ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಮ್ಮಣಗಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆಯ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಬಿಗರ ಚೌಡಯ್ಯನವರ ಕುಲಬಾಂಧವರನ್ನು ನೋಡುವುದು ಬಹಳ ಸಂತೋಷವಾಗುತ್ತದೆ. ಅತ್ಯಂತ ಕಠಿಣ ಪರಿಶ್ರಮ ಪಡುವ ಕುಲ ಅದು. ಬಹಳಷ್ಟು ಸಾಹಸಮಯವಾಗಿ ಬದುಕು ನಡೆಸುವುದು ಅಂಬಿಗರ ಸಮುದಾಯ, ಬದುಕಿನ ಮೇಲೆ ಬಹಳ ವಿಶ್ವಾಸ ಇಟ್ಟವರು. ಹಡಗನ್ನು ನದಿಗೆ ಹಾಕಿದಾಗ ಅದು ದಡಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವ ವಿಶ್ವಾಸ ನಾವಿಕ ಇಟ್ಟುಕೊಂಡಿರುತ್ತಾನೆ. ಅಲ್ಲದೆ ಗಾಳ ಹಾಕಿದರೆ ಇಂದು ಮೀನು ಸಿಗದಿದ್ದರೂ ನಾಳೆ ಸಿಗುತ್ತದೆ ಎನ್ನುವ ನಂಬಿಕೆಯಿಂದ ಬದುಕುವ ಸಮುದಾಯ. ಈ ಸಮುದಾಯ ಮುಂದೆ ಬರಬೇಕು ಎಂದು ಹೇಳಿದರು.ಜ್ಞಾನದಿಂದ ಶಕ್ತಿ:ಒಂದು ಕಾಲದಲ್ಲಿ ಭೂಮಿ ಇದ್ದವರು ಜಗತ್ತು ಆಳಿದರು. ಅಲೆಕ್ಸಾಂಡರ್ ಜಗತ್ತನ್ನೇ ಆಳಬಯಸಿದ, ನಂತರ ಬ್ರಿಟಿಷರು ಅವರ ಬಳಿ ದುಡ್ಡಿತ್ತು, ಅವರು 139 ದೇಶ ಆಳಿದರು. 21ನೇ ಶತಮಾನದಲ್ಲಿ ಜ್ಞಾನ ಇದ್ದವರು ಜಗತ್ತು ಆಳುತ್ತಾರೆ. ನಿಮ್ಮ ಕಠಿಣ ಪರಿಶ್ರಮದ ಜೊತೆಗೆ ಜ್ಞಾನ ಕೊಟ್ಟರೆ ಜಗತ್ತನ್ನು ಆಳುತ್ತೀರಿ. ಇಡೀ ಜಗತ್ತಿನಲ್ಲಿ ಈ ಸಮಾಜ ಜ್ಞಾನ ಪಡೆದುಕೊಳ್ಳಬೇಕು. ಶಿಕ್ಷಣವಂತರಾದರೆ ನಿಮ್ಮ ಕೈ ಯಾವಾಗಲೂ ಭೂಮಿ ನೋಡುತ್ತದೆ. ಬೇಡುವ ಕೈ ಆಕಾಶ ಕಡೆಗೆ ನೋಡುತ್ತದೆ. ನೀಡುವ ಕೈ ಭೂಮಿಯ ಕಡೆಗೆ ನೋಡುತ್ತದೆ. ಜ್ಞಾನ ಪಡೆದುಕೊಳ್ಳಿ ನಿಮಗೂ ನೀಡುವ ಶಕ್ತಿ ಬರುತ್ತದೆ ಎಂದು ಹೇಳಿದರು.