ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಸಕ್ತ ವರ್ಷದ ಸಾಲ ಯೋಜನೆಯ ₹16,367.83 ಕೋಟಿ ವಿತರಣೆಯ ಗುರಿ ಹೊಂದಿದೆ. ಇದು ಕಳೆದ ವರ್ಷದ ವಾರ್ಷಿಕ ಸಾಲ ಯೋಜನೆಯ ಶೇ.10.90 ಪಟ್ಟು ಹೆಚ್ಚಿನ ಗುರಿಯಾಗಿದೆ. ಆದ್ಯತಾ ವಲಯಕ್ಕೆ ಒಟ್ಟು ಯೋಜನೆ ಶೇ:69.59 ರಷ್ಟು ಅಂದರೆ ₹11,389.96 ಕೋಟಿ ಮೀಸಲಿಡಲಾಗಿದೆ.
ಕೃಷಿ ವಲಯಕ್ಕೆ ಒಟ್ಟು ಯೋಜನೆ ಶೇ.51.46 ರಷ್ಟು ಅಂದರೆ ₹8422.71 ಕೋಟಿ ಮೀಸಲಿಡಲಾಗಿದೆ. ಉದ್ಯಮಿ ವಲಯಕ್ಕೆ ಒಟ್ಟು ಯೋಜನೆ ಯೋಜನೆಯ ಶೇ.16.90 ಅಂದರೆ ₹2765.48 ಕೋಟಿ ಮೀಸಲಿಡಲಾಗಿದೆ. ಶಿಕ್ಷಣ ಸಾಲ ₹53.43 ಕೋಟಿ, ವಸತಿ ಸಾಲ ₹94.07 ಕೋಟಿ ಮತ್ತು ಇತರೆ ಸಾಲ ₹28.84 ಕೋಟಿ ಸಾಲದ ಗುರಿ ಹೊಂದಲಾಗಿದೆ. ಅಗ್ರಣಿ ಬ್ಯಾಂಕ್ ಮುಖ್ಯ ಪ್ರಬಂಧಕ ಕೆ.ಸಿದ್ದಯ್ಯ ಅವರು ಕಳೆದ ಸಾಲಿನ ವಾರ್ಷಿಕ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ತಿಳಿಸಿ ಸಾಲ ಮತ್ತು ಠೇವಣಿಯ ಅನುಪಾತ ಶೇ.106 ಆಗಿದ್ದು, ಅತ್ಯುತ್ತಮ ಗುರಿ ಸಾಧನೆ ಎಂದು ತಿಳಿಸಿದರು.ಈ ವೇಳೆ ನಾಬಾರ್ಡ್ ಡಿಡಿ ವಿಕಾಸ ರಾಠೋಡ, ಕೆನರಾ ಬ್ಯಾಂಕ್ ವಿಭಾಗಿಯ ಪ್ರಬಂಧಕ ದೀಪಕಕುಮಾರ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಅಶೋಕ ಸೋಂಗರಿ, ಮುಖ್ಯ ವ್ಯವಸ್ಥಾಪಕ ವಿ.ಬಿ.ಕುಲಕರ್ಣಿ, ಎಸ್‌ಬಿಐ ಮುಖ್ಯವಸ್ಥಾಪಕ ಹರೀಶ ನಾಯಕ, ವಿನೋದ ಮಾದರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಬಂಧಕ ಅನಿಲ ಮಹಾಂಕಾಳಿ, ಡಿಸಿಸಿ ಬ್ಯಾಂಕ್ ಪ್ರಬಂಧಕ ರಮೇಶ ಹಿಟ್ಟನಹಳ್ಳಿ, ಐಸಿಐಸಿಐ ಬ್ಯಾಂಕ್ ಪ್ರಬಂಧಕ ಶಿವಪುತ್ರ ನಿಂಬಾಳ, ಸೂರ್ಯೋದಯ ಎಸ್ಎಫ್‌ಬಿ ಪ್ರಬಂಧಕ ಪ್ರದೀಪ, ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಬಂಧಕ ರವೀಂದ್ರ ಅಂಗಡಿ ಸೇರಿದಂತೆ ವಿವಿಧ ಬ್ಯಾಂಕುಗಳ ಜಿಲ್ಲಾ ಸಂಯೋಜಕರು ಮತ್ತು ಲೈನ್ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.-ರಿಷಿ ಆನಂದ, ಜಿಪಂ ಸಿಇಒ.