ಮಾಲೇಕಲ್ ತಿರುಪತಿಯಲ್ಲಿ ಶ್ರೀ ಚಂದ್ರಶೇಖರ ಭಾರತಿ ಐಟಿಐ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಗರಿಕರಿಗೆ ಐಟಿಐ ಕುರಿತು ತಪ್ಪು ಕಲ್ಪನೆ ಇರುವುದಾಗಿ ತಿಳಿಸಿ, ಇಂಜಿನಿಯರಿಂಗ್ ಡಿಪ್ಲೊಮಾ ಇಲ್ಲದಿದ್ದಾಗ ಮಾತ್ರ ಐಟಿಐ ಎನ್ನುವ ಭಾವನೆ ತಪ್ಪು. ಕೈಗಾರಿಕಾ ಘಟಕಗಳು, ಫ್ಯಾಕ್ಟರಿಗಳಲ್ಲಿ ಐಟಿಐ ಅಪ್ರೆಂಟಿಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಿಷನರಿಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಭವಿಷ್ಯವಿದೆ. ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡಿದಾಗ ಮಾತ್ರ ತೃಪ್ತಿ ಸಿಗುತ್ತದೆ ಹಾಗೂ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅರಸೀಕೆರೆ: ನಾವು ಮಾಡುವ ಯಾವುದೇ ಕೆಲಸವನ್ನು ಆತ್ಮಪೂರ್ವಕವಾಗಿ ಗೌರವಿಸಿ ಮಾಡಿದಾಗ ಬದುಕು ಹಸನಾಗುತ್ತದೆ ಎಂದು ಶ್ರೀ ಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕಲ್ಯಾಡಿ ಹಿರಿಯಣ್ಣಯ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಮಾಲೇಕಲ್ ತಿರುಪತಿಯಲ್ಲಿ ಶ್ರೀ ಚಂದ್ರಶೇಖರ ಭಾರತಿ ಐಟಿಐ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಗರಿಕರಿಗೆ ಐಟಿಐ ಕುರಿತು ತಪ್ಪು ಕಲ್ಪನೆ ಇರುವುದಾಗಿ ತಿಳಿಸಿ, ಇಂಜಿನಿಯರಿಂಗ್ ಡಿಪ್ಲೊಮಾ ಇಲ್ಲದಿದ್ದಾಗ ಮಾತ್ರ ಐಟಿಐ ಎನ್ನುವ ಭಾವನೆ ತಪ್ಪು. ಕೈಗಾರಿಕಾ ಘಟಕಗಳು, ಫ್ಯಾಕ್ಟರಿಗಳಲ್ಲಿ ಐಟಿಐ ಅಪ್ರೆಂಟಿಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಿಷನರಿಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಭವಿಷ್ಯವಿದೆ. ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡಿದಾಗ ಮಾತ್ರ ತೃಪ್ತಿ ಸಿಗುತ್ತದೆ ಹಾಗೂ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಐಟಿಐ ಕೇಂದ್ರ ಯೋಜನೆಯಾಗಿದ್ದು, ಸ್ವಉದ್ಯೋಗಕ್ಕೂ ಹೆಚ್ಚಿನ ಅವಕಾಶಗಳಿವೆ ಎಂದು ತಿಳಿಸಿದರು. ವಾಟ್ಸ್ಯಾಪ್, ಫೇಸ್‌ಬುಕ್‌ಗಳಿಗೆ ಹೆಚ್ಚು ಸಮಯ ಕೊಡುವ ಬದಲು ಕರ್ತವ್ಯಕ್ಕೆ ಆದ್ಯತೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಗುಣಮಟ್ಟದ ಉತ್ಪಾದನೆಗೆ ಜಪಾನ್ ಮತ್ತು ಜರ್ಮನಿ ಉದಾಹರಣೆಯಾಗಿದ್ದರೆ, ಭಾರತವೂ ಇಂದು ಆ ಸ್ಥಾನದಲ್ಲಿ ನಿಂತಿದೆ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಿರಿಯಣ್ಣಯ್ಯ ಹಾರೈಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.