ಮಾನವ ಶಾಸ್ತ್ರಜ್ಞ ಡಾ.ಜಾನ್ ನೇಪಿಯರ್‌ ಕೊಡವ ಅಕಾಡೆಮಿ ಅಧ್ಯಕ್ಷರ ಭೇಟಿ

KannadaprabhaNewsNetwork |  
Published : May 09, 2025, 12:31 AM IST
ಚಿತ್ರ : 8ಎಂಡಿಕೆ1 : ಮಾನವ ಶಾಸ್ತ್ರಜ್ಞ ಡಾ.ಜಾನ್ ನೇಪಿಯರ್‌ ಕೊಡವ ಅಕಾಡೆಮಿ ಅಧ್ಯಕ್ಷರ ಭೇಟಿಯಾದ ಸಂದರ್ಭ.  | Kannada Prabha

ಸಾರಾಂಶ

ವಿರಾಜಪೇಟೆಯಲ್ಲಿರುವ ನಾಚಯ್ಯ ಸ್ವಗೃಹಕ್ಕೆ ನೇಪಿಯರ್‌ ಭೇಟಿ ನೀಡಿದರು. ಕೊಡವ ಸಂಸ್ಕೃತಿ ವಿಶ್ವದಲ್ಲಿಯೇ ವಿಶಿಷ್ಟವಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಬಾಳೋಪಾಟ್ ಹಾಗೂ ಸಂಸ್ಕೃತಿ ವಿಚಾರವಾಗಿ ಆಳವಾದ ಅಧ್ಯಯನದಲ್ಲಿ ತೊಡಗಿರುವ ಆಸ್ಟ್ರೇಲಿಯಾ ದೇಶದ ಮಾನವ ಶಾಸ್ತ್ರಜ್ಞ ಜಾನ್‌ ಜೇಮ್ಸ್ ನೇಪಿಯರ್‌ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರನ್ನು ಭೇಟಿಯಾಗಿ ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿದರು.

ವಿರಾಜಪೇಟೆಯಲ್ಲಿರುವ ನಾಚಯ್ಯ ಸ್ವಗೃಹಕ್ಕೆ ಭೇಟಿ ನೀಡಿದ ನೇಪಿಯರ್, ಕೊಡವ ಸಂಸ್ಕೃತಿಯು ವಿಶ್ವದಲ್ಲಿಯೇ ವಿಶಿಷ್ಟವಾಗಿದ್ದು, ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಓರ್ವ ಪತ್ರಕರ್ತನಾಗಿ ಹಾಗೂ ಪ್ರಸ್ತುತ ಅಕಾಡೆಮಿ ಅಧ್ಯಕ್ಷರಾಗಿ ನಾಚಯ್ಯನವರ ಸೇವೆಯನ್ನು ಶ್ಲಾಘಿಸಿದರು.

ಆಸ್ಟ್ರೇಲಿಯಾ ದೇಶದ ಸಿಡ್ನಿ ಹ್ಯಾರೋಸಿಟಿಯ ಶಾಸಕರಾಗಿರುವ ಕೊಡಗು ಮೂಲದ ಚರಿಷ್ಮ ಕಲಿಯಂಡ ಅವರನ್ನು ಕಂಡು ಮಾತನಾಡುವುದಾಗಿ ಹೇಳಿದ ಇವರು, ತಾನು ಕೊಡವ ಬಾಳೋ ಪಾಟ್ ಹಾಗೂ ಕೊಡವ ಸಂಸ್ಕೃತಿಯ ವಿಚಾರವಾಗಿ ಆಸ್ಟ್ರೇಲಿಯಾದಲ್ಲಿ ಹಲವು ಲೇಖನಗಳನ್ನು ಬರೆದಿರುತ್ತೇನೆ. ಅಧ್ಯಯನ ನಿಮಿತ್ತ ಕೊಡಗಿಗೆ 2008ರಿಂದ ಬರುತ್ತಿದ್ದು ಮುಂದಿನ ದಿನಗಳಲ್ಲಿ ಪುಸ್ತಕ ಹೊರತರಲಿದ್ದೇನೆ ಎಂದರು.

ನೇಪಿಯರ್‌ ಅವರು ಈ ಪ್ರಯುಕ್ತ ಈಗಾಗಲೇ ಹಲವರಿಂದ ಮಾಹಿತಿ ಸಂಗ್ರಹಿಸಿದ್ದು, ಬಾಳೋಪಾಟ್‌ನಲ್ಲಿ ಬರುವ ಶಬ್ದಾರ್ಥ, ಗೂಡಾರ್ಥಗಳನ್ನು ಅಕಾಡೆಮಿ ಅಧ್ಯಕ್ಷರಿಂದ ತಿಳಿದುಕೊಂಡರು. ಬಾಳೋಪಾಟನ್ನು ಆಧುನಿಕ ತಂತ್ರಜ್ಞಾನದ ಮೂಲಕ ವಿಶ್ವವ್ಯಾಪಿ ಪರಿಚಯಿಸುವ ಬಗ್ಗೆ ಅಕಾಡೆಮಿ ಅಧ್ಯಕ್ಷರ ಜೊತೆ ಉತ್ಸುಕತೆ ತೋರಿದರು.

ಹಿರಿಯ ಕೊಡವ ಸಾಹಿತಿಗಳಾದ ಡಾ. ಐ.ಮಾ. ಮುತ್ತಣ್ಣ, ಡಾ. ಬೊವ್ವೇರಿಯಂಡ ನಂಜಮ್ಮಚಿಣ್ಣಪ್ಪ, ಡಾ. ಮೋಗ್ಲಿಂಗ್, ಜೆ. ರಿಕ್ಟರ್‌ ಕೊಡವ ಸಂಸ್ಕೃತಿಯ ಮೇಲೆ ಬರೆದಿರುವ ಸಾಹಿತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೇಪಿಯರ್ ಭೇಟಿಯ ಕುರುಹಾಗಿ ಕೊಡವ ಚಿಹ್ನೆಯಿರುವ ಲಾಂಛನವನ್ನು ಮಹೇಶ್ ನಾಚಯ್ಯ ನೀಡಿ ಕೃತಜ್ಞತೆ ತೋರಿದರು. ಈ ವೇಳೆ ಪ್ರಮೀಳ ನಾಚಯ್ಯ ಉಪಸ್ಥಿತರಿದ್ದು ಆತಿಥ್ಯ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ