತಿಸಿದರು. ರವಿ ಮುಳಕೂರ ವಂದಿಸಿದರು.

ಕೋಟ್..

ವಿದ್ಯಾರ್ಥಿಗಳ ಜೀವನದ ಮಹತ್ವದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜವಾಬ್ದಾರಿ ಮೆರೆಯಬೇಕು. ನಿಮ್ಮ ತಂದೆ, ತಾಯಿ ನಿಮ್ಮ ಬಗ್ಗೆ ಹಲವಾರು ಕನಸುಗಳನ್ನು ಕಂಡಿರುತ್ತಾರೆ. ಅದನ್ನು ನನಸು ಮಾಡುವ ಮಹತ್ತರ ಹೊಣೆ ನಿಮ್ಮ ಮೇಲಿದೆ. ಭವಿಷ್ಯದ ಬಗ್ಗೆ ಉತ್ತಮ ಕನಸುಗಳನ್ನು ಕಂಡು ಅದನ್ನು ಸಾಕಾರಗೊಳಿಸಿ.

ಶಿವಶಂಕರ ಹಾದಿಮನಿ.ಉಪಪ್ರಾಚಾರ್ಯ

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ