- ಅಧ್ಯಕ್ಷೆ ಎನ್.ಸಿದ್ದಮ್ಮ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭೆ
- - -ಮಲೇಬೆನ್ನೂರು: ಇಲ್ಲಿಗೆ ಸಮೀಪದ ಕುಂಬಳೂರಿನಲ್ಲಿ ಬುಧವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷೆ ಎನ್.ಸಿದ್ದಮ್ಮ ಅಧ್ಯಕ್ಷತೆಯಲ್ಲಿ ಜರುಗಿತು.
ಕ್ಷೇತ್ರಾಧಿಕಾರಿ ಲೋಕೇಶ್ ನಾಯ್ಕ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಎರಡೂವರೆ ಲಕ್ಷ ಅನುದಾನದಲ್ಲಿ ಮಾರ್ಚ್ ೨೦೨೫ಕ್ಕೆ ಎಲ್ಲ ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಲಾಗಿದೆ. ಸರ್ಕಾರ ಅಪೆಕ್ಸ್ ಬ್ಯಾಂಕ್ ಮೂಲಕ ಸಹಕಾರ ಸಂಘಗಳ ಠೇವಣಿ ಮಾಡಿದ ಹಣದಿಂದಲೇ ರೈತ ಸದಸ್ಯರಿಗೆ ಸಾಲ ವಿತರಿಸಲಾಗುತ್ತದೆ. ಹರಿಹರ ತಾಲೂಕಲ್ಲಿ ಕಳೆದ ಸಾಲಿನಲ್ಲಿ ₹೬೦ ಕೋಟಿ ಸಾಲ ವಿತರಿಸಿದ್ದು, ಕುಂಬಳೂರು ಸಂಘವು ಪ್ರತಿ ವರ್ಷವೂ ₹7 ಕೋಟಿ ವ್ಯವಹಾರ ನಡೆಸುತ್ತಿದೆ ಎಂದರು.ಸಂಘದ ನಿರ್ದೇಶಕ ಎನ್.ಲೋಕೇಶ್ ೨೦೨೪- ೨೫ನೇ ಸಾಲಿನ ಜಮಾ ಖರ್ಚು ವಿವರ ಮಂಡಿಸಿದುರ. ಕಿಸಾನ್ ಕ್ರೆಡಿಟ್ ಸಾಲ ₹5 ಕೋಟಿ, ತೋಟಗಾರಿಕಾ ಅಭಿವೃದ್ಧಿ ಸಾಲ ₹1 ಕೋಟಿ ನೀಡಲಾಗಿದೆ. ಸಂಘವು ₹೪.೮೭ ಲಕ್ಷ ನಿವ್ವಳ ಲಾಭದಲ್ಲಿದೆ. ಸಾಲ ಮನ್ನಾ ಬಾಕಿ ಸರ್ಕಾರದಿಂದ ಬಂದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.
ಸಹಕಾರ ಸಂಘ ಉಪಾಧ್ಯಕ್ಷ ಧರ್ಮರಾಜ್ ಲೆಕ್ಕ ಪರಿಶೋಧನಾ ವರದಿ ಓದಿದರು. ನಿರ್ದೇಶಕ ಎಸ್. ಮಂಜುನಾಥ್ ಜಿಲ್ಲಾ ಕೇಂದ್ರ ಬ್ಯಾಂಕ್‌ನಿಂದ ಬರುವ ಸಾಲದ ಪರಿಮಿತಿ ತಿಳಿಸಿದರು. ನಿರ್ದೇಶಕಿ ನೀಲಮ್ಮ ನೋಟಿಸ್ ಓದಿದರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಶೋಧಾ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕರಾದ ಕಡೂರು ಆಂಜನೇಯ, ಕೆ.ಜಿ. ಕರಿಬಸಪ್ಪ, ಡಿ.ಕರಿಬಸಪ್ಪ ಇದ್ದರು.ರೈತರಾದ ಎಚ್.ಶಂಭುಲಿಂಗಪ್ಪ, ಡಿ.ಆಂಜನೇಯ, ಆನಂದಪ್ಪ, ಚಿಕ್ಕಣ್ಣ, ಸದಾನಂದ, ಕಾಮರಾಜ್, ಲಿಂಗನಗೌಡ ಚರ್ಚೆಯಲ್ಲಿ ಭಾಗಿಯಾದರು.
- - --ಚಿತ್ರ-೧ಜೆಪಿಜಿ: