ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಭಾರತೀಯ ಸಂಸ್ಕೃತಿಯಲ್ಲಿ ಕಲೆ, ಸಾಹಿತ್ಯ, ಸಂಗೀತ, ನಾಟ್ಯ ಕಲೆಗಳಿಗೆ ವಿಶೇಷ ಪ್ರಾತಿನಿದ್ಯವಿದೆ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮಯೂರಿ ನಾಟ್ಯ ಕಲಾ ಅಕಾಡೆಮಿಯು ಭಾನುವಾರ ಹಮ್ಮಿಕೊಂಡಿದ್ದ ಮಯೂರ ನಾಟ್ಯ ಕಲಾ ಶಾಲೆಯ ವಾರ್ಷಿಕೋತ್ಸವ ಹಾಗೂ ಸಪ್ತಸ್ವರ ಸಂಗೀತ ಶಾಲೆಯ ಆರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವ ಜನ್ಮಸ್ಥಳದಲ್ಲಿ ಮಯೂರಿ ನಾಟ್ಯ ಕಲಾ ಅಕಾಡೆಮಿ ನಾಟ್ಯ ಕಲಾ ಶಾಲೆ ಹಾಗೂ ಸಂಗೀತ ಶಾಲೆ ಆರಂಭಿಸಿದೆ. ಈ ಭಾಗದ ಆಸಕ್ತ ವಿದ್ಯಾರ್ಥಿಗಳ ಕಲಿಕೆ ತುಂಬಾ ಸಹಾಯಕವಾಗಿದ್ದು, ಈ ಶಾಲೆ ಸದುಪಯೋಗ ಪಡೆದುಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಭಾರತೀಯ ಸಂಸ್ಕೃತಿಯಲ್ಲಿ ಕಲೆ, ಸಾಹಿತ್ಯ, ಸಂಗೀತ, ನಾಟ್ಯ ಕಲೆಗಳಿಗೆ ವಿಶೇಷ ಪ್ರಾತಿನಿದ್ಯವಿದೆ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮಯೂರಿ ನಾಟ್ಯ ಕಲಾ ಅಕಾಡೆಮಿಯು ಭಾನುವಾರ ಹಮ್ಮಿಕೊಂಡಿದ್ದ ಮಯೂರ ನಾಟ್ಯ ಕಲಾ ಶಾಲೆಯ ವಾರ್ಷಿಕೋತ್ಸವ ಹಾಗೂ ಸಪ್ತಸ್ವರ ಸಂಗೀತ ಶಾಲೆಯ ಆರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವ ಜನ್ಮಸ್ಥಳದಲ್ಲಿ ಮಯೂರಿ ನಾಟ್ಯ ಕಲಾ ಅಕಾಡೆಮಿ ನಾಟ್ಯ ಕಲಾ ಶಾಲೆ ಹಾಗೂ ಸಂಗೀತ ಶಾಲೆ ಆರಂಭಿಸಿದೆ. ಈ ಭಾಗದ ಆಸಕ್ತ ವಿದ್ಯಾರ್ಥಿಗಳ ಕಲಿಕೆ ತುಂಬಾ ಸಹಾಯಕವಾಗಿದ್ದು, ಈ ಶಾಲೆ ಸದುಪಯೋಗ ಪಡೆದುಕೊಳ್ಳಬೇಕು. ಶಾಸ್ತ್ರದಲ್ಲಿ ಸಂಗೀತ, ನಾಟ್ಯಕ್ಕೆ ಹೆಚ್ಚಿನ ಆದ್ಯತೆ ಇದೆ. ವಿದ್ಯಾರ್ಥಿಗಳು ಸಂಗೀತ, ನಾಟ್ಯವನ್ನು ಶ್ರದ್ಧೆಯಿಂದ ಕಲಿತು ಸಮಾಜದಲ್ಲಿ ಒಳ್ಳೆಯವರಾಗಿ ಬಾಳಬೇಕು. ಗವಾಯಿ ದಿ. ಶ್ರೀಮಂತ ಅವಟಿಯವರ ನಂತರ ಪಟ್ಟಣದಲ್ಲಿ ಸಂಗೀತ ನಿಂತು ಹೋಗಿದೆ. ಈ ವರ್ಷ ಅಕಾಡೆಮಿಯು ಸಂಗೀತ ಶಾಲೆಯನ್ನು ಆರಂಭಿಸುವ ಮೂಲಕ ಸಂಗೀತ ಕಲಿಕಾಸಕ್ತರಿಗೆ ಅವಕಾಶ ನೀಡುತ್ತಿರುವುದು ಶ್ಲಾಘನೀಯ. ಈ ಶಾಲೆ ಶಿಕ್ಷಕರು ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು ಎಂದು ಹಾರೈಸಿದರು.ನಾಟ್ಯ ಶಿಕ್ಷಕಿ ಲಕ್ಷ್ಮೀ ತೇರದಾಳಮಠ ಮಾತನಾಡಿ, ಕಳೆದ ವರ್ಷ ನಾಟ್ಯ ಶಾಲೆ ಆರಂಭಿಸಿದಾಗ ಆರಂಭದಲ್ಲಿ ಕೆಲ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಒಂದರೆಡು ತಿಂಗಳ ನಂತರ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡರು. ಎಲ್ಲ ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸಿದ ಫಲವಾಗಿ ನಾಟ್ಯವನ್ನು ಕಲಿಸಲು ನಮಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ನಾಟ್ಯ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವುದಾಗಿ ಹೇಳಿದರು.
ಡಾ.ವೀಣಾ ಗುಳೇದಗುಡ್ಡ ಮಾತನಾಡಿ, ನಮ್ಮ ಮನಸ್ಸಿಗೆ ಮಧುರತೆ ನೀಡುವುದೇ ಸಂಗೀತ. ರಾಗ, ತಾಳವಿಲ್ಲದೆ ಸಂಗೀತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಂಗೀತದ ಜೀವಾಳವೇ ರಾಗ. ಮನಸ್ಸನ್ನು ರಂಜಿಸುವುದೇ ರಾಗ, ರಾಗ ಎಷ್ಟಿವೆ ಎನ್ನುವುದು ಲೆಕ್ಕಕ್ಕಿಲ್ಲ. ಮಾನಸಿಕ ನೆಮ್ಮದಿಗೆ, ಶಾರೀರಿಕ ವೃದ್ಧಿಗೆ ಸಂಗೀತ ಬೇಕು. ನಮ್ಮ ಒತ್ತಡದ ಜೀವನಕ್ಕೆ ಸಂಗೀತ ಅವಶ್ಯಕತೆ ಇದೆ ಎಂದರು.
ನಿವೃತ್ತ ಉಪನ್ಯಾಸಕ ಕೆ.ಬಿ.ಕಡೆಮನಿ ಮಾತನಾಡಿದರು. ಸಂಗೀತ ಶಿಕ್ಷಕಿ ಶೃತಿ ಯಾದವಾಡ ಅವರು ಸಂಗೀತ ಕುರಿತು ಮಾತನಾಡಿದರು.
ಮಯೂರ ನಾಟ್ಯ ಕಲಾ ಅಕಾಡೆಮಿ ಅಧ್ಯಕ್ಷೆ ಪೂರ್ಣಿಮಾ ಚೌಧರಿ ಅಧ್ಯಕ್ಷತೆ ವಹಿಸಿದ್ದರು.
ಸಂಗೀತ ಶಿಕ್ಷಕಿ ವಿಭಾ ಕುಲಕರ್ಣಿ, ಕರುಣಾ ಬಾಬೀರೆ ಇದ್ದರು. ಮಂಜುಳಾ ಪಾಟೀಲ ವರದಿ ವಾಚಿಸಿದರು. ರೇವತಿ ವಂದಾಲಮಠ ಸ್ವಾಗತಿಸಿದರು. ಶ್ರೀದೇವಿ ಹಿರೇಮಠ ನಿರೂಪಿಸಿದರು. ರಾಜೇಶ್ವರಿ ಯರನಾಳ ವಂದಿಸಿದರು. ನಂತರ ಮಯೂರ ನಾಟ್ಯ ಶಾಲೆ ವಿದ್ಯಾರ್ಥಿಗಳಿಂದ ವಿವಿಧ ಭರತನಾಟ್ಯ ಪ್ರದರ್ಶನಗೊಂಡವು.----------
ಬಸವನಬಾಗೇವಾಡಿ ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಯೂರ ನಾಟ್ಯ ಕಲಾ ಶಾಲೆ ವಾರ್ಷಿಕೋತ್ಸವ ಹಾಗೂ ಸಪ್ತಸ್ವರ ಸಂಗೀತ ಶಾಲೆ ಆರಂಭೋತ್ಸವ ಕಾರ್ಯಕ್ರಮವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.