ಬರಗಾಲ, ಕ್ಷಾಮಕ್ಕೆ ಸರ್ಕಾರದ ಜನವಿರೋಧಿ ನೀತಿ ಕಾರಣ

KannadaprabhaNewsNetwork |  
Published : Oct 16, 2023, 01:46 AM IST
ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಶರಬಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಮಾತನಾಡಿದರು. | Kannada Prabha

ಸಾರಾಂಶ

ವಾಡಿಕೆಗಿಂತ ಮಳೆ ಕಡಿಮೆ ಆದ ಸಂದರ್ಭದಲ್ಲಿ ಉಂಟಾಗುವ ಬರಗಾಲ, ಕ್ಷಾಮ ಹಾಗೂ ಆಹಾರ ಆಭಾವಗಳಿಗೆ ಸರ್ಕಾರಗಳ ಜನ ವಿರೋಧಿ ಧೋರಣೆಗಳೇ ಕಾರಣ. ಸರ್ಕಾರಗಳು ವೈಫಲ್ಯ ಮರೆಮಾಚಲು ಪ್ರಕೃತಿಯನ್ನು ದೂಷಿಸುತ್ತಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಹೇಳಿದರು.

ಕನ್ನಡಪ್ರಭ ವಾರ್ತೆ ಶಹಾಪುರ ವಾಡಿಕೆಗಿಂತ ಮಳೆ ಕಡಿಮೆ ಆದ ಸಂದರ್ಭದಲ್ಲಿ ಉಂಟಾಗುವ ಬರಗಾಲ, ಕ್ಷಾಮ ಹಾಗೂ ಆಹಾರ ಆಭಾವಗಳಿಗೆ ಸರ್ಕಾರಗಳ ಜನ ವಿರೋಧಿ ಧೋರಣೆಗಳೇ ಕಾರಣ. ಸರ್ಕಾರಗಳು ವೈಫಲ್ಯ ಮರೆಮಾಚಲು ಪ್ರಕೃತಿಯನ್ನು ದೂಷಿಸುತ್ತಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಹೇಳಿದರು. ತಾಲೂಕಿನ ರಸ್ತಾಪೂರದ ಶರಬಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯಾದ್ಯಂತ ತೀವ್ರ ಬರಗಾಲವು ರಾಜ್ಯದ ಜನತೆಯನ್ನು ಬಾಧಿಸುತ್ತಿರುವಾಗ ಸಮರೋಪಾದಿಯಲ್ಲಿ ಬರಗಾಲ ಪರಿಹಾರ ಮಾಡಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಅಧ್ಯಯನ ಪ್ರವಾಸದ ನೆಪದಲ್ಲಿ ಕಾಲಹರಣ ಮಾಡುತ್ತಿವೆ. ಬರಗಾಲ ಪರಿಹಾರದಕ್ರಮವಾಗಿ ಉದ್ಯೋಗ ಖಾತರಿ ಕೆಲಸ, ರೇಷನ್ ವಿತರಣೆಯಲ್ಲಿ ಹೆಚ್ಚಳ, ಮೇವು, ಕುಡಿಯುವ ನೀರು ಒದಗಿಸುವ ಕೆಲಸವನ್ನು ನಿರ್ಲಕ್ಷಿಸುತ್ತಿವೆ ಎಂದರು. ಪ್ರಕೃತಿ ದೂಷಿಸುತ್ತಾ, ಕಾಲಹರಣ ಮಾಡುವುದು ನಾಗರಿಕ ಸರ್ಕಾರಗಳಿಗೆ ಶೋಭೆ ತರುವುದಿಲ್ಲ. ಅಣೆಕಟ್ಟುಗಳಲ್ಲಿ ನೀರಿಲ್ಲದೇ ನೀರಾವರಿ ಪ್ರದೇಶಗಳಲ್ಲಿ ಬೆಳೆ ಒಣಗುತ್ತಿದೆ. ಮಳೆ ಆಶ್ರಿತ ಪ್ರದೇಶದಲ್ಲಿ ಗುಳೆ ಹೋಗುವ ಪರಿಸ್ಥಿತಿ ಉದ್ಭವವಾಗಿದೆ. ಉದ್ಯೋಗ ಖಾತರಿ ಹಾಗೂ ಸಾರ್ವತ್ರಿಕ ಪಡಿತರ ವ್ಯವಸ್ಥೆ ಎಲ್ಲರಿಗೂ ದೊರಕಿಸಲು ರಾಜ್ಯಾದ್ಯಂತ ರೈತ ಸಂಘ ಹೋರಾಟ ನಡೆಸಲಿದೆ ಎಂದರು. ರಾಜ್ಯ ಉಪಾಧ್ಯಕ್ಷ ಯು. ಬಸವರಾಜ ಮಾತನಾಡಿ, ರೈತಾಪಿ ಬೇಸಾಯ ಪದ್ಧತಿಯನ್ನು ಕಡೆಗಣಿಸಿ, ಕಂಪನಿ ಬೇಸಾಯ ಪದ್ಧತಿ ಜಾರಿ ಮಾಡುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಕೃಷಿ ಭೂಮಿ ರೈತರ ಕೈಯಲ್ಲಿ ಉಳಿದರೆ ಮಾತ್ರ ದೇಶದ ಜನರಿಗೆ ಆಹಾರದ ಭದ್ರತೆ. ಇಲ್ಲದಿದ್ದರೆ ಭಾರತವು ಹಸಿವಿನ ಸಾಮ್ರಾಜ್ಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೇಗುಂದಿ, ಭೀಮರಾಯ ಪೂಜಾರಿ, ಎಸ್.ಎಂ. ಸಾಗರ್, ಮಲ್ಲಣ್ಣಗೌಡ, ಎಚ್.ಆರ್. ನವೀನ್ ಕುಮಾರ್, ಶಾಂತಾ ರಾಮ ನಾಯಕ, ಜಿ. ನಾಗರಾಜ, ಎನ್.ಎಲ್. ಭರತ್‌ ರಾಜ್, ಡಾ.ಸಾಯಬಣ್ಣ ಗುಡುಬಾ ಸೇರಿದಂತೆ ಇತರರಿದ್ದರು. ---------- 15ವೈಡಿಆರ್3 ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಶರಬಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಮಾತನಾಡಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ