ಕೋಮು ದುಷ್ಕೃತ್ಯ ಮಟ್ಟ ಹಾಕಲು ನಕ್ಸಲ್ ನಿಗ್ರಹ ಪಡೆಯಂತೆ ಪ್ರತ್ಯೇಕ ಪೊಲೀಸ್ ಪಡೆ: ಡಾ.ಪರಮೇಶ್ವರ್ ಘೋಷಣೆ- ಇನ್ನೆರಡು ವಾರಗಳಲ್ಲಿ ಕಾರ್ಯಾರಂಭ, ಕೋಮು ಸಂಬಂಧಿ ಪ್ರಕರಣಗಳ ವಿರುದ್ಧ ಈ ಪಡೆಗೆ ಸಂಪೂರ್ಣ ಅಧಿಕಾರಕನ್ನಡಪ್ರಭ ವಾರ್ತೆ ಮಂಗಳೂರು
ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇನ್ನೆರಡು ವಾರಗಳಲ್ಲಿ ಈ ಟಾಸ್ಕ್‌ಫೋರ್ಸ್ ಸ್ಥಾಪನೆ ಆಗಲಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಇದು ಕಾರ್ಯಾಚರಿಸಲಿದೆ. ಈ ಪಡೆಗೆ ನಕ್ಸಲ್ ನಿಗ್ರಹ ದಳದ ಪೊಲೀಸರೂ ಸೇರಿದಂತೆ ಪ್ರತ್ಯೇಕ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಐಜಿ ಶ್ರೇಣಿ ಹಾಗೂ ಅದಕ್ಕೂ ಮೇಲ್ಪಟ್ಟ ಅಧಿಕಾರಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.ಎರಡು ಜಿಲ್ಲೆಗಳಲ್ಲಿ ಎಲ್ಲೇ ಕೋಮು ದುಷ್ಕೃತ್ಯ ನಡೆದರೂ, ಕೃತ್ಯಗಳಲ್ಲಿ ಭಾಗಿಯಾದವರು ಮಾತ್ರವಲ್ಲದೆ, ಸಹಕಾರ ನೀಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಈ ಪಡೆಗೆ ಅಧಿಕಾರ ನೀಡಲಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.ಪ್ರಚೋದನಕಾರಿ ಹೇಳಿಕೆ ವಿರುದ್ಧ ಕ್ರಮ:
ಹುಟ್ಟಡಗಿಸ್ತೇವೆ:
ಕರಾವಳಿ ಸದಾ ಕಾಲ ಶಾಂತಿಯುತವಾಗಿರಬೇಕು, ಇಲ್ಲಿ ಬಂಡವಾಳ ಹೂಡಿಕೆ ಆಗಬೇಕು, ಉದ್ಯೋಗ ಸೃಷ್ಟಿಯಾಗಬೇಕೆಂದು ರಾಜ್ಯ ಸರ್ಕಾರ ಪ್ರಯತ್ನಪಡುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಕನ್ನಡಕ್ಕೆ ಇಷ್ಟಪಟ್ಟು ಜನರು ಬರುತ್ತಿದ್ದರು. ಮತ್ತೆ ಅಂತಹ ನಾಡನ್ನು ಕಟ್ಟಬೇಕಿದೆ ಎಂದರು.
----------
ಕೊಲೆಯಾದ ಸುಹಾಸ್ ಶೆಟ್ಟಿಯು ಕೊಲೆ ಪ್ರಕರಣ ಸೇರಿದಂತೆ 5 ಗಂಭೀರ ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿದ್ದ. ಒಂದು ಪಕ್ಷಕ್ಕೆ ಸೇರಿದವರು (ಬಿಜೆಪಿ) ರೌಡಿ ಶೀಟರ್ ಒಬ್ಬನನ್ನು ಹೀರೋ ಮಾಡಿದ್ದಾರೆ. ಹಾಗೆ ಮಾಡುವಾಗ ಆತ ರೌಡಿ ಶೀಟರ್ ಎಂಬುದು ಗೊತ್ತಿರಬೇಕಿತ್ತು. ಆದರೆ ರಾಜ್ಯ ಸರ್ಕಾರ, ನಾವು ಆ ಥರ ಮಾಡಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.