ಕನ್ನಡಪ್ರಭ ವಾರ್ತೆ ಕಾರ್ಕಳ
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಬಾಬುರಾಯ ಆಚಾರ್ಯ, ವಿಶ್ವಕರ್ಮರು ಸಕಲ ವಿಧ್ಯೆಯನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿ ತೋರಿಸಬೇಕು. ಕೃಷಿಕರಿಗೆ ರೈತರಿಗೆ ವಿಶ್ವಕರ್ಮ ಸಮಾಜದ ವ್ಯಕ್ತಿಯಾಗಿ ಕೃಷಿಯ ಸಾಧನೆ ಮಾಡಿ ತೋರಿಸಬೇಕು ಎಂಬುದು ನನ್ನ ಹಂಬಲ. ಅದಕ್ಕಾಗಿ ನನಗೆ ಸರ್ವರೂ ಪ್ರೋತ್ಸಾಹ ಸಹಕಾರ ನೀಡಿದ್ದು ಸಾಧನೆ ಸಾಧ್ಯವಾಗಿದೆ. ಸಂಘ ಸಂಸ್ಥೆಗಳು ನೊಂದವರು ಬಾಳಿನ ಬೆಳಕಾಗಬೇಕು ಎಂದರು.
ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ೨೦ನೇ ವರ್ಷದ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ಉಪಾಧ್ಯಕ್ಷ ಅಡಾಲಬೆಟ್ಟು ಸಂತೋಷ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕ ಹರಿಶ್ಚಂದ್ರ ಆಚಾರ್ಯ, ಹೆಬ್ರಿ ವಿಶ್ವಕರ್ಮ ಯುವ ವೃಂದದ ಗೌರವಾಧ್ಯಕ್ಷ ರಘುವೀರ ಆಚಾರ್ಯ ಗಿಲ್ಲಾಳಿ, ಗೌರವ ಸಲಹೆಗಾರ ಮಠದಬೆಟ್ಟು ಪ್ರಶಾಂತ ಆಚಾರ್ಯ, ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಗುಣ ಶಿವರಾಮ ಆಚಾರ್ಯ ಬಚ್ಚಪ್ಪು, ಯುವ ವೃಂದದ ಕಾರ್ಯದರ್ಶಿ ಅರವಿಂದ ಆಚಾರ್ಯ, ಯುವ ವೃಂದ, ವಿಶ್ವಕರ್ಮ ಸಮಾಜ ಸೇವಾ ಸಂಘ ಮತ್ತು ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಸನ್ನ ಆಚಾರ್ಯ ಮಠದಬೆಟ್ಟು ನಿರೂಪಿಸಿದರು. ಸಚಿನ್ ಆಚಾರ್ಯ ಮೇಲ್ಪೇಟೆ ಸ್ವಾಗತಿಸಿದರು.ಅರವಿಂದ ಆಚಾರ್ಯ ವಂದಿಸಿದರು.