ಸಮಾಜದ ಅನೇಕ ಪ್ರಶ್ನೆಗಳಿಗೆ ವಚನಗಳಲ್ಲಿ ಉತ್ತರ

KannadaprabhaNewsNetwork |  
Published : Aug 29, 2026, 01:30 AM IST
28ಕೆಜಿಎಫ್‌4 | Kannada Prabha

ಸಾರಾಂಶ

ಬಸವಣ್ಣನ ನೇತೃತ್ವದಲ್ಲಿ ಅಂದು ಎಲ್ಲರೂ ಒಗ್ಗೂಡಿದಂತೆ ಪ್ರಸ್ತುತ ನಾವುಗಳು ಒಗ್ಗೂಡು ಬಸವ ತತ್ವ ಅಪ್ಪಿಕೊಂಡು ಬದುಕಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ.

ನುಲಿಯ ಚಂದಯ್ಯ ಅವರ ೯೧೯ನೇ ಜಯಂತಿ ಉದ್ಘಾಟಿಸಿ ಬಾಲಕೃಷ್ಣ ಅಭಿಮತ

ಕನ್ನಡಪ್ರಭ ವಾರ್ತೆ ಕೆಜಿಎಫ್

೧೨ನೇ ಶತಮಾನದ ವಚನಗಳು ಇಂದಿಗೂ ಚೈತನ್ಯ ಕಳೆದುಕೊಂಡಿಲ್ಲ. ಸಮಕಾಲೀನ ಸಮಾಜದ ಅನೇಕ ಪ್ರಶ್ನೆಗಳಿಗೆ ಉತ್ತರ ಹೊಂದಿದೆ ಎಂದು ಕೋಲಾರ ಜಿಲ್ಲಾ ಕೋರಚ ಕೋರಮ ಸಂಘದ ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ಹೇಳಿದರು.ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿಯಲ್ಲಿ ಅಯೋಜಿಸಿದ್ದ ನುಲಿಯ ಚಂದಯ್ಯ ಅವರ ೯೧೯ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನುಲಿಯ ಚಂದಯ್ಯ ಕಾಯಕ ದಾಸೋಹಕ್ಕೆ ಮಹತ್ವದ ಸ್ಥಾನ ನೀಡಿ ಬದುಕಿ ಶ್ರಮದ ಮಹತ್ವ ಸಾರಿದ ಶ್ರೇಷ್ಠ ವಚನಕಾರ ಎಂದು ಹೇಳಿದರು.ಬಸವಾದಿ ಶರಣರ ವಚನಗಳು ಮಾನವೀಯತೆಯ ಅಧ್ಬುತ ಸಂದೇಶಗಳನ್ನು ಸಾರುತ್ತವೆ. ಬಸವಣ್ಣನ ನೇತೃತ್ವದಲ್ಲಿ ಅಂದು ಎಲ್ಲರೂ ಒಗ್ಗೂಡಿದಂತೆ ಪ್ರಸ್ತುತ ನಾವುಗಳು ಒಗ್ಗೂಡು ಬಸವ ತತ್ವ ಅಪ್ಪಿಕೊಂಡು ಬದುಕಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.ಹಿಂದೆ ಕೋರಮ ಕೋರಚ ಸಮುದಾಯವು ಮಾಡಲಾಗುತ್ತಿದ್ದ ಕೆಲಸವನ್ನು ಕೈಬಿಟ್ಟು ಅಲ್ಪಸ್ವಲ್ಪ ವ್ಯವಸಾಯವನ್ನು ಮಾಡಿಕೊಂಡು ಬರುತ್ತಿದ್ದಾರೆ. ನಮ್ಮ ಸಮುದಾಯವು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ತೀರ ಹಿಂದುಳಿದಿದ್ದು, ನಮ್ಮ ಸಮುದಾಯವನ್ನು ಎ ವರ್ಗದಿಂದ ಸಿ ವರ್ಗಕ್ಕೆ ಬದಲಾವಣೆ ಮಾಡಿರುವುದು ನೋವಿನ ವಿಚಾರವಾಗಿದೆ. ರಾಜ್ಯ ಮಟ್ಟದಲ್ಲಿ ನಾವು ಪತ್ರಿಭಟನೆಗಳನ್ನು ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಾವು ಅಲ್ಪಸಂಖ್ಯಾತ ಸಮುದಾಯವಾಗಿರುವುದರಿಂದ ನಮ್ಮನ್ನು ಸಿ ವರ್ಗದಿಂದ ಎ ವರ್ಗಕ್ಕೆ ಮರಳಿ ಸೇಪರ್ಡೆಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿವಿ.ನಾಗರಾಜ್ ಮಾತನಾಡಿ, ಸುಂದರ ಸಾರ್ಥಕ ಬದುಕಿಗಾಗಿ ಸಮಾನತೆಯ ಸಂಕಲ್ಪದೊಂದಿಗೆ ನಡೆದ ಕ್ರಾಂತಿಯೇ ಬಸವಾದಿ ಶರಣರ ಕಲ್ಯಣ ಕ್ರಾಂತಿಯಾಗಿತ್ತು. ನುಲಿ ಚಂದಯ್ಯ ಅವರು ಸಹ ಈ ಕಲ್ಯಾಣ ನಾಡು ಕಂಡ ಅಪರೂಪದ ಮಹಾನುಭಾವ ಶರಣ ಅವರಾಗಿದ್ದರು ಎಂದು ಹೇಳಿದರು.ವೆಂಕಟ್ರಮ್ ಮಾತನಾಡಿ, ೧೨ನೇ ಶತಮಾನದಲ್ಲಿ ಬಾಳಿ ಬದುಕಿನ ಗುರು ನುಲಿ ಚಂದಯ್ಯ ಅವರ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು. ಶೋಚಿತ ಸಮುದಾಯದ ಏಳ್ಗೆಗೆ ಶಿಕ್ಷಣವೇ ಅಸ್ತ್ರ ಶಿಕ್ಷಣ ಪಡೆಯುವ ಮೂಲಕ ಸಮುದಾಯ ಅಭಿವೃದ್ಧಿಯಾಗಬೇಕು ಎಂಬುದು ನಾವು ಅರಿಯಬೇಕು ಎಂದು ಹೇಳಿದರು.ನುಲಿ ಚಂದಯ್ಯ ಜಯಂತಿ ಅಂಗವಾಗಿ ಗ್ರಾಮಾಂತರ ಪ್ರದೇಶದಿಂದ ಪಲ್ಲಕ್ಕಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಕೊಂಡ್ಯೂಲಾಯಿತು. ಕಾರ್ಯಕ್ರಮದಲ್ಲಿ ಎನ್.ಜಿ.ಹುಲ್ಕೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುರಳಿಕೃಷ್ಣ, ಕೋದಂಡನ್, ಕೊತ್ತೂರು ಆನಂದ, ಮುನಿರತ್ನ ಹಾಗೂ ಇತರರು ಹಾಜರಿದ್ದರು.

೨೮ಕೆಜಿಎಫ್೪ ನುಲಿಯ ಚಂದಯ್ಯ ಅವರ ೯೧೯ನೇ ಜಯಂತಿಯನ್ನು ಸಮುದಾಯುದ ಮುಖಂಡರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲಿದೆ: ಭೀಮಣ್ಣ ನಾಯ್ಕ
ಚಿಂತಕರ ವಿಚಾರಧಾರೆ ಇಂದಿಗೂ ಪ್ರಸ್ತುತ: ಉಮೇಶ