ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪೌರ ಕಾರ್ಮಿಕರ ಕಲ್ಯಾಣನಿಧಿ ಬಳಕೆ ವಿಚಾರವಾಗಿ ಮಾತನಾಡಿ, ಅಗತ್ಯ ಫಲಾನುಭವಿಗಳನ್ನು ಸರಿಯಾಗಿ ಗುರುತಿಸುತ್ತಿಲ್ಲ. ಕೆಲಸ ಮಾಡದವರಿಗೆ ಹಣ ಮಂಜೂರು ಮಾಡಲಾಗುತ್ತಿದೆ. ಆದ್ದರಿಂದ ಸರ್ವ ಸದಸ್ಯರೊಂದಿಗೆ ಚರ್ಚಿಸಿ ನಂತರ ಫಲಾನುಭವಿಗಳನ್ನು ಗುರುತಿಸಲಿ ಎಂದು ಸಭೆಯ ಗಮನಕ್ಕೆ ತಂದರು.
ಇಂದಿರಾ ಕ್ಯಾಂಟಿನ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಆದರೆ ನಿಗದಿತ ಸಮಯದಲ್ಲಿ ತಿಂಡಿ, ಊಟ ನೀಡುತ್ತಿಲ್ಲ ಎಂದು ದೂರುಗಳಿವೆ. ಪಟ್ಟಣದಲ್ಲಿ ಕ್ಯಾಂಟೀನ್ ಜತೆಗೆ ಪ್ರಾರಂಭಿಸಿ ೫ ವರ್ಷ ಪೂರೈಸಿಲ್ಲ. ಆಗಲೇ ದುರಸ್ತಿಗೆ ಹಣ ವೆಚ್ಚ ಮಾಡಬೇಕೆನ್ನುವುದು ಎಷ್ಟು ಸರಿ ಎಂದು ಸದಸ್ಯೆ ಸುಧಾನಳಿನಿ ಪ್ರಶ್ನಿಸಿದರು. ಸೂಕ್ತ ಪರಿಶೀಲನೆ ನಡೆಸಿ ಅಧಿಕಾರಿಗಳು ಮತ್ತು ಸದಸ್ಯರು ಕ್ರಮಕೈಗೊಳ್ಳಿ, ಅಗತ್ಯ ಇದ್ದಲ್ಲಿ ಬೇರೆಯವರಿಗೆ ಟೆಂಡರ್ ಕರೆದು ಬದಲಿಸುವಂತೆ ಶಾಸಕರು ಸಲಹೆ ನೀಡಿದರು.೧೫ನೇ ಹಣಕಾಸು ಯೋಜನೆಯಡಿ ೬೫ ಲಕ್ಷ ರು.ಗೆ ಕಸ ವಿಂಗಡಣೆ ಮತ್ತು ಸಮರ್ಪಕ ವಿಲೇವಾರಿಗಾಗಿ ಟೆಂಡರ್ ಕರೆದು ಒಪ್ಪಿಸುವ ಹಾಗೂ ಕಡಿಮೆ ಮೊತ್ತಕ್ಕೆ ಕುಡಿಯುವ ನೀರಿನ ಶುದ್ಧೀಕರಣಕ್ಕೆ ರಾಸಾಯನಿಕ ಪೂರೈಕೆ ವಿಚಾರವಾಗಿ ಕಾನೂನಿನ ನಿಯಮಾನುಸಾರ ನೀಡುವಂತೆ ತೀರ್ಮಾನಿಸಲಾಯಿತು. ಪಟ್ಟಣದ ಒಳಗಿರುವ ಬಿಎಚ್ ರಸ್ತೆ ವಾಹನ ದಟ್ಟ ಸಂಚಾರ ಇದ್ದು, ದ್ವಿಮುಖ ರಸ್ತೆಯಾಗಿ ಅಗಲೀಕರಣಗೊಳಿಸುವ ಕಾಮಗಾರಿ ಪ್ರಾರಂಭಿಸಲಾಗುವುದು. ಹೇಮಾವತಿ ವೃತ್ತದ ಆಂಜನೇಯ ರೈಸ್‌ಮಿಲ್ ಸಮೀಪ ಅಂಡರ್‌ಪಾಸ್‌ನಿಂದ ಪಶುವೈದ್ಯಕೀಯ ಆಸ್ಪತ್ರೆ ಮುಂಭಾಗದ ರಸ್ತೆ ವಿಭಜಕಕ್ಕೆ ಸಂಪರ್ಕಿಸಲಾಗುವುದು. ನಂತರ ರೈಲ್ವೇ ನಿಲ್ದಾಣದ ಮುಂಭಾಗದ ಬೈಪಾಸ್ ಅಗಲೀಕರಣಗೊಳಿಸಿ ದ್ವಿಮುಖ ರಸ್ತೆಯನ್ನಾಗಿಸಿ ಹಾಸನ ಕಡೆಗಿನ ರೈಲ್ವೇ ಮೇಲ್ಸೇತುವೆವರೆಗೂ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದರು. ಉದ್ಯಾನವನ ಅಭಿವೃದ್ಧಿ, ಯೋಗಭವನ ಮೇಲೆ ಶೀಟ್ ಅಳವಡಿಸುವ ಕಾಮಗಾರಿ, ಪತ್ರಿಕಾ ಭವನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅಸ್ತು ಎನ್ನಲಾಯಿತು. ಪುರಸಭೆಯ ೨೩ ಸದಸ್ಯರಲ್ಲಿ ಪುರಸಭಾ ಅಧ್ಯಕ್ಷ ಕೆ.ಶ್ರೀಧರ್, ಉಪಾಧ್ಯಕ್ಷೆ ಸಾವಿತ್ರಮ್ಮ ಸೇರಿದಂತೆ ಜೆಡಿಎಸ್ ಪಕ್ಷದ ೧೪ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯ, ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಅಧಿಕಾರಿಗಳಾದ ರಮೇಶ್, ಪಂಕಜ, ರುಚಿದರ್ಶಿನಿ, ಇತರರು ಇದ್ದರು.
* ಬಾಕ್ಸ್‌ನ್ಯೂಸ್: ಅಧಿಕಾರಿಗಳಿಗೆ ಎಚ್ಚರಿಕೆಲಕ್ಷಾಂತರ ರು. ಮುಂಗಡ ಹಣ ಕಟ್ಟಿ ಮಾಂಸ, ಮೀನು ಮಾರಾಟದ ಹಕ್ಕು ಪಡೆದಿರುತ್ತಾರೆ. ಎಲ್ಲೆಂದರಲ್ಲಿ ರಸ್ತೆ ಬದಿ ಅನಧಿಕೃತವಾಗಿ ಮಾಂಸ, ಮೀನು ಮಾರಾಟ ನಡೆಸಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಸೂಕ್ತ ಕ್ರಮಕೈಗೊಳ್ಳಿ ಇಲ್ಲವಾದರೆ ಅಧಿಕಾರಿಗಳ ವಿರುದ್ಧವೇ ಕ್ರಮಕ್ಕೆ ಆಗ್ರಹಿಸುವುದಾಗಿ ಖುದ್ದು ಶಾಸಕ ರೇವಣ್ಣ ಎಚ್ಚರಿಸಿದರು. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದರು.